Site icon TUNGATARANGA

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ/ಫೆ.28 ರಿಂದ ಮಾ.01 ರವರೆಗೆ ಕುವೆಂಪು ವಿವಿಯಲ್ಲಿ ಕಸಾಪ ದತ್ತಿ ಉಪನ್ಯಾಸ 

ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಫೆ.28 ರಿಂದ ಮಾ.01 ರವರೆಗೆ ವಿವಿಧ ದತ್ತಿನಿಧಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಫೆ.28 ರ ಬುಧವಾರ ಬೆಳಗ್ಗೆ 11:00 ಕ್ಕೆ ಕನ್ನಡ ಭಾರತಿ ವಿಭಾಗದಲ್ಲಿ ಎನ್.ಡಿ.ಸುಂದರೇಶ್ ದತ್ತಿ ಹಾಗೂ ಚನ್ನಬಸಪ್ಪ ಕಡೂರಳ್ಳಿ ದತ್ತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಾನಪದ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಉದ್ಘಾಟಿಸಲಿದ್ದು ಜಾನಪದ ಭವಿಷ್ಯದ ದಾರಿ ಕುರಿತು ಮಾತನಾಡಲಿದ್ದಾರೆ. ರೈತ ಚಳುವಳಿ ಈ ಹೊತ್ತಿನ ಸವಾಲುಗಳು ಕುರಿತು ಬೆಂಗಳೂರಿನ ಹೊಸತು ಪತ್ರಿಕೆಯ ಸಂಪಾದಕರಾದ ಸಿದ್ದನಗೌಡ ಪಾಟೀಲ್ ಮಾತನಾಡಲಿದ್ದು, ಕಸಾಪ ಅಧ್ಯಕ್ಷರಾದ ಡಿ.ಮಂಜುನಾಥ ಆಶಯ ಮಾತುಗಳನ್ನಾಡಲಿದ್ದಾರೆ. ಕುವೆಂಪು ವಿವಿ ಕನ್ನಡ ಭಾರತಿ‌ ನಿರ್ದೇಶಕರಾದ ಪ್ರೊ.ಶಿವಾನಂದ ಕೆಳಗಿನಮನಿ ಅಧ್ಯಕ್ಷತೆ ವಹಿಸಲಿದ್ದಾರೆ.

ಫೆ.29 ರ ಗುರುವಾರ ಸಂಜೆ 06:00 ಕ್ಕೆ ಸ್ನಾತಕೋತ್ತರ ಪುರುಷ ವಿದ್ಯಾರ್ಥಿ ನಿಲಯದಲ್ಲಿ ಬೇಂದ್ರೆ ಸ್ಮಾರಕ ದತ್ತಿ ಹಾಗೂ ಈರಮ್ಮ ವೀರಭದ್ರಪ್ಪ ದತ್ತಿ ಕಾರ್ಯಕ್ರಮವನ್ನು ವಿದ್ಯಾರ್ಥಿ ಕ್ಷೇಮ ಪಾಲನೆಯ ಡೀನ್ ಪ್ರೊ.ಜಿ.ಪ್ರಶಾಂತನಾಯಕ ಉದ್ಘಾಟಿಸಲಿದ್ದಾರೆ. ಕಸಾಪ ಅಧ್ಯಕ್ಷರಾದ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದು, ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎಚ್.ಬಸವರಾಜಪ್ಪ ಉಪಸ್ಥಿತರಿರುತ್ತಾರೆ. ಡಾ.ದ.ರಾ.ಬೇಂದ್ರೆ ಕವನಗಳ ಗಾಯನ ವಿಶ್ಲೇಷಣೆ ಕುರಿತು ಪತ್ರಕರ್ತ ದೀಪಕ್ ಸಾಗರ ಹಾಗೂ ಗಾಯಕಿ ಸಹನಾ.ಜಿ.ಭಟ್ ನಡೆಸಿಕೊಡಲಿದ್ದು, ಸರ್.ಎಂ.ವಿಶ್ವೇಶ್ವರಯ್ಯ ಕುರಿತು ಭದ್ರಾವತಿಯ ಸಾಹಿತಿ ಜಿ.ವಿ.ಸಂಗಮೇಶ್ವರ ಮಾತನಾಡಲಿದ್ದಾರೆ. 

ಮಾ.01 ರ ಶುಕ್ರವಾರ ಬೆಳಗ್ಗೆ 11:00 ಕ್ಕೆ ಸಮಾಜ ಕಾರ್ಯ ವಿಭಾಗದಲ್ಲಿ ಆಯೆಶಾಬಿಯಾನೆ ಖಾಸಿಂಬಿ ಅಬ್ಬಲಗೆರೆ ಹಾಗೂ ಪಿ.ಗಣಪತಿ ರಾನಡೆ ಮತ್ತು ಕಮಲಾ ರಾನಡೆ ದತ್ತಿ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ

ಡಿ.ಮಂಜುನಾಥ ಉದ್ಘಾಟಿಸಲಿದ್ದು, ಪ್ರೊ.ಜಿ.ಪ್ರಶಾಂತನಾಯಕ ಅಧ್ಯಕ್ಷತೆ ವಹಿಸಿದ್ದರು. ಸಂತ ಶಿಶುನಾಳ ಶರೀಫರ ಸಮನ್ವಯ ಚಿಂತನೆ ಕುರಿತು ನಿವೃತ್ತ ಪ್ರಾಚಾರ್ಯ ಡಾ.ಹೆಚ್.ಟಿ.ಕೃಷ್ಣಮೂರ್ತಿ ಮಾತನಾಡಲಿದ್ದಾರೆ. ಡಿವಿಜಿ ಸಾಹಿತ್ಯದಲ್ಲಿ ಜೀವನ ಮೌಲ್ಯ ಕುರಿತು ಸಾಹಿತಿ ಡಾ.ಬಿ.ಎಂ.ಜಯಶೀಲ ಮಾತನಾಡಲಿದ್ದಾರೆ.

ReplyReply allForwardYou can’t react with an emoji to a large group
Exit mobile version