Site icon TUNGATARANGA

ನಾನು ಸಂಸದರು  ಅಭಿವೃದ್ಧಿ ಮಾಡಿಲ್ಲ ಎಂದು ಹೇಳಿಲ್ಲ/ ನನ್ನ ಆಸ್ತಿ  ಪೆಸಿಟ್ ಕಾಲೇಜಿನ ಫ್ಲೈ ಓವರ್ ಹತ್ತಿರವಿದ್ರೆ ಹುಡುಕಿಕೊಡಲಿ:ಅಯನೂರು ಮಂಜುನಾಥ್

ಶಿವಮೊಗ್ಗ:   ಕೇಂದ್ರ ಸರಕಾರವು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸಿದೆ. ಕಾರ್ಮಿಕರ ಕೆಲಸದ ವೇಳೆಯನ್ನು 8ರಿಂದ 14 ಗಂಟೆಗೆ ಏರಿಸಿದೆ. ಇದನ್ನು ಮತ್ತೆ 8 ಗಂಟೆಗೆ ಇಳಿಸುವ ಸಂಬಂಧ ಕೂಡಲೇ ನಿರ್ಣಯ ಕೈಗೊಳ್ಳಬೇಕೆಂದು ಕೆಪಿಸಿಸಿ ವಕ್ತ್ತಾರ ಆಯನೂರು ಮಂಜುನಾಥ ಹೇಳಿದರು.

 ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರು ಕನಿಷ್ಟ  ವೇತನದಡಿ ಕೆÀಲಸ ಮಾಡುತ್ತಿದ್ದಾರೆ. ನಿರೀಕ್ಷಿತ ಸೌಲಭ್ಯಗಳು ಅವರಿಗೆ ಇಲ್ಲ. ಆದರೂ ಕೆಲಸದ ಅವಧಿ ಹೆಚ್ಚಿಸಿ ಹೆಚ್ಚಿನ ದುಡಿಮೆಯನ್ನು ಕಡಿಮೆ ವೇತನದಲ್ಲಿ ಪಡೆಯುವ ಕೆಲಸ ಇದಾಗಿದೆ. ಇದನ್ನು ಕೂಡಲೇ ಕೈಬಿಡಬೇಕು. ಈ ಬಗ್ಗೆ ಹಲವಾರು ಹೋರಾಟಗಳು ನಡೆದಿÀವೆ ಎಂದರು. 

 ಸಂಸದ ಬಿ ವೈ ರಾಘವೇಂದ್ರ ನನ್ನ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಸಾಕಷ್ಟು ಮಾತನಾಡಿದ್ದಾರೆ. ಆದರೆ ನಾನು ಸಂಸದರು  ಅಭಿವೃದ್ಧಿ ಮಾಡಿಲ್ಲ ಎಂದು ಎಲ್ಲಿಯೂ ಹೇಳಿಲ್ಲ.  ಸಂಸದ ಡಿ ಕೆ ಸುರೇಶ್ ಅನುದಾನ ಬಿಡುಗಡೆÉಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ  ಎಂದು ಆರೋಪಿಸಿರುವಂತೆ ಜಿಲ್ಲೆಗೂ ಅನ್ಯಾಯವಾಗಿದೆ ಎಂದಷ್ಟೆ ಹೇಳಿದ್ದೇನೆ. ಆದರೆ ಯಾವ್ಯಾವುದೊ ವಿಚಾರದ ಬಗ್ಗೆ ರಾಘವೇಂದ್ರ ಮಾತನಾಡಿದ್ದಾರೆ ಎಂದರು.

  ನನ್ನ ಆಸ್ತಿ  ಪೆಸಿಟ್ ಕಾಲೇಜಿನ ಫ್ಲೈ ಓವರ್ ಹತ್ತಿರವಿದೆ ಎಂದಿದ್ದ್ದಾರೆ. ಇದ್ದರೆ ಅದನ್ನು ಅವರೇ ಹುಡುಕಿಕೊಡಬೇಕು. ಈ ಬಗ್ಗೆ ಅವರನ್ನೇ ಕೇಳಿದರೆ ಒಳ್ಳೆಯದು ಎಂದ ಅವರು, ಸವಳಂಗ ರಸ್ತೆಯಲ್ಲಿ ತನ್ನಪ್ಪನ ಆಸ್ತಿ ಇಲ್ಲವೆಂದು ಅಬ್ಬರಿಸಿದ್ದಾರೆ. ಅದೊಂದು ರಸ್ತೆ ಬಿಟ್ಟು  ಅಷ್ಟ್ಟದಿಕ್ಕುಗಳಲ್ಲಿಯೂ ತಮ್ಮ  ಆಸ್ತಿ ಇದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ತಿರುಗು ಬಾಣ ಬಿಟ್ಟರು.  

ನಾಳೆ ಮಂಡಿಸಲಿರುವ  ರಾಜ್ಯ ಬಜೆಟ್‍ನಲ್ಲಿ  ಎನ್‍ಪಿಎಸ್ ನೌಕರರಿಗೆ  ಓಪಿಎಸ್ ಯೋಜನೆ ನೀಡುವ ಪ್ರಸ್ತಾಪವನ್ನು ಮುಖ್ಯಮಂತ್ರಿ ಮಾಡುವ ಸಂಭವವಿದೆ.  1995ರ ನಂತರ ಆರಂಭವಾದ  ಅನುದಾನಿತ ಶಾಲೆಗಳಿಗೆÉ  ಅನುದಾನದ ಕೊರತೆ ಇದೆ. ಅದರ ಬಗ್ಗೆÉಯೂ ಬಜೆಟ್‍ನಲ್ಲಿ ಪ್ರಸ್ತಾಪವಾಗಲಿದೆ ಎಂದು ನಿರೀಕ್ಷಿಸಲಾಗಿದೆ.  ಸರಕಾರಿ ನೌಕರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಆಸಕ್ತಿ ವಹಿಸಲಿದ್ದಾರೆ ಎಂದು  ಹೇಳಿದರು. 

Exit mobile version