Site icon TUNGATARANGA

ಮಕ್ಕಳಿಗೆ ಕ್ರೀಡಾ ಕೌಶಲ್ಯ ಮತ್ತು ಶಿಸ್ತು, ಆತ್ಮಸ್ಥೈರ್ಯ ತುಂಬುವಂತಹ ಕೆಲಸವನ್ನು ದೈಹಿಕ ಶಿಕ್ಷಣ ಶಿಕ್ಷಕರು ಮಾಡಬೇಕಾಗಿದೆ:ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ನಾಗರಾಜ್

ಪ್ರಾಣಾಯಾಮ ಯೋಗ ಅನುಷ್ಠಾನ ತರುವುದರಿಂದ ಮಕ್ಕಳಿಗೆ ಮಾನಸಿಕ ಸ್ಥಿರತೆ, ಏಕಾಗ್ರತೆ ತರುವುದಲ್ಲದೇ ಪರೀಕ್ಷಾ ಫಲಿತಾಂಶದ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪಿ. ನಾಗರಾಜ್. ಕರೆ ನೀಡಿದರು.


    ಅವರು ನಿನ್ನೆ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,  ಶಿವಮೊಗ್ಗ., ಸಮನ್ವಯ ಅಧಿಕಾರಿಗಳ ಕಚೇರಿ, ಶಿವಮೊಗ್ಗ. ಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಸರ್ಕಾರಿ  ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ    ಶಿವಮೊಗ್ಗ ತಾಲ್ಲೂಕು ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಎರಡನೇ

ತ್ರೈಮಾಷಿಕ ಮೌಲ್ಯಾಂಕನ  ಪರೀಕ್ಷೆಯ ಬಗ್ಗೆ ಕಾರ್ಯಗಾರವನ್ನು  ಹಮ್ಮಿಕೊಂಡಿದ್ದು, ಕಾರ್ಯಗಾರದಲ್ಲಿ ಮಾತನಾಡುತ್ತಾ ಮಕ್ಕಳಿಗೆ ಕ್ರೀಡಾ ಕೌಶಲ್ಯ ಮತ್ತು ಶಿಸ್ತು, ಆತ್ಮಸ್ಥೈರ್ಯ ತುಂಬುವಂತಹ ಕೆಲಸವನ್ನು ದೈಹಿಕ ಶಿಕ್ಷಣ ಶಿಕ್ಷಕರು ಮಾಡಬೇಕಾಗಿದೆ.ಆ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು. ಶೈಕ್ಷಣಿಕ ವರ್ಷದಿಂದ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ತಾಲ್ಲೂಕು ಹಂತದಲ್ಲಿ ಮೌಲ್ಯಾಂಕನ  ಪರೀಕ್ಷೆ ಇರುವುದರಿಂದ ಅವರಿಗೆ ಉತ್ತಮ ತರಬೇತಿಯನ್ನು ಕೊಟ್ಟು ಪರೀಕ್ಷೆಗೆ ಸಜ್ಜುಗೊಳಿಸಬೇಕೆಂದರು.

   ಕ್ರೀಡಾ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾ ಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆ ಪ್ರತಿಭೆಗಳ ಹಿಂದೆ ತಮ್ಮಗಳ ಪ್ರಯತ್ನ ಅಪಾರವಾಗಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಪ್ರಶಂಶಿಸಿದರು.


   ದೈಹಿಕ ಶಿಕ್ಷಣ ಅಧಿಕಾರಿಗಲಾದ ಬಿ. ಹೆಚ್.ನಿರಂಜನಮೂರ್ತಿ ಪ್ರಾಸ್ತಾವಿಕ  ನುಡಿಗಳನ್ನು ನುಡಿದರು. ಶಿಕ್ಷಣ ಸಂಯೋಜಕಗಳಾದ ಡಾ. ಬಸವರಾಜ್, ಡಿ. ಮೋಹನ್ ದೈಹಿಕ  ಶಿಕ್ಷಣ ಶಿಕ್ಷಕರ ಕಾರ್ಯ ವ್ಯಾಪ್ತಿ ಮತ್ತು ಮೌಲ್ಯಾಂಕನ ಪರೀಕ್ಷೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಸ್. ಕಾಳಾನಾಯ್ಕ ವಹಿಸಿದ್ದರು. ಜಿಲ್ಲಾ ಅನುದಾನ ರಹಿತ ತ ಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ರಾ. ಹ.ತಿಮ್ಮೇನಹಳ್ಳಿ, ಜಿಲ್ಲಾ ಸಂಘದ ಕಾರ್ಯದರ್ಶಿ ನಾಗರಾಜ್,


 ಉಪಾಧ್ಯಕ್ಷ ಬಸವರಾಜ್, ಖಜಾಂಚಿ ಪರಮೇಶ್ವರಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾರ್ಯಕ್ರಮ ನಡೆಸಿ ಕೊಟ್ಟರು. ಮಹೇಶ್ ಹುಲ್ಲತ್ತಿ ಇನ್ನು ಮುಂತಾದವರು ಉಪಸ್ಥಿತರಿದ್ದರು. ದೇವರಾಜ್ ಕಾರ್ಯಕ್ರಮ ನಿರೂಪಿಸಿದರು.

Exit mobile version