Site icon TUNGATARANGA

ರಾಮನ ಮನೆಯ ತೆರಿಗೆ ರಹೀಮನ ಮನೆಗೆ/ರಾಜ್ಯ ಸರ್ಕಾರದ ಬಜೆಟ್   ಬಗ್ಗೆ ಶಾಸಕ ಚನ್ನಬಸಪ್ಪ ಹೀಗೆ ಹೇಳಿದ್ದೇಕೆ ?

ತಮ್ಮ 15ನೇ ಬಜೆಟ್ ಮಂಡಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗ್ಯಾರೆಂಟಿಗಳ ಅರ್ಥವಿಲ್ಲದ ಆರ್ಥಿಕ ಕೂಪದಲ್ಲಿ ಬಿದ್ದಿರುವುದು ಎದ್ದು ಕಾಣುತ್ತಿದೆ.

 ತಮ್ಮ ತಪ್ಪಿಗೆ ತೇಪೆ ಹಾಕಲು ಕೇಂದ್ರದೆಡೆಗೆ ಬೆಟ್ಟು ಮಾಡುವ ಚಾಳಿಯನ್ನು ಮೈಗೂಡಿಸಿಕೊಂಡಿರುವ ಮಾನ್ಯ ಸಿದ್ದರಾಮಯ್ಯನವರು ಕೇಂದ್ರದ ಪಾಲು ಬಂದಿಲ್ಲವೆಂದು ಒಂದು ಸುಳ್ಳನ್ನೇ ನೂರು ಸಾರಿ ಪದೇ ಪದೇ ಹೇಳಿದರೆ ಜನರನ್ನು ತಮ್ಮ ಸುಳ್ಳಿನಿಂದ ನಂಬಿಸಬಹುದೆಂದು  ಕೊಂಡಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ಬಜೆಟಿನಲ್ಲಿ ಅಜನಾಂದ್ರಿ ಅಭಿವೃದ್ಧಿಗೆ 100 ಕೋಟಿ ಕೊಡುತ್ತೇನೆ ಎಂದಿದ್ದು ನಮ್ಮ ಭಾಜಪ ಸರ್ಕಾರದ ಕೊಡುಗೆಯನ್ನೇ ಪುನರುಚ್ಚರಿಸಿದ್ದಾರೆ. ಹಿಂದುಗಳಿಗೆ ಬಿಡಿಗಾಸ ನೀಡದೆ ತಮ್ಮ ಅಚ್ಚುಮೆಚ್ಚಿನ ಪಂಗಡಕ್ಕೆ ಅಪಾರ ಅನುದಾನ ಘೋಷಿಸಿ ತಮ್ಮ ಬಾಂಧವರಿಗೆ ನಿಷ್ಠೆಯನ್ನು ತೋರಿಸಿದ್ದಾರೆ.

ಮಧ್ಯರಾತ್ರಿ ಒಂದು ಗಂಟೆವರೆಗೂ ಮಧ್ಯ ಮಾರಾಟಕ್ಕೆ ಅವಕಾಶ ನೀಡಿ ಗಾಂಧಿ ತತ್ವವನ್ನು ಗಾಳಿಗೆ ತೂರಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ದೊಡ್ಡ ಪೆಟ್ಟನ್ನು ನೀಡಲು ಹೊರಟಿದ್ದಾರೆ.

 ಈ ಸರ್ಕಾರದಲ್ಲಿ ಯಾವುದು ನೆಟ್ಟಗಿಲ್ಲ ಎಂಬುದು ಬುರುಡೆ ಬಜೆಟ್ ನಲ್ಲಿ ಕಾಣಬಹುದು.

Exit mobile version