ಶಿವಮೊಗ್ಗ, ಫೆ. 20:
ಕಳೆದ 50 ವರ್ಷಗಳ ಹಿಂದೆ ಆರಂಭಗೊಂಡ ಶಾಹಿ ಎಕ್ಸ್ ಪೋಸ್ಟ್ ಪ್ರೈವೇಟ್ ಲಿಮಿಟೆಡ್ ದೇಶದ ಅತಿ ದೊಡ್ಡ ಉಡುಪು ತಯಾರಕ ಹಾಗೂ ರಪ್ತುದಾರನಾಗಿ ಬೆಳೆದಿದ್ದು, ಶಿವಮೊಗ್ಗ ಸೇರಿದಂತೆ ದೇಶದ ಎಲ್ಲ ಸಂಸ್ಥೆಗಳು ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆ ಹಾಗೂ ಕೌಶಲ್ಯ ಅಭಿವೃದ್ಧಿಗಳ ತರಬೇತಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಶಾಯಿ ಎಕ್ಸ್ಪರ್ಟ್ ಸಂಸ್ಥೆಯ ನಿರ್ದೇಶಕ ಅನಂತ ಪದ್ಮನಾಭನ್ ಇಂದಿಲ್ಲಿ ತಿಳಿಸಿದರು.
ಅವರಿಂದ ಮಧ್ಯಾಹ್ನ ಶಿವಮೊಗ್ಗ ಶಾಹಿ ಎಕ್ಸ್ಪೋರ್ಟ್ ಸಂಸ್ಥೆ ಸಿ ಎಸ್ ಆರ್ ಯೋಜನೆಯಡಿ ನಿಧಿಗೆ ಶಾಲೆಯ ಮಕ್ಕಳಿಗೆ ಸೈಕಲ್ ಹಾಗೂ
ಸ್ಥಳೀಯ 14 ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ವಸ್ತುಗಳನ್ನು ನೀಡುವ ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಳೆದ 12 ವರ್ಷಗಳಿಂದ ಶಿವಮೊಗ್ಗ ಶಾಹಿ ಎಕ್ಸ್ಪೋರ್ಟ್ ಸಂಸ್ಥೆ 12 ವರುಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, 5000 ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಇದು ದೇಶದ ಉತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ. ಸ್ಥಳೀಯರ ನೆರವಿನೊಂದಿಗೆ ನಮ್ಮ ಸಂಸ್ಥೆ ಶಿಕ್ಷಣಕ್ಕೆ ತರಬೇತಿಗೆ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ಕಲ್ಪಿಸಿದೆ ಎಂದು ಹೇಳಿದರು.
ಇಂದಿನ ಮಕ್ಕಳು ನಾಳಿನ ಭವಿಷ್ಯದ ಬಗ್ಗೆ ಚಿಂತಿಸುವಂತಹ ವಾತಾವರಣವನ್ನು ಸೃಷ್ಟಿಸಬೇಕು. ಈ ಹಿನ್ನೆಲೆಯಲ್ಲಿ ಶಾಹಿ ಗಾರ್ಮೆಂಟ್ಸ್ ತನ್ನ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಅದರಲ್ಲೂ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿಗಳಿಗೆ ಮತ್ತು ಕೆರೆಗಳನ್ನು ರಕ್ಷಿಸಲು ಸೂಕ್ತ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಪ್ಪ ಅವರು ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲು ಶಾಹಿ ಸ್ಥಳೀಯರ ಸಹಾಯ ಪಡೆದು ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.+
1974ರಲ್ಲಿ ಶ್ರೀಮತಿ ಸರಳ ಅಹುಜಾ ಅವರ ನೇತೃತ್ವದಲ್ಲಿ ಆರಂಭಗೊಂಡ ಶಾಹಿ ಎಕ್ಸ್ಪೋರ್ಟ್ ದೇಶದ ಎಂಟು ರಾಜ್ಯಗಳಲ್ಲಿ ಐವತ್ತಕ್ಕೂ ಹೆಚ್ಚು ಅತ್ಯಮೂಲ್ಯ ಉಡುಪು ತಯಾರಿಕಾ ಘಟಕಗಳನ್ನು ಹೊಂದಿದ್ದು 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸೇವಾ ಭದ್ರತೆ ಅವರ ಕುಟುಂಬದ ಭದ್ರತೆಯನ್ನು ನೀಡುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಮೊಗ್ಗ ಸಾಯಿ ಎಕ್ಸ್ಪೋರ್ಟ್ ನ ಎಜಿಎಂ ಲಕ್ಷ್ಮಣ್ ಧರ್ಮಟ್ಟಿ ಅವರು ಶಿವಮೊಗ್ಗ ಶಾಯಿ ಎಕ್ಸ್ಪೋರ್ಟ್ ಸಮೀಪದ ನಿಧಿಗೆ, ದುಮ್ಮಳ್ಳಿ, ಮಾಚೇನಹಳ್ಳಿ ಮಲವಗೊಪ್ಪ ಓತಿಗಟ್ಟ, ಸೋಗಾನೆ ಗ್ರಾಮಗಳಲ್ಲಿ ಶಿಕ್ಷಣ ಆರೋಗ್ಯ ಪರಿಸರ ಹಾಗೂ ತರಬೇತಿಗೆ ಪೂರ್ವ ಬಾವಿಯಾಗಿ ಕೆಲಸಗಳನ್ನು ನಿರ್ವಹಿಸುತ್ತಿದೆ. ಈಗಾಗಲೇ 14 ಅಂಗನವಾಡಿ ಕೇಂದ್ರಗಳಿಗೆ 34.61 ಲಕ್ಷ 12 ಶಾಲೆಗಳ ಅಭಿವೃದ್ಧಿಗೆ 1.06 ಕೋಟಿ ಹಣವನ್ನು ಶಿಕ್ಷಣದ ನಿಮಿತ್ತ ಖರ್ಚು ಮಾಡಿದೆ ಎಂದರು.
ಆರೋಗ್ಯದ ನಿಮಿತ್ತ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳಿಗೋಸ್ಕರ 12.74 ಲಕ್ಷ ಹಾಗೂ ಗ್ರಾಮಗಳ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ 23. 74 ಕೋಟಿ ಹಾಗೂ 3.75 ಲಕ್ಷಗಳನ್ನು ವ್ಯಯ ಮಾಡಲಾಗಿದೆ ಎಂದರು.
ಮಹಿಳಾ ಕೌಶಲ್ಯ ಅಭಿವೃದ್ಧಿಗೆ 16.5 0 ಲಕ್ಷ ಪರಿಸರ ಸಂರಕ್ಷಣೆಯ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಯೋಜನೆಗೆ 73.50 ಲಕ್ಷ, ಪ್ಲಾಂಟೇಶನ್ ನಿರ್ಮಾಣಕ್ಕೆ 4.38 ಲಕ್ಷ ಹಾಗೂ ಆರು ಪ್ರಮುಖ ಕೆರೆಗಳ ಅಭಿವೃದ್ಧಿಗೆ 15 ಲಕ್ಷ ರೂ ಖರ್ಚು ಮಾಡಲು ನಿರ್ಧರಿಸಿದೆ. ವಿಶೇಷವಾಗಿ ಕೆರೆಗಳ ನೀರಿನ ಶುದ್ಧೀಕರಣಕ್ಕೆ ರೂ.95.62 ಲಕ್ಷ ಕೇಳಿದಂತೆ ಒಟ್ಟಾರೆ 4.24 ಕೋಟಿ ಹಣವನ್ನು ಸಮಾಜದ ಒಳಿತಿಗಾಗಿ ಬಳಸುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಹಿ ಎಕ್ಸ್ಪೋರ್ಟ್ ನ ಪ್ರಮುಖರಾದ ಹರಿಹರ ಪುತ್ರನ್, ಎಸ್ ಎಸ್ ಬೈನ್ಸ್ , ಎಸ್ ಡಿ ಎಂ ಸಿ ಅಧ್ಯಕ್ಷ ಮಹೇಶ್, ಡಯಟ್ ಉಪನ್ಯಾಸಕ ಅಶ್ವಥ್ ಗ್ರಾಮ ಪಂಚಾಯತಿ ಅಧ್ಯಕ್ಷ ಬಸಮ್ಮ, ಮುಖ್ಯ ಶಿಕ್ಷಕರು ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಶಾಯಿ ಗಾರ್ಮೆಂಟ್ಸ್ ಅಧಿಕಾರಿಗಳು, ಶಿಕ್ಷಕರು ಗ್ರಾಮಸ್ಥರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೌಂದರ್ಯ ಹಾಗೂ ತಂಡ ಪ್ರಾರ್ಥಿಸಿತು. ಶಿಕ್ಷಕ ರುದ್ರ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶಿವಶಂಕರ್ ಸ್ವಾಗತಿಸಿದರು.