Site icon TUNGATARANGA

ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕಾಯ್ದುಕೊಳ್ಳಲು ಎಸ್ಪಿ ಮಿಥುನ್ ಕುಮಾರ್ ಅಧಿಕಾರಿಗಳಿಗೆ ನೀಡಿದ 13 ಸೂಚನಗಳೇನು ಗೊತ್ತಾ?

ಶಿವಮೊಗ್ಗ, ಫೆ.17:
ಶಿವಮೊಗ್ಗ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ
ಮಿಥುನ್ ಕುಮಾರ್ ಜಿ. ಕೆ. ಅವರು ಜನಸ್ನೇಹಿ ಹಾಗೂ ಜನಪರ ಪೊಲೀಸ್ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ‌ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಹದಿಮೂರು ಸಲಹೆ ಹಾಗೂ ಸೂಚನಾ ಮಾಹಿತಿಯನ್ನು ನೀಡಿದ್ದಾರೆ.


ಶಿವಮೊಗ್ಗ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಪೊಲೀಸ್ ಉಪವಿಭಾಗ ಕಛೇರಿ, ಪೊಲೀಸ್ ವೃತ್ತ ಕಛೇರಿ ಮತ್ತು ಪೊಲೀಸ್ ಠಾಣೆಗಳ ಅಪರಾಧ ಪರಿಶೀಲನಾ ಸಭೆ ನಡೆಸಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.
1) ತನಿಖಾಧಿಕಾರಿಗಳು ತನಿಖೆಯಲ್ಲಿರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವುದು.
2) ಮರಣಾಂತಿಕ ರಸ್ತೆ ಆಫಘಾತ ನಡೆದ ಸ್ಥಳಗಳ ಜಂಟಿ ಪರಿಶೀಲನೆ ನಡೆಸಿ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು.


3) ಮಾನ್ಯ ನ್ಯಾಯಾಲಯದಿಂದ ಈಗಾಗಲೇ ತಡೆಯಾಜ್ಞೆ ಪ್ರಕರಣಗಳಲ್ಲಿ ತಡೆಯಾಜ್ಞೆ ತೆರವುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು.
4) ಸಿಇಎನ್ ಪೊಲೀಸ್ ಠಾಣೆ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿಯೂ ಸಹಾ ಸೈಬರ್ ಕ್ರೈಂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದು ಮತ್ತು ಸೈಬರ್ ಸಹಾಯವಾಣಿ 1930 ವನ್ನು ವ್ಯಾಪಾಕವಾಗಿ ಪ್ರಚಾರ ಮಾಡುವುದು.
5) ಠಾಣಾಧಿಕಾರಿಗಳು ಕಡ್ಡಾಯವಾಗಿ ಪ್ರತಿ ದಿನ ಬೆಳಗ್ಗೆ ಠಾಣಾ ಸಿಬ್ಬಂದಿಗಳಿಗೆ ಬ್ರೀಪಿಂಗ್ ಸಭೆ ನಡೆಸಿ, ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಸೂಚನೆ ನೀಡುವುದು.


6) ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಠಾಣಾಧಿಕಾರಿಗಳು ಸಿಬ್ಬಂದಿಗಳೊಂದಿಗೆ ಕಾಲ್ನಡಿ ವಿಶೇಷ ಗಸ್ತು ನಡೆಸಿ, ಈ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಂವಹನ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸುವುದು.
7) ಪ್ರತಿ ದಿನ ಸಂಜೆ ವೇಳೆ ಸೂಕ್ಷ್ಮ ಸ್ಥಳಗಳು ಮತ್ತು ಹೊರವಲಯಗಳಲ್ಲಿ ಏರಿಯಾ ಡೊಮಿನೇಷನ್ ವಿಶೇಷ ಗಸ್ತು ಮಾಡಿ, ಅನುಮಾನಾಸ್ಪದ ಮತ್ತು ಸಾರ್ವಜನಿಕ ಉಪಟಳ ನೀಡುವವ ವ್ಯಕ್ತಿಗಳ ವಿರುದ್ಧ ಲಘು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದು.
8) ಠಾಣಾಧಿಕಾರಿಗಳು ಠಾಣಾ ವ್ಯಾಪ್ತಿಯಲ್ಲಿ ಬೀಟ್ ಸಮಿತಿ ಸಭೆ, ಶಾಲಾ ಕಾಲೇಜು ಭೇಟಿ, ನೊಂದವರ ಸಭೆ, ತೆರೆದ ಮನೆ ಕಾರ್ಯಕ್ರಮ ನಡೆಸಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲೋನಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸುವುದು.


9) ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ವಿರುವ ವ್ಯಕ್ತಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಗಾಂಜಾ ಸೇವನೆ ಮಾಡಿರುವುದು ದೃಢ ಪಟ್ಟಲ್ಲಿ, ಅವರುಗಳ ವಿರುದ್ಧ NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸುವುದು ಮತ್ತು ಗಾಂಜಾದ ಮೂಲವನ್ನು ಪತ್ತೆ ಮಾಡಿ ಅಂತಹವರ ವಿರುದ್ಧವೂ ಸಹಾ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದು.
10) ತನಿಖೆ ಯಲ್ಲಿರುವ SC & ST ಕಾಯ್ದೆ ಪ್ರಕರಣ ಮತ್ತು POCSO ಕಾಯ್ದೆ ಪ್ರಕರಣಗಳನ್ನು ಕಾಲಮಿತಿಯಲ್ಲಿ ತನಿಖೆ ಪೂರೈಸಿ ವಿಲೇವಾರಿ ಮಾಡುವುದು.
11) ಸಂಘಟಿತ ಅಪರಾಧಗಳನ್ನು ತಡೆ ಗಟ್ಟುವ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕಿ, ಹೆಚ್ಚಿನ ಪ್ರಕರಣ ಗಳನ್ನು ದಾಖಲಿಸಿ ಕ್ರಮ ಕೈಗೊಳ್ಳುವುದು.
12) ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಮತ್ತು ಗುಡ್ ಮಾರ್ನಿಂಗ್ ಬೀಟ್ ಗಳಿಗೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿ, ಕಡ್ಡಾಯವಾಗಿ ಗಸ್ತನ್ನು ಜಾರಿ ಮಾಡುವುದು.
13) ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸುವುದು, ಅವರ ಮಾಹಿತಿಯನ್ನು ವಿಸಿಟರ್ ಬುಕ್ ಮ್ಯಾನೇಜ್ಮೆಂಟ್ ಪೋರ್ಟಲ್ ನಲ್ಲಿ ದಾಖಲಿಸಿ ನಂತರ ಪೊಲೀಸ್ ಅಧಿಕಾರಿಗಳು ಅವರುಗಳ ಸಮಸ್ಯೆಗಳಿಗೆ ಸ್ಪಂದಿಸಿದ ಬಗ್ಗೆ ಲೋಕಸ್ಪಂದನ ಅಪ್ಲಿಕೇಶನ್ ನಲ್ಲಿ ಶ್ರೇಯಾಂಕ ನೀಡುವಂತೆ ತಿಳಿಸಲು ಸೂಚಿಸಿದರು.
ನಂತರ ಸರ್ಕಾರಿ ಅಭಿಯೋಜಕರೊಂದಿಗೆ ಸಂವಾದ ಸಭೆಯನ್ನು ನಡೆಸಿದ್ದು, ಶಿವಮೊಗ್ಗ ಮಾನ್ಯ ಸತ್ರ ನ್ಯಾಯಾಲಯಗಳ ಸರ್ಕಾರಿ ಅಭಿಯೋಜಕರಾದ ಸುರೇಶ ಕುಮಾರ್, ಮಮತ, ಶಾಂತರಾಜು, ಸಹಾಯಕ ಸರ್ಕಾರಿ ಅಭಿಯೋಜಕರಾದ ಚಂದ್ರಶೇಖರ್, ಮತ್ತು ಗೋವಿಂದರಾಜು ರವರು ಜಿಲ್ಲೆಯ ಎಲ್ಲಾ ತನಿಖಾಧಿಕಾರಿಗಳಿಗೆ ಪ್ರಕರಣಗಳ ತನಿಖೆಯ ಸಮಯದಲ್ಲಿ ಪಾಲಿಸಬೇಕಿರುವ ಅಂಶಗಳ ಕುರಿತು ಮತ್ತು ಘನ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆಯ ವೇಳೆ ತನಿಖಾಧಿಕಾರಿಗಳು ಎದುರಿಸಬಹುದಾದ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 01, ಶಿವಮೊಗ್ಗ ಜಿಲ್ಲೆ, ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ, ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ನಾಗರಾಜ್, ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ, ಗಜಾನನ ವಾಮನ ಸುತರ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ಮತ್ತು ಕೃಷ್ಣಮೂರ್ತಿ, ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ ಮತ್ತು ಜಿಲ್ಲೆಯ ಪೊಲೀಸ್ ನಿರೀಕ್ಷಕರು, ವೃತ್ತ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರು ಉಪಸ್ಥಿತರಿದ್ದರು.

Exit mobile version