ಶಿವಮೊಗ್ಗ, ಫೆಬ್ರವರಿ 20
ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕು ಗಳನ್ನು ತಿದ್ದುವ ಕೆಲಸವನ್ನು ಸರ್ವಜ್ಞ ಮಾಡಿದ್ದರು ಎಂದು ಶಾಸಕರಾದ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಜಿಲ್ಲಾಡÀಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕುಂಬಾರ ಸಂಘ ವತಿಯಿಂದ ಇಂದು ನಗರದ ಕುವೇಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದವನ್ನು ಸರಿದಾರಿಗೆ ತರಲು ತ್ರಿಪದಿಗಳ ಮೂಲಕ ಸಮಾಜದವನ್ನು ಎಚ್ಚರಿಸುವ ಕೆಲಸವನ್ನು ಅಂದಿನ ಕಾಲದಲ್ಲಿ ಸರ್ವಜ್ಞ ಮಾಡಿದ್ದರು.
ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುವ ಉದ್ದೇಶದಿಂದ ಸರ್ಕಾರ ಇಂದು ಅಂತರ್ಜಾತಿ ವಿವಾಹಕ್ಕೆ ಪೆÇ್ರೀತ್ಸಾಹ ನೀಡಿದೆ. ಆದರೆ ಸರ್ವಜ್ಞ ಅವರು ಅಂದಿನ ಕಾಲದಲ್ಲಿ ಅಂತರ್ಜಾತಿ ವಿವಾಹಕ್ಕೆ ಕರೆ ನೀಡುವ ಮೂಲಕ ಜಾತಿ ಜಾತಿಗಳ ನಡುವೆ ಸಾಮರಸ್ಯವನ್ನು ಮೂಡಿಸಿದರು. ಸಾಮಾನರ ಮನೆಯಲ್ಲಿ ಜನಿಸಿದ ವ್ಯಕ್ತಿ ದೊಡ್ಡ ಶಕ್ತಿಯಾಗಿ ಬೆಳೆಯಲು ಕಾರಣ ಅವರ ಜೀವನ ಆದರ್ಶ ಮೌಲ್ಯಯುತ ಬದುಕಾಗಿದೆ ಎಂದರು.
ಶಿವಮೊಗ್ಗ ತಹಶಿಲ್ದಾರ್ ಗಿರೀಶ್ ಮಾತನಾಡಿ, ಮಹಾನ್ ವ್ಯಕ್ತಿಗಳ ಜಯಂತಿಯಂದು ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿದರೆ ನಮ್ಮ ಕತ್ಯವ್ಯ ಮುಗಿದುಹೊಗುವುದಿಲ್ಲ. ಅವರ ಜೀವನ ಆದರ್ಶವನ್ನು, ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಅವರ ಜಯಂತಿಗೆ ನಿಜವಾದ ಗೌರವ ನೀಡಿದಂತೆ. ಅದೇ ರೀತಿ ಸರ್ವಜ್ಞರ ತ್ರಿಪದಿಗಳ ಒಂದೊಂದು ಪದಗಳು ಜೀವನ ಪರಿವರ್ತನೆ ಮಾಡುವಂತಿದೆ. ಅದನ್ನು ನಾವು ಓದಿ ತಿಳಿದುಕೊಂಡು, ನಮ್ಮ ಮಕ್ಕಳಿಗೆ ಅವರ ಬಗ್ಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಸರ್ವಜ್ಞರು ಕೇಲವ ಒಂದು ಸಮಾಜಕ್ಕೆ ಸೀಮಿತವಾಗಿಲ.್ಲ ಇಡೀ ದೇಶದ ಅಸ್ತಿಯಾಗಿದ್ದಾರೆ. ಕುಂಬಾರ ಕೆಲಸವನ್ನು ಮಾಡುವುದು ಅತ್ಯಂತ ಪುಣ್ಯದ ಕೆಲಸ. ಪ್ರಕೃತಿಯನ್ನು ರಕ್ಷಿಸುವ ಕಾರ್ಯವನ್ನು ಶತಮಾನಗಳಿಂದ ಈ ಸಮಾಜ ಮಾಡಿಕೊಂಡು ಬಂದಿದೆ. ಆಧುನಿಕ ಜಗತ್ತಿನಲ್ಲಿ ಕುಲ ಕಸುಬವನ್ನು ಬಹುತೇಕರು ಮರೆಯುತ್ತಿದ್ದು, ಸರ್ಕಾರ ಕುಶಲಕರ್ಮಿಗಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತಿದೆ ಯೋಜನೆಗಳ ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಾದ ಗುರುರಾಜ್ ಸರ್ವಜ್ಞ ಅವರ ಜೀವನ ಆದರ್ಶಗಳ ಕುರಿತು ಉಪನ್ಯಾಸ ನೀಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷರಾದ ಸಂಗಪ್ಪ , ತಾಲ್ಲೂಕು ಅಧ್ಯಕ್ಷರಾದ ಮಣಿ, ಕನ್ನಡ