Site icon TUNGATARANGA

ನಿರ್ಲಕ್ಷ್ಯ ದೋರಣೆಯ ಅಧಿಕಾರಿಗಳ ವಿರುದ್ದ ಶಾಸಕ ಅಶೋಕ್ ನಾಯ್ಕ್ ಗರಂ!

ದಾಖಲೆ ರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ
ಶಿವಮೊಗ್ಗ, ಡಿ.26:
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲೆಡೆ ಇರುವ ದಾಖಲೆ ರಹಿತ ಜನ ವಸತಿ ನಿವೇಶಗಳಿಗೆ ಜಿಲ್ಲಾಡಳಿತಗಳು ಕೂಡಲೇ ಹಕ್ಕುಪತ್ರ ನೀಡಲು ಮುಂದಾಗಬೇಕು. ಸರ್ಕಾರದ ಆದೇಶದನುಸಾರ ಎಲ್ಲರಿಗೂ ತಮ್ಮ ತಮ್ಮ ಮನೆ ನಿವೇಶನಗಳು ಅವರವರ ಹೆಸರಿಗೆ ಬದಲಾಗುವ ಮೂಲಕ ಅವುಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ತರಬೇಕೆಂದು ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಇಂದಿಲ್ಲಿ ಒತ್ತಾಯಿಸಿದರು.
ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ರಹಿತಿ ಜನವಸತಿ ನಿವೇಶನಗಳಿಗೆ ಹಕ್ಕು ದಾಖಲೆ ನೀಡುವ ಕುರಿತು ಸಮಗ್ರ ವಿವರಣೆ ನೀಡಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಸರ್ಕಾರಿ ದಾಖಲೆಗೆ ಬಾರದ ೭೪ ಜನವಸತಿ ಪ್ರದೇಶಗಳನ್ನು ಮೂರು ತಿಂಗಳೊಳಗೆ ಕಂದಾಯ ಹಾಗೂ ಗ್ರಾಮ ಠಾಣಾ ವ್ಯಾಪ್ತಿಗೆ ತರುವಂತಹ ಪ್ರಕ್ರಿಯೆ ನಡೆಯಬೇಕೆಂದು ಅಗ್ರಹಿಸಿದರು.


೧೯೦೦ರಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಕೃಷಿ ಭೂಮಿ, ಅರಣ್ಯ ಪ್ರದೇಶ ಹಾಗೂ ಜನವಸತಿ ಪ್ರದೇಶಗಳನ್ನು ಅಧಿಕೃತವಾಗಿ ಗುರುತಿಸಲಾಗಿತ್ತು. ಆಗ ಗೋಮಾಳ, ಅರಣ್ಯಪ್ರದೇಶ, ಸಂದಿ ಮೂಲೆಯ ಜಮೀನುಗಳಿಲ್ಲಿದ್ದ ಜನವಸತಿಗಳು ಬಿಟ್ಟು ಹೋಗಿದ್ದವು. ಅಂತಹ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ ೫ಮತ್ತು ೬ರಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಅವಕಾಶವನ್ನು ಬಳಿಸಿ ರಾಜ್ಯದೆಲ್ಲೆಡೆ ಯಾವ ಕಡೆಯೂ ಕಂದಾಯ ಗ್ರಾಮ ರಚನೆಯಾಗಿಲ್ಲ ಎಂದರು.


ಹಿಂದೆ ಜನತಾ ಮನೆಗಳ ಗ್ರಾಂಟ್ ಪಡೆಯಲು ತಾಂಡದಲ್ಲಿದ್ದ ಜನತೆ ಆಗ್ರಹಿಸಿದ್ದರು. ಆಗ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಹಾಗೂ ಅವಕಾಶ ಕಲ್ಪಿಸಲು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಮರು ವರ್ಷ ಅಂದರೆ ೧೯೯೪ರಲ್ಲಿ ದಾಖಲೆ ಇಲ್ಲದ ಜನವಸತಿ ಪ್ರದೇಶಗಳನ್ನು ಬದಲಿಸಿ ಜನತಾ ಮನೆ ನೀಡಲು ಮತ್ತೊಂದು ಸುತ್ತೋಲೆ ಹೊರಡಿಸಿತ್ತು. ಅದರೂ ಇದು ಅನುಷ್ಠಾನವಾಗಿಲ್ಲ. ಇದನ್ನು ಗಮನಿಸಿ ೨೦೦೫ರಲ್ಲಿ ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯ್ದೆ ಜಾರಿ ಮಾಡಿ ಅರಣ್ಯ ಭೂಮಿಯಲ್ಲಿ ನೆಲೆಗೊಂಡಿರುವ ಜನ ವಸತಿಗಳನ್ನು ರಾಜ್ಯ ಸರ್ಕಾರದ ನೀತಿಗೆ ಅನುಗುಣವಾಗಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸೂಚಿಸಿತ್ತು. ಆದರೆ ಅಧಿಕಾರಿ ವರ್ಗ ಇದನ್ನು ಜಾರಿಗೆ ಕೊಡುವುದರ ಬದಲು ಅನುಷ್ಠಾನದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದು ಹೇಳುತ್ತಾ ಕಾಲ ಕಳೆಯುತ್ತಿವೆ ಎಂದು ಆರೋಪಿಸಿದರು.


ಇದನ್ನು ಗಮನಿಸಿದ ಸರ್ಕಾರ ೨೦೧೪ರಲ್ಲಿ ನರಸಿಂಹಯ್ಯ ಸಮಿತಿ ರಚಿಸಿದ್ದು, ಅವರ ವದರಿ ಆಧಾರದಲ್ಲಿ ೨೦೧೬ರಂದು ಸಮಗ್ರ ಮಾರ್ಗಸೂಚಿಯುಳ್ಳ ಆದೇಶದಲ್ಲಿ ಸರ್ಕಾರಿ, ಖಾಸಗಿ ಅರಣ್ಯ ಭೂಮಿಗಳಲ್ಲಿ ನೆಲೆಸಿರುವ ಜನವಸತಿ ಗ್ರಾಮಗಳನ್ನಾಗಿ ಪರಿವರ್ತಿಸಿ ಹಕ್ಕುಪತ್ರಗಳನ್ನು ನೀಡಲು ಸೂಚಿಸಿತ್ತು. ಆದರೂ ಪ್ರಯೋಜನವಾಗಿಲ್ಲ ಎಂದರು.

2021 ರ ದಿನವಹಿ


ಈ ಬಗ್ಗೆ ನಾನು ೭.೧೨.೨೦೨೦ರಂದು ವಿಧಾನಸಭೆಯಲ್ಲಿ ಕಂದಾಯ ಸಚಿವರಿಗೆ ಚುಕ್ಕೆ ಗುರುತಿನ ಪ್ರಶ್ನೆಯನ್ನು ಕೇಳಿದ್ದೆ. ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ೯ ದಾಖಲೆ ರಹಿತ ಜನವಸತಿಗಳಿದ್ದು, ಅದರಲ್ಲೂ ಹಸೂಡಿ ಫಾರಂ ಗ್ರಾಮವನ್ನು ಹೊಸ ಕಂದಾಯ ಗ್ರಾಮವಾಗಿ ಘೋಷಿಸಲು ಅಂತಿಮ ಅಧಿಸೂಚನೆ ನೀಡಲಾಗಿದೆ. ಉಳಿದವುಗಳನ್ನು ಸದ್ಯದಲ್ಲೇ ಹೊಸ ಕಂದಾಯ ಗ್ರಾಮಗಳಾಗಿ ಘೋಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದರು.
ಒಟ್ಟಾರೆ ಸರ್ಕಾರ ಆದೇಶ ನೀಡಿದರೂ ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವರ್ಗ ಈ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ. ಕೂಡಲೇ ಜನ ವಸತಿ ದಾಖಲೆ ರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡುವ ಕೆಲಸ ಆರಂಭವಾಗಬೇಕಿದೆ. ಇದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದಲೇ ರಾಜ್ಯದಲ್ಲಿ ಆರಂಭಗೊಳ್ಳಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸದಸ್ಯರಾದ ವೀರಭದ್ರಪ್ಪ ಪೂಜಾರಿ, ಸೌಮ್ಯ ಭೋಜಾನಾಯ್ಕ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರತ್ನಾಕರ್ ಶಣೈ, ಪ್ರಮುಖರಾದ ಮಂಜುನಾಥ್ ನಾಗರಾಜ್ ಉಪಸ್ಥಿತರಿದ್ದರು.

Exit mobile version