ಶಿವಮೊಗ್ಗ: ಕಾರ್ ಪಾರ್ಕಿಂಗ್ ವೇಳೆ ಪಕ್ಕದ ಮನೆಯವರೊಂದಿಗೆ ನಡೆದ ಗಲಾಟೆ ಕಾರ್ಪೋರೇಟರ್ ಅನಿತಾ ರವಿಶಂಕರ್ ಅವರ ಪುತ್ರನ ಮೂಗಿಗೇ ಸಂಚಕಾರ ತಂದ ಘಟನೆ ವರದಿಯಾಗಿದೆ.
ಅನಿತಾ ರವಿಶಂಕರ್ ಮಗ ಆಕಾಶ್ ಹಾಗೂ ಪಕ್ಕದ ಮನೆಯವರೊಂದಿಗೆ ಕಾರ್ ಪಾರ್ಕಿಂಗ್ ವಿಚಾರಕ್ಕೆ ಗಲಾಟೆಯಾಗಿದೆ. ಈ ಜಗಳ ವಿಕೋಪಕ್ಕೆ ಹೋಗಿ ಹೊಯ್‌ಕೈ ನಡೆದು ಕೊನೆಗೆ ಪಕ್ಕದ ಮನೆಯ ಹುಡುಗ ಆಕಾಶ್ ಅವರ ಮೂಗು ಕಚ್ಚಿದ್ದಾರೆಂದು ಹೇಳಲಾಗಿದೆ. ಇದರಿಂದ ಆಕಾಶ್ ಮೂಗಿನ ಮುಂಭಾಗ ಬೇರ್ಪಟ್ಟಿದೆ ಎನ್ನಲಾಗಿದೆ.
ಪಕ್ಕದ ಮನೆಯವರು ತಮ್ಮ ವಾಹನವನ್ನ ತೆಗೆಯುವಂತೆ ಅನಿತಾ ರವಿಶಂಕರ್ ಅವರ ಮಗ ಆಕಾಶ್‌ಗೆ ತಾಕೀತು ಮಾಡಿದ್ದಾರೆ. ಬಳಿಕ ಗಲಾಟೆ ತಾರಕಕ್ಕೇರಿದೆ. ನಿವೃತ್ತ ಎಎಸ್‌ಐ ಮಗನೊಂದಿಗೆ ಈ ಜಗಳ ನಡೆದಿದೆ ಎನ್ನಲಾಗಿದೆ. ಇವರ ನಡುವೆ ಪಾರ್ಕಿಂಗ್, ಚರಂಡಿ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತೆನ್ನಲಾಗಿದೆ. ಗಾಯಾಳು ಆಕಾಶ್ ಅವರನ್ನ ನಾರಾಯಣ ಹೃದಯಾಲಯದಲ್ಲಿ ದಾಖಲಿಸಲಾಗಿದೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.