Site icon TUNGATARANGA

ರಾಜ್ಯದಲ್ಲಿಂದು 12 ಬಲಿ, ಶಿವಮೊಗ್ಗದಲ್ಲಿ ಒಂದು ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾಗೆ ಗುರುವಾರ ಒಂದೇ ದಿನ ಬರೋಬ್ಬರಿ 12 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 114ಕ್ಕೇರಿಕೆಯಾಗಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ 210 ಪ್ರಕರಣಗಳು ವರದಿಯಾಗಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 7944ಕ್ಕೇರಿಕೆಯಾಗಿದೆ.
ಕಳೆದೊಂದು ದಿನದಲ್ಲಿ 179 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 4983 ಮಂದಿ ಚೇತರಿಕೆ ಕಂಡಿದ್ದಾರೆ. ಸದ್ಯ 2843 ಸಕ್ರಿಯ ಪ್ರಕರಣಗಳಿದ್ದು, 73 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಬಳ್ಳಾರಿಯಲ್ಲಿ 48, ಕಲಬುರಗಿಯಲ್ಲಿ 48, ದಕ್ಷಿಣ ಕನ್ನಡದಲ್ಲಿ 23, ರಾಮನಗರದಲ್ಲಿ 21, ಬೆಂಗಳೂರು ನಗರದಲ್ಲಿ 17, ಯಾದಗಿರಿಯಲ್ಲಿ 8, ಮಂಡ್ಯದಲ್ಲಿ 7, ಬೀದರ್ ನಲ್ಲಿ 6, ಗದಗದಲ್ಲಿ 5, ರಾಯಚೂರು, ಹಾಸನ, ಧಾರವಾಡದಲ್ಲಿ ತಲಾ 4, ದಾವಣಗೆರೆ, ಚಿಕ್ಕಮಗಳೂರಿನಲ್ಲಿ 3, ವಿಜಯಪುರ, ಉತ್ತರ ಕನ್ನಡ , ಮೈಸೂರಿನಲ್ಲಿ ತಲಾ 2, ಬಾಗಲಕೋಟೆ, ಕೊಪ್ಪಳ, ಶಿವಮೊಗ್ಗದಲ್ಲಿ ತಲಾ1 ಪ್ರಕರಣಗಳು ವರದಿಯಾಗಿವೆ. 
ಬೆಂಗಳೂರು ನಗರದ 57, 58, 39, 68, 31 ವರ್ಷದ ವ್ಯಕ್ತಿ, 40 ವರ್ಷದ ಮಹಿಳೆ, ಕೊಪ್ಪಳದಲ್ಲಿ 50 ವರ್ಷದ ಮಹಿಳೆ, ಬೆಂಗಳೂರು ನಗರದ 74,65 ವರ್ಷದ ಮಹಿಳೆ, ಬೀದರ್ ನಲ್ಲಿ 55 ವರ್ಷದ ವ್ಯಕ್ತಿ, ವಿಜಯಪುರದಲ್ಲಿ 66 ವರ್ಷದ ಮಹಿಳೆ, ಕಲಬುರಗಿಯಲ್ಲಿ 50 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ.

 ಶಿವಮೊಗ್ಗದಲ್ಲಿ ಒಂದು ಸೋಂಕು: ಇಡೀ ವಿಶ್ವವನ್ನೆ ತಲ್ಲಣಗೊಳಿಸರುವ ಕೋವಿಡ್ 19 ಕೊರೊನಾ ಸೊಂಕಿತರ ಸಂಖ್ಯೆ ಮಲೆನಾಡನ್ನ ಅದರಲ್ಲೂ ಶಿವಮೊಗ್ಗವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ದಿನೇ ದಿನೇ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಮತ್ತೆ ಒಬ್ಬರಲ್ಲಿ ಈ ಸೊಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ 106 ಗಡಿಯತ್ತ ಸಾಗಿದೆ.
ನಿನ್ನೆಯವರೆಗೆ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನಿಗಧಿತ ಆಸ್ಪತ್ರೆಯಿಂದ ಸಾಕಷ್ಟು (೬೪) ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈಗಿನ ಸಂಖ್ಯೆ 106ಕ್ಕೆ ಬಂದಿದೆ.
ನಿನ್ನೆ ಮತ್ತೆ ಪೊಲೀಸ್ ಬುಡದಲ್ಲಿ ಕಾಣಿಸಿಕೊಂಡಿದ್ದ ಸೊಂಕು ಐವರು ಹಕ್ಕಿಪಿಕ್ಕಿ ಕ್ಯಾಂಪಲ್ಲಿ ಹಾಗೂ ವಂದನಾ ಟಾಕೀಸ್ ಬಳಿಯ ವೃದ್ದರಿಬ್ಬರ ಜೊತೆ ಇವರೆಲ್ಲಾ ಕ್ವಾರಂಟೈನ್ ನಲ್ಲಿದ್ದರು ಎಂಬುದೇ ಸದ್ಯದ ಸಮಾದಾನದ ಸಂಗತಿ. ಎಚ್ಚರವಷ್ಟೆ ನಮ್ದು.
ಒಂದು ಸಾವು: ಶಿವಮೊಗ್ಗ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ಚನ್ನಗಿರಿ ಮಹಿಳೆ ಸಾವು ಶಿವಮೊಗ್ಗ ಹೆಸರಿಗೆ ದಾಖಲಾಗಿದೆ. ಆರೋಗ್ಯ ತಪಾಸಣೆಯಲ್ಲಿ ನಮ್ ಅಧಿಕಾರಿಗಳ ಮುತುವರ್ಜಿ ಹಾಗೂ ಆರೋಗ್ಯ ಇಲಾಖೆ ಕಾಳಜಿ ರಾಜ್ಯದಲ್ಲೆ ಮಾದರಿಯಾಗಿದೆ.

Exit mobile version