ಶಿವಮೊಗ್ಗ,ಫೆ.20
ಕಳೆದ ತಿಂಗಳು ವಿಜೃಂಭಣೆಯಿಂದ ನಡೆದ ಗುರು ನಮನ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ ಶ್ರೀ ಗುರುಗಳ ಸಕಲ ಶಿಷ್ಯವೃಂದವನ್ನು ಒಳಗೊಂಡು ನಗರದ ಶುಭಂ ಸಭಾಂಗಣದಲ್ಲಿ ಔತಣ ಕೂಟವನ್ನು ಏರ್ಪಡಿಸಲಾಗಿತ್ತು.
ಎನ್. ಕುಮಾರ್ ಅವರ ಸ್ವಾಗತ ಭಾಷಣದಿಂದ ಆರಂಭಗೊಂಡ ಈ ಸಭೆಯಲ್ಲಿ ವಿವಿಧ ಪ್ರದೇಶಗಳಿಂದ ಬಂದ ಅತಿಥಿಗಳು ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಶಭರೀಶ್ ಸ್ವಾಮಿ ಅವರು ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿ, ಮುಂಬರುವ ದಿನಗಳಲ್ಲಿ ಶಿವಮೊಗ್ಗದ ಜನತೆಯ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು – ಮುಖ್ಯವಾಗಿ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಜನರಿಗಾಗಿ ವಿಶೇಷವಾದ (ಸೊಸೈಟಿ ) ಸಹಕಾರ ಸಂಘ ಹಾಗೂ ಉದ್ಯೋಗ ಸೌಲಭ್ಯಗಳನ್ನು ಸೃಷ್ಟಿಸುವ ಬಗ್ಗೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜೇಂದ್ರ ರವರು ಶಬರೀಶ್ ಸ್ವಾಮಿಯವರು ಗುರುಗಳ ಹಾದಿಯಲ್ಲಿ ಸಾಗುತ್ತಿರುವುದರ ಬಗ್ಗೆ ಅತ್ಯಂತ ಸಂತೋಷ ವ್ಯಕ್ತಪಡಿಸಿ, ಸದಾ ಸಹಕಾರ ಇರುವುದೆಂದು ಜನತೆಯ ಪರವಾಗಿ ಆಶ್ವಾಸನೆ ನೀಡಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗದ ಮಾಜಿ ಸೂಡಾ ಅಧ್ಯಕ್ಷ ಉಸ್ಮಾನ್ ರವರು ಶ್ರೀ ರೋಜಾ ಗುರುಗಳ ಸವಿನೆನಪನ್ನು ಹಂಚಿಕೊಂಡರು. ಹಾಗೂ ಜಾತ್ಯಾತೀತ ಜನಶಕ್ತಿಯನ್ನು ಕಟ್ಟುವುದಕ್ಕೆ ತಮ್ಮ ಸಹಕಾರವಿರುವುದಾಗಿ ಅಭಿಪ್ರಾಯವನ್ನು ತಿಳಿಸಿದರು.
ಹೊರ ರಾಜ್ಯದಿಂದ ಬಂದವರ ಪರವಾಗಿ ಮಾತನಾಡಿದ ಜಯಶ್ರೀ ರವರು ರೋಜಾ ಗುರುಗಳ ಪವಾಡಗಳ ಬಗ್ಗೆ ವಿವರಿಸಿ, ರೋಜಾ ಗುರೂಜಿ ಹಾಗೂ ಶ್ರೀ ಶಬರೀಶ್ ಸ್ವಾಮಿ ಯವರ ಸೇವೆಗಾಗಿ ಪ್ರಪಂಚದಾದ್ಯಂತ ಇರುವ ಅವರ ಶಿಷ್ಯರು ಎಂದೆಂದಿಗೂ ಸಿದ್ಧವೆಂದು ಸೂಚಿಸಿದರು. ಹಾಗೂ ಚೆನ್ನೈನಲ್ಲಿ ಶ್ರೀ ಶಬರೀಶ್ ಸ್ವಾಮಿ ಯವರ ಹೆಸರಿನಲ್ಲಿ ಸೇವಾ ಸಂಸ್ಥೆಯನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಕೊಲ್ಕತ್ತಾದಿಂದ ಬಂದ ದೆಬಜಿತ್ ಅವರು ಎಲ್ಲಾ ಶಿಷ್ಯ ವೃಂದದವರಿಗೂ ದುರ್ಗಾ ಪೂಜೆಯ ವಿಶೇಷ ಸಂದರ್ಭದಲ್ಲಿ ಕೊಲ್ಕತ್ತಾಗೆ ಬರಲು ಆಹ್ವಾನಿಸಿದರು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾಡಿದ ಸಂದೇಶ್ ರವರು ವಿಧ್ಯಾಭ್ಯಾಸದ ಪ್ರಾಮುಖ್ಯತೆಯ ಬಗ್ಗೆ ಬಹಳ ಸುಂದರವಾಗಿ ವಿವರಿಸಿ ಸಮಾರಂಭದಲ್ಲಿ ನೆರೆದಿದ್ದ ಜನರಿಂದ ಉದಾತ್ತ ಕಾರ್ಯವನ್ನು ಮುಂದುವರಿಸಲು ಬೆಂಬಲ ನೀಡುವಂತೆ ವಿನಂತಿಸಿದರು.
ವಿಶೇಷ ಅಭಿನಂದನಾ ಸಭೆಯ ನೇತೃತ್ವವನ್ನು ಕುಮಾರ್, ಪಿಚ್ಚಾಂಡಿ, ಶಂಕರ್, ಮಣಿಕಂಠನ್, ಪ್ರೀತಿ, ವೆಂಕಟೇಶ್, ಮನೋಹರ್, ಮಹಾದೇವ್, ರಾಜೇಂದ್ರ, ರಾಜಶೇಖರ್, ರಾಜ್ ಕುಮಾರ್, ಶ್ಯಾಮ್, ಮುರುಗೇಶ್, ಸುಬ್ಬು, ವಾಣಿ, ಭುವನ, ಸಿಂಧು, ಚಿತ್ರ, ಮಂಜುಳಾ, ಗೀತಾಂಜಲಿ, ಸೆಲ್ವಾ, ಕಲ್ಯಾಣಿ ಯೋಗರಾಜ್, ಮುರಳಿ, ಐಶ್ವರ್ಯ, ವಿವೇಕ್ ರವರು ವಹಿಸಿದ್ದರು.
ಶಬರೀಶ್ ಸ್ವಾಮಿಯವರ ಶಿಷ್ಯರಾದ ಆದಿತ್ಯ ಬಿಹಾರ್, ಶೃಂಗೇರಿಯ ಶ್ರೀರಾಮ್, ಗದಗ್ ನ ಮೇಘ , ಅನಂತಪುರದ ಅನಿತಾ, ಕಾರೈಕುಡಿಯ ಅಶೋಕ್, ಮೈಸೂರಿನ ತೇಜಸ್ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.