Site icon TUNGATARANGA

ಮಾ.1 ರಿಂದ ಪಿಯು/ 25 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ : ಶಿಕ್ಷಣ ಸಚಿವ ಮಧು ವಿವರಣೆ

ಬೆಂಗಳೂರು,ಫೆ.20: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್​ 1 ರಿಂದ 22ರ ವರೆಗೆ ನಡೆಯಲಿವೆ.ಎಸ್‌ಎಸ್‌ಎಲ್​ಸಿ ಪರೀಕ್ಷೆಗಳು ಮಾರ್ಚ್​​ 25 ರಿಂದ ಜೂನ್​ 06ರ ವರೆಗೆ ನಡೆಯಲಿವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ 6,98,624 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ.


ಪಿಯುಸಿಗೆ 1124 ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಲಾಗಿದೆ. ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ 8,96,271 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, ಒಟ್ಟು 2747 ಪರೀಕ್ಷಾ ಕೇಂದ್ರಗಳು ಇರಲಿದೆ.


ಎಲ್ಲ ಪರೀಕ್ಷೇಗೆ ನೋಂದಣಿ ಮಾಡಿಕೊಳ್ಳಲೇ ಬೇಕು. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಮೂರರಲ್ಲಿ ಯಾವುದಾದರು ಒಂದು ಪರೀಕ್ಷೆಗೆ ಹಾಜರಾಗಬೇಕು. ಮೂರು ಎಕ್ಸಾಂನಲ್ಲಿ ಮೊದಲು ಅಥವಾ ಎರಡು ಯಾವ ಪರೀಕ್ಷೆಯನ್ನು

ಬೇಕಿದ್ರೆ ಆಯ್ಕೆ ಮಾಡಬಹುದು. ಮೂರು ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಟಾಪ್ ಮಾರ್ಕ್ಸ್ ಪರಿಗಣನೆ ಮಾಡಲಾಗುತ್ತದೆ. ಹೆಚ್ಚು ಅಂಕ ಪಡೆದಿರುವ ಮಾರ್ಕ್ಸ್ ಮಾತ್ರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

Exit mobile version