Site icon TUNGATARANGA

ಅಭಿವೃದ್ದಿಗಾಗಿ ಗ್ರಾಪಂ ಜೊತೆ ಕೈ ಜೋಡಿಸಿ/ಕೋಟೆಗಂಗೂರು ಗ್ರಾಪಂ ಕಟ್ಟಡ ಉದ್ಘಾಟಿಸಿದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಇಂಗಿತ

ಶಿವಮೊಗ್ಗ, ಫೆ.14:
ಗಾಮೀಣ ಭಾಗದ ಅಭಿವೃದ್ದಿಗಾಗಿ ಎಲ್ಲರೂ ಏಕಮುಖವಾಗಿ ಗ್ರಾಮ ಪಂಚಾಯ್ತಿ ಜೊತೆ ಕೈ ಜೋಡಿಸಿ ನಡೆಯಬೇಕು. ಈ ಸ್ಥಳೀಯ ಆಡಳಿತ ವ್ಯವಸ್ಥೆ ಜನರಿಗೆ ಸದಾ ಸ್ಪಂದಿಸಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾಸಕರಾದ ಶಾರದಾ ಎಸ್. ಪೂರ್ಯಾನಾಯ್ಕ್ ತಿಳಿಸಿದರು.


ಅವರು ಶಿವಮೊಗ್ಗ ತಾಲೂಕಿನ, ಕೋಟೆಗಂಗೂರು ಗ್ರಾಮ ಪಂಚಾಯತಿಯ ನೂತನ ನಿರ್ಮಾಣದ ಭವ್ಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯೆ ಕಡಿಮೆ ಇರುವ ಗ್ರಾಮೀಣ ಜನರಿಗೆ ಇಂದಿನ ಆಗುಹೋಗುಗಳ ಬಗ್ಗೆ ತಿಳಿ ಹೇಳಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೊಡಿಸುವ ಕೆಲಸ ಗ್ರಾಮಪಂಚಾಯ್ತಿಗಳಿಂದ ಆಗಬೇಕಿದೆ ಎಂದರು.


ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿನ ಗ್ರಾಮಪಂಚಾಯ್ತಿಗಳ ಕಾರ್ಯ ಸಾಕಷ್ಟು ಸುಧಾರಿಸಿದೆ. ಕೆಲವೇ ಕೆಲವು ಮಾದರಿ ಗ್ರಾಮಪಂಚಾಯ್ತಿಗಳಲ್ಲಿ ಕೋಟೆಗಂಗೂರಿನ ಗ್ರಾಮಪಂಚಾಯ್ತಿಯೂ ಸೇರಿರುವುದು ಸಂತಸದ ವಿಷಯ. ಆಡಳಿತ ನಡೆಸುತ್ತಿರುವವರಿಗೆ ಜನರು ಸಹಕರಿಸಿದಾಗ ಇಂತಹ ಸಾಧನೆ ಸಾಧ್ಯ ಎಂದರು.
 ಕಾರ್ಯಕ್ಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಡಾ. ಡಿ. ಬಿ. ವಿಜಯಕುಮಾರ್ ಅವರು, ನಮ್ಮ ಆಡಳಿತ ವ್ಯವಸ್ಥೆ ಪಾರದರ್ಶಕ ಹಾಗೂ ಗುಣಮಟ್ಟದಿಂದ ಕೂಡಿರಲು ಈಗಿನ ಸದಸ್ಯರೇ ಕಾರಣ. ಇರುವ ಅಧಿಕಾರದ ದಿನಗಳಲ್ಲಿ ಒಂದಿಷ್ಟು ಜನಾ‌ನುರಾಗಿ ಹಾಗೂ ನೆನಪಿನಲ್ಲಿ ಉಳಿಯುವ ಕಾರ್ಯಗಳನ್ನು ಮಾಡಲು ನಿರ್ಧರಿಸಿದ್ದು, ಈ ವ್ಯಾಪ್ತಿಯ ಎಲ್ಲಾ ಜನ ಸಹಕರಿಸುವಂತೆ ಕೋರಿದರು.


ಕಾರ್ಯಕ್ರಮದಲ್ಲಿ ತಾ.ಪಂ.  ಸಹಾಯಕ ನಿರ್ಧೇಶಕರಾದ ರವಿ ರಾಮಚಂದ್ರ, ಲೋಹಿತ್ ಎಸ್, ವ್ಯವಸ್ಥಾಪಕರಾದ ಪ್ರವೀಣ್,  ಸಹಾಯಕ ತೋಟಗಾರಿಕ ಅಧಿಕಾರಿ ನಾಗಭೂಷಣ್, ಉಪಾಧ್ಯಕ್ಷರಾದ ರೇಖಾ ಬಾಯಿ, ಸದಸ್ಯರಾದ ಮಂಜುನಾಥ್ ಕೆ.ಎನ್., ಕವಿತಾ ಬಾಯಿ, ಕಮಲೀಬಾಯಿ, ಎನ್. ದೂದ್ಯಾನಾಯ್ಕ್, ಶಾಂತಿಬಾಯಿ, ನಾಗಮ್ಮ, ಮಾಲತೇಶ್ ಪಿ.,


ಪಿಡಿಓ ಹೆಚ್. ಶಿವಕುಮಾರ್, ಕಾರ್ಯದರ್ಶಿ ಸೀತಾನಾಯ್ಕ್ , ಸಂತೋಷ್ ಡಿಸಿ, ಮೋಹನ್ ಎಂ., ಗುತ್ತಿಗೆದಾರ ಜಿ. ರಾಕೇಶ್, ಹಿಂದಿನ ಪಿಡಿಓ ರಾಜಣ್ಣ ಪಿ. ರಾಜಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
ಅಂತಿಮವಾಗಿ ನಡೆದ ರಸಮಂಜರಿ ಕಾರ್ಯಕ್ರಮಕ್ಕೆ ಶಿವಮೊಗ್ಗದ ಪ್ರಾಹ್ಲಾದ್ ದೀಕ್ಷಿತ್ ಅವರ ತಂಡ ಬಾಗವಹಿಸಿತ್ತು.

Exit mobile version