Site icon TUNGATARANGA

ಶಿವಮೊಗ್ಗದಲ್ಲಿಂದು ವೈಕುಂಠ ಏಕಾದಶಿ ಸಂಭ್ರಮ

ಶಿವಮೊಗ್ಗ ನಗರದ ವಿವಿಧ ದೇವಾಲಯಗಳಲ್ಲಿ ಇಂದು ವೈಕುಂಠ ಏಕಾದಶಿ ಸಂಭ್ರಮ.
ಹಿಂದೂ ಪಂಚಾಗದಲ್ಲಿ ಏಕಾದಶಿ ದಿನಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಏಕಾದಶಿಯು ತಿಂಗಳಿನಲ್ಲಿ ಎರಡು ಬಾರಿ ಬರುತ್ತದೆ. ಆದರೆ ಧನುರ್ಮಾಸದಲ್ಲಿ (ಡಿಸೆಂಬರ್-ಜನವರಿ) ಬರುವ ಏಕಾದಶಿಯು ವಿಶೇಷವಾಗಿದ್ದು, ಇದನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ಇದು ದಕ್ಷಿಣ ಭಾರತದ ಪ್ರಮುಖ ಉತ್ಸವಗಳಲ್ಲಿ ಒಂದಾಗಿದ್ದು ಎಲ್ಲ ವಿಷ್ಣು ಮಂದಿರಗಳಲ್ಲಿ ಆಚರಿಸಲಾಗುತ್ತದೆ.


ಶ್ರೀ ಸಂಪ್ರದಾಯದ ಶ್ರೇಷ್ಠ ಭಕ್ತರಲ್ಲಿ ಒಬ್ಬರಾದ ನಮ್ಮಾಳ್ವಾರ್ ಅವರು ಇದೇ ದಿನ ಭಗವದ್ಧಾಮಕ್ಕೆ ಹಿಂದಿರುಗಿದರು. ಇದರ ಸಂಸ್ಮರಣೆಯಾಗಿ, ವಿಷ್ಣು ಮಂದಿರಗಳಲ್ಲಿ, ದೇವಸ್ಥಾನದ ಉತ್ತರ ಭಾಗದಲ್ಲಿ ವಿಶೇಷ ದ್ವಾರ – ವೈಕುಂಠ ದ್ವಾರವನ್ನು ಈ ದಿನ ತೆರೆಯುತ್ತಾರೆ. ವೈಕುಂಠ ಏಕಾದಶಿಯಂದು ವೈಕುಂಠ ದ್ವಾರವನ್ನು ಪ್ರವೇಶಿಸುವವರು ಆಧ್ಯಾತ್ಮಿಕ ಧಾಮವನ್ನು ಪಡೆಯುವರು ಎಂಬ ನಂಬಿಕೆ ಇದೆ.
ನಗರದ ಎಸ್ ಕೆ ಎಂ ರಸ್ತೆಯ ಗೌಡ ಸಾರಸ್ವತ ಕಲ್ಯಾಣಮಂದಿರ ಪಕ್ಕದ ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಅಶ್ವಥ್ ನಗರದ ದೇವಗಿರಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕೋಟೆ ಶ್ರೀ ರಾಮಾಂಜನೇಯ ದೇವಾಲಯದಲ್ಲಿ ಹಾಗೂ ನವೋದಯ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಮತ್ತು ಹೊಸಮನೆಯ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ವಿಶೇಷ ಪೂಜೆ ಅಲಂಕಾರ ನಡೆಯುತ್ತಿತ್ತು.

ಶಿವಮೊಗ್ಗ ಶ್ರೀ ಕ್ಷೇತ್ರ ರಾಜೇಂದ್ರನಗರದ ಪಂಪಾವನದಲ್ಲಿ ಇಂದು ವೈಕುಂಠ ಏಕಾದಶಿ ಸಂಭ್ರಮ. ಇಲ್ಲಿನ ರಾಮಾಂಜುನೇಯನ ಪೂಜೆಗೆ ಅಪಾರ ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಅಪಾರ ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು. ಶಿವಮೊಗ್ಗ ನಗರದ ಪ್ರಮುಖ ದೇವಾಲಯಗಳ ಇಂದಿನ ಚಿತ್ರಣ ಇಂತಿವೆ.

Exit mobile version