Site icon TUNGATARANGA

ಪ್ರೀತಿಯೇ !! ನೀ ಸಂಕುಚಿತನಾ…?, ಶಿಕ್ಷಕಿ ಅಶ್ವಿನಿ ಅವರ ಚಂದದೊಂದು ಬರಹ ಓದಿ

ಅಶ್ವಿನಿ ಅಂಗಡಿ
ಬದಾಮಿ……

ಒಂದು ಅಮೂರ್ತ ಪರಿಕಲ್ಪನೆ ಯಾಗಿರುವ ಪ್ರೀತಿ ಬೇರೊಬ್ಬ ವ್ಯಕ್ತಿಯ ಮೇಲೆ ತೋರುವ ಸೂಕ್ಷ್ಮವಾದ ಕಾಳಜಿಯ ಆಳವಾದ ಮತ್ತು ಅನಿರ್ವಚನೀಯ ಭಾವನೆಗಳನ್ನು ಸಾಮಾನ್ಯವಾಗಿ ಸೂಚಿಸುತ್ತದೆ.ಆದರೂ ಪ್ರಣಯ ಪ್ರೀತಿಯ ಭಾವೋದ್ರಿಕ್ತ ವಾಂಛೆ ಹಾಗೂ ಅನ್ಯೋನ್ಯತೆಯಿಂದ ಹಿಡಿದು ಕೌಟುಂಬಿಕ ಮತ್ತು ಸಾತ್ವಿಕ ಪ್ರೀತಿಯು ಲೈಂಗಿಕತೆ ಭಾವನಾತ್ಮಕ ನಿಕಟತೆಯವರೆಗೆ ಮತ್ತು ಅಲ್ಲಿಂದ ಧಾರ್ಮಿಕ ಪ್ರೀತಿಯ ಗಾಢ ಐಕ್ಯತೆ ಅಥವಾ ಉಪಾಸನೆಯ ವರೆಗೆ ವಿವಿಧ ಭಾವಗಳ ಅನುಭೂತಿಗಳ ಶ್ರೀಮಂತಿಕೆಯನ್ನು ತಿಳಿಸುತ್ತದೆ. ತನ್ನ ವೈವಿಧ್ಯಮಯ ರೂಪಗಳಲ್ಲಿ ಅಂತರ ವ್ಯಕ್ತಿಯ ಸಂಬಂಧಗಳ ಬಹು ಮುಖ್ಯ ಸುಲಭ ಕಾರಕವಾಗಿ ವರ್ತಿಸುವ ಪ್ರೀತಿಯು ತನ್ನ ಮನ್ಹಶಾ ಸ್ತ್ರೀಯ ಪ್ರಾಮುಖ್ಯತೆಯ ಕಾರಣದಿಂದಾಗಿ ಸೃಜನಶೀಲ ಕಲೆಗಳಲ್ಲಿನ ಬಹಳ ಸಾಮಾನ್ಯವಾದ ವಸ್ತುಗಳಲ್ಲಿ ಒಂದಾಗಿ ನಿಂತಿದೆ.


ಇಂತಹ ಹಿನ್ನೆಲೆಯುಳ್ಳ ಪ್ರೀತಿಯ ಪ್ರಾಮುಖ್ಯತೆಯನ್ನು ಕೇವಲ ವಯೋಭಾವನೆಗಳ ತುಡಿತಕ್ಕೆ ಬಲಿಕೊಟ್ಟು ಯುವ ಜನಾಂಗವು ಜೀವನದ ದುಃಖ ಪ್ರಪಾತಕ್ಕೆ ಬಿದ್ದು ಬದುಕನ್ನೇ ಬಿಕರಿ ಮಾಡುತ್ತಿದ್ದಾರೆ.
ಹಾಗಾದರೇ ! ಈ ಪ್ರೀತಿಯ ಕುರಿತಾಗಿ ವಿಶಾಲ ಅರ್ಥವನ್ನು ತುಸು ಸಮಯ ನೀಡಿ ನಿರಾಳ ಮನಸ್ಸಿನಿಂದ ತಿಳಿಯೋಣ ಬನ್ನಿ.

ವ್ಯಾಖ್ಯಾನಗಳು…..

ವರ್ಜಿಲ್ ರ ಹೇಳಿಕೆ…..ಪ್ರೀತಿಗೆ ಸಂಕುಚಿತತೆ ಇಲ್ಲ , ಅದು ಎಲ್ಲವನ್ನು ಜಯಿಸುವ ಶಕ್ತಿ ಹೊಂದಿದೆ ಎಂದಿದ್ದಾರೆ.

ಬಿಟೇಲ್ಸ್ ರ ಹೇಳಿಕೆ…ನಿಮಗೆ ಬೇಕಿರುವುದು ಪ್ರೀತಿ ಮಾತ್ರ ಎಂದು ಸಂಕ್ಷಿಪ್ತ ವಿವರಣೆ ನೀಡಿದ್ದಾರೆ.

ತತ್ವಶಾಸ್ತ್ರದ ಪ್ರಕಾರ …..ಪ್ರೀತಿಯು ಕುಟುಂಬದ ಸದಸ್ಯರ ನಡುವೆ ಸ್ನೇಹಿತರ ಸಲುಗೆಯ ನಡುವೆ ಮತ್ತು ದಂಪತಿಗಳ ದಾಂಪತ್ಯದ ನಡುವೆ ಅಸ್ತಿತ್ವದಲ್ಲಿರಬಹುದು ಪ್ರೀತಿಗೆ ಸಂಬಂಧಿಸಿದ ಅಸಂಖ್ಯಾತ ಮಾನಸಿಕ ರೋಗಗಳು ಅಸ್ತಿತ್ವದಲ್ಲಿವೆ ಎಂದು ಹೇಳಿದ್ದಾರೆ.

ಕ್ಷೇತ್ರವಾರು ಪ್ರೀತಿಯ ಮಹತ್ವ

ರಾಸಾಯನಿಕ ತಳಹದಿ….
.ಹಸಿವು ಅಥವಾ ಬಾಯಾರಿಕೆಯಂತೆ ಪ್ರೀತಿಯನ್ನು ಸಹ ಸಸ್ತನೀಯ ಪ್ರವೃತ್ತಿಯೊಂದರಂತೆ ಕಾಣಲು ಲೈಂಗಿಕತೆಯ ಜೈವಿಕ ಮಾದರಿಗಳು ಒಲವು ತೋರಿಸುತ್ತದೆ

  1. ಭೋಗಾಪೇಕ್ಷೆ …ಭೋಗಾಪೇಕ್ಷೆಯು ಮೈಥುನವನ್ನು ಉತ್ತೇಜಿಸುವ ಆರಂಭಿಕ ಕಾಮೋದ್ರೇಕದ ಲೈಂಗಿಕ ಬಯಕೆಯಾಗಿದ್ದು ,ಟೆಸ್ಟೋಸ್ಟರಾನ್,ಈಸ್ಟ್ರೋಜನ್ ನಂತಹ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.
  2. ಆಕರ್ಷಣೆ….ಆಕರ್ಷಣೆ ಎನ್ನುವುದು ನಿರ್ದಿಷ್ಟ ವ್ಯಕ್ತಿಯ ಮೈಥುನಕ್ಕೆ ಬೇಕಾದ ಹೆಚ್ಚು ವ್ಯಕ್ತಿಗತವಾದ ಮತ್ತು ಪ್ರಣಯಪೇಕ್ಷಿತ ವಾಂಚೆಯಾಗಿರುವ ಫೆರಮನ್ ಗಳು ಡೋಫೆಮಿನ್ ಗಳ ಗುಂಪು ಒಂದನ್ನು ಮೆದುಳು ಸುಸಂಗತವಾಗಿ ಬಿಡುಗಡೆಯಾಗುತ್ತವೆ ಎಂಬುದನ್ನು ನರವಿಜ್ಞಾನದಲ್ಲಿ ತಿಳಿಸಿವೆ. ಆಫೆಂಟಾಮೆನ್ ಗಳು ಮೆದುಳಿನ ಆನಂದ ಹೊಂದುವ ರಾಸಾಯನಿಕವಾಗಿ ಆಕರ್ಷಣೆಯು ಇಲ್ಲಿ ಸಂತೃಪ್ತ ಭಾವನೆಯನ್ನು ತರುವುದಾಗಿದೆ.
  3. ಅನುರಾಗ….. ಒಂದು ವ್ಯವಸ್ಥಿತ ಪ್ರೇಮವು ಸಂಪೂರ್ಣವಾಗಿ ತನ್ಮಯ ಹೊಂದಿ ಸಂತೃಪ್ತ ಮನೋಭಾವನೆಯನ್ನು ಹೊಂದುವುದೇ ಅನುರಾಗವಾಗಿದೆ. ಮನಶಾಸ್ತ್ರೀಯ ತಳಹದಿ…. ಇನ್ನು ಮನಶಾಸ್ತ್ರೀಯ ತಳಹದಿಯಲ್ಲಿ ಪ್ರೀತಿಯನ್ನು ಹೇಳುವುದಾದರೆ ಪ್ರೀತಿ ಎನ್ನುವುದು ಒಂದು ಸಂವೇದನೆಯ ಮತ್ತು ಸಾಮಾಜಿಕ ವಿದ್ಯಮಾನ ಎಂದಿದ್ದಾರೆ.
    ರಾಬರ್ಟ್ ಸ್ಟೀನ್ಬರ್ಗ… ಎನ್ನುವ ಮನ ಶಾಸ್ತ್ರಜ್ಞ ಪ್ರೀತಿಯ ತ್ರಿಕೋನ ಸಿದ್ದಾಂತ ಒಂದನ್ನ ರೂಪಿಸಿದ್ದು ಅನ್ಯೋನ್ಯತೆ ಬದ್ಧತೆ ಹಾಗೂ ಭಾವೋದ್ರೇಕ ಎಂಬ ಮೂರು ವಿಭಿನ್ನ ಅಂಶಗಳನ್ನು ಒಳಗೊಂಡಿದೆ ಎಂದಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಮನುಷ್ಯ ಸಂಬಂಧದ ಕುರಿತು ವಿವಿಧ ಸಿದ್ಧಾಂತಗಳು ರೂಪಗೊಂಡಿವೆ ಈ ಸಿದ್ಧಾಂತಗಳ ಒಲವು ಬಂಧನಗಳು ಬಾಂಧವ್ಯಗಳು ಮತ್ತು ವೈವಾಹಿಕ ಸಂಬಂಧಗಳ ಕುರಿತು ವರ್ಣಿಸುವುದರ ಜೊತೆಗೆ ಪಶ್ಚಿಮಾತ್ಯ ಗ್ರಂಥಗಳು ಪರೋಪಕಾರ ಮತ್ತು ಆತ್ಮಹತ್ಯೆ ಎಂಬ ಎರಡು ಪ್ರಮುಖ ಪ್ರಘಟಗಳಾಗಿ ವಿಂಗಡಿಸಿದ್ದಾರೆ. ನಾವು ಇತರರ ಕುರಿತಾಗಿ ತೋರಿಸುವ ಉದಾತ್ತ ಬೆಳವಣಿಗೆ ತೋರುವ ಕಾಳಜಿಯನ್ನು ಹಾಗೂ ಸರಳ ಸ್ವರಾಧನೆ ಸಂಯೋಜನೆಯನ್ನು ಪ್ರೀತಿ ಎಂದಿದ್ದಾರೆ.
    ಹೀಗೆ ಪ್ರೀತಿಯು ಕೇವಲ ಒಂದು ವ್ಯವಸ್ಥೆಗೆ ಮಾತ್ರ ಸೀಮಿತವಾಗಿರದೆ ಸಾಮಾಜಿಕ ಸಹ ಸಂಬಂಧದಲ್ಲೂ ತನ್ನ ಪಾರಮ್ಯವನ್ನು ಮೆರೆದು ವಿಶಾಲತೆಯನ್ನು ಪಡೆದುಕೊಂಡಿದೆ ಎಂದಿದ್ದಾರೆ
    .

ಧಾರ್ಮಿಕ ತಳಹದಿ….
“ಹಿಂದೂ ಧರ್ಮ”…ಪ್ರೀತಿಯು ಕೇವಲ ಯವ್ವನಾವಸ್ಥೆಗೆ ಸಂಬಂಧಿಸಿರದೆ ಅದು ಹುಟ್ಟುವಾಗಿನಿಂದ ಹಿಡಿದು ಸಾಯುವ ತನಕ ಪ್ರತಿವ್ಯಕ್ತಿಗಳಲ್ಲಿ ಪ್ರತಿ ಸಂಬಂಧಗಳಲ್ಲಿ ಉಂಟಾಗುವ ಸಂವೇದನಾಶೀಲತೆಯ ತೃಪ್ತಿಯಾಗಿದೆ ಎಂದು ಈ ಧರ್ಮದಲ್ಲಿ ಪ್ರೀತಿಯ ವಿಶಾಲತೆಯನ್ನು ಹೇಳಿದ್ದಾರೆ.
“ಬೌದ್ಧ ಧರ್ಮ”
ಬೌದ್ಧ ಧರ್ಮದಲ್ಲಿ ಅದ್ವೇಶ ಮತ್ತು ಮೆಟ್ಟಗಳು ಧರ್ಮಾರ್ಥದ ಪ್ರೀತಿಗಳ ಮೇಲೆ ಹೇಳುವುದಾದರೆ ಈ ಪ್ರೀತಿ ಶರತ್ತುಗಳಿಂದ ಮುಕ್ತವಾಗಿರುತ್ತದೆ ಆತ್ಮಅಂಗೀಕಾರದ ಅಗತ್ಯವಿರುತ್ತದೆ ಭಾಂದವ್ಯ ಮತ್ತು ಲೈಂಗಿಕತೆಯ ಕುರಿತಾಗಿರುವ ಹಾಗೂ ಸ್ವಹಿತಾಶಕ್ತಿ ಇಲ್ಲದೆ ಸಂಭವಿಸುವುದು ಅಪರೂಪ ವಾಗಿರುವ ಸಾಮಾನ್ಯ ಪ್ರೀತಿಗಿಂತ ಇದು ಸ್ವಲ್ಪ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ.
“ಇಸ್ಲಾಂ ಧರ್ಮ”
ಇಸ್ಲಾಮಿಕ್ ದೃಷ್ಟಿಕೋನವು ಹೀಗೆ ಹೇಳುತ್ತದೆ ಪ್ರೀತಿಯು ನಂಬಿಕೆ ಹೊಂದಿರುವ ಎಲ್ಲರಿಗೂ ಅನ್ವಯಿಸುವ ವಿಶ್ವಭಾತೃತ್ವವಾಗಿದೆ ನಮ್ಮ ರಕ್ತ ಸಂಬಂಧ ಹಾಗೂ ಒಡನಾಡಿಗಳ ಜೊತೆ ಉಚಿತ ಬಾಂಧವ್ಯವನ್ನು ಬೆಳೆಸಿಕೊಂಡು ಉತ್ತಮ ನಾಗರಿಕತೆಯ ಬೆಳವಣಿಗೆಗೆ ಕಾರಣವಾಗಬೇಕಾಗಿದೆ.

ಭಾವನಾತ್ಮಕ ತಳಹದಿ….
ಕುಟುಂಬವು ಸಮಾಜದ ಒಂದು ಚಿಕ್ಕ ಘಟಕವಾಗಿದ್ದು ಹಿಂದಿನ ಕಾಲದಲ್ಲಿ ನಾವು ಅವಿಭಕ್ತ ಕುಟುಂಬಗಳನ್ನು, ಇತ್ತೀಚಿನ ದಿನಗಳಲ್ಲಿ ವಿಭಕ್ತ ಕುಟುಂಬಗಳನ್ನು ಕಾಣಬಹುದಾಗಿದೆ.ಮನುಷ್ಯ ಒಬ್ಬ ಭಾವನಾತ್ಮಕ ಜೀವಿಯಾಗಿದ್ದು ಪರಸ್ಪರ ಪ್ರೀತಿ ವಿಶ್ವಾಸ ಸಹ ಸಂಬಂಧ ಹಾಗೂ ಭಾವನೆಗಳ ವಿನೀಮಯ ಮಾಡಿಕೊಳ್ಳುತ್ತಾ ಬದುಕುವುದಾಗಿದೆ.ಹೀಗಿದ್ದಲ್ಲಿ ರಕ್ತ ಸಂಬಂಧಗಳು ಸ್ನೇಹ ಪ್ರೀತಿ ಹಾಗೂ ಮದುವೆ ಸಂಭಂಧಗಳು ಮನುಷ್ಯರಲ್ಲಿ ಉತ್ತಮ ಬಾಂಧವ್ಯಗಳ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.ಇಲ್ಲಿಯೂ ಕೂಡ ಪ್ರೀತಿಯು ತನ್ನ ಪಾರುಪತ್ಯವನ್ನು ಮೆರೆದಿದ್ದು ಪರಸ್ಪರ ಹೊಂದಾಣಿಕೆಯಿಂದ ಬಾಳಲು ಇಲ್ಲಿ ಪ್ರೀತಿಯ ಕೊಡುಗೆ ಅವಶ್ಯಕತೆ ಇದೆ.

      ಈ  ಎಲ್ಲಾ ಮೇಲಿನ ಅಂಶಗಳ ಅವಲೋಕನ ಮಾಡಿದಾಗ ನಾವು ತಿಳಿಯಬೇಕಾಗಿದ್ದು ಹೀಗೆ ಇದೆ "ಪ್ರೀತಿ" ಅನ್ನೋದು ಕೇವಲ ಸಂಕುಚಿತ ವಿಷಯವಾಗಿರುವುದಲ್ಲ ನಾವು ಪಶ್ಚಿಮಾತ್ಯ ಸಂಸ್ಕೃತಿಯ ಅತೀವ ಅಂಗೀಕಾರದಿಂದ ಈ "ವ್ಯಾಲೆಂಟೈನ್ ಡೇ"(ಪ್ರೇಮಿಗಳ ದಿನ)ವೆಂದು ಆಚರಿಸುತ್ತಾ, ವಯಸ್ಸಿನ ಆಕರ್ಷಣೆಗೆ ಒಳಗಾಗಿ ಯುವಕರು ಪ್ರೀತಿ ಪ್ರೇಮ ಎಂಬ ಕುರುಡು ಅವಸ್ಥೆಗೆ ಬಿದ್ದು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ . ಇತ್ತೀಚಿಗೆ ಪ್ರೀತಿ ಪ್ರೇಮವೆನ್ನುವುದು ಒಂದು ಆಕರ್ಷಣೆ ಹಾಗೂ ದೈಹಿಕ ಲಾಲಸೆಗಳ ಆಮಿಷವಾಗಿದೆ,ಓದಬೇಕಾದ ಸಮಯ (ಪ್ರೌಢಾವಸ್ಥೆ,ಹಾಗೂ ಯೌವನಾವಸ್ಥೆ)ಯಲ್ಲಿ ದೈಹಿಕ ಆಕರ್ಷಣೆ ಉಂಟಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಆಧುನಿಕ ಶೈಲಿಯ ವಿಡಿಯೋಗಳ ಪ್ರಭಾವಕ್ಕೆ ಒಳಗಾಗಿ ತಾವು ಅದೇ ತರಹ (ಹೀರೋ ಹೀರೋಯಿನ್)ಗಳ ರೀತಿ ಪ್ರೀತಿಸಬೇಕು ಎಂದು ಅಪ್ರಭುದ್ಧವಯಸ್ಸಿನಲ್ಲಿ ಸಂಗಾತಿಗಳ ಹುಡುಕಾಟ ಮಾಡುತ್ತಾರೆ. ನಂತರ ಆಗೋದೇ ಬೇರೆ ! ಕದ್ದು ಮುಚ್ಚಿ ಬೇಟಿ ಮಾಡುವುದು, ಪ್ರೀತಿಯ ವಿನಿಮಯದ ಮಾತು, ಮೆಸೇಜುಗಳು ಹಾಗೂ ಪ್ರೇಮ ಕಾಣಿಕೆ ವಸ್ತುಗಳ ವಿನಿಮಯ ಎಲ್ಲವೂ ಆಕಾಶದಲ್ಲಿ ತೇಲಾಡಿಸಿದಂತೆ ನಡೆಯುವವು.ಮುಂದೆ ಓದಿನಲ್ಲಿ ಹಿಂದೆ ಬಿದ್ದು ಫೇಲ್ ಆಗುವುದು,ಪಾಲಕರ ಕೈಯಲ್ಲಿ ಸಿಕ್ಕಿಹಾಕಿಕೊಳ್ಳುವುದು,

ಈ ಪ್ರೀತಿ ಪ್ರೇಮ ಮಾಡಬಾರದು ಎಂದು ಅವರು ತಿಳಿ ಹೇಳಿದರೆ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವರು.
ಇಷ್ಟೇ ಅಲ್ಲದೆ ಪ್ರೀತಿಸಿದ ಹುಡುಗ ಹುಡುಗಿ ಕೈ ಕೊಟ್ಟರೆ ಬದುಕೇ ಬೇಡವೆಂದು ತಮ್ಮ ಅಮೂಲ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ತಮ್ಮ ತಿಳಗೇಡಿತನದಿಂದ.
ಸ್ವಲ್ಪ ತಡೆಯಿರಿ, ಯುವ ಜನಾಂಗವೇ! ದಯವಿಟ್ಟು ಈ ಅವ್ಯವಸ್ಥಿತ ಬಲೆಯಲ್ಲಿ ಬಿದ್ದು ಜೀವನ ಹಾಳು ಮಾಡಿಕೊಳ್ಳುವುದರ ಬದಲು ಈ ಪ್ರೀತಿಯ ವಿಶಾಲ ಶಾಖೆಗಳ ಬಗ್ಗೆ ತಿಳಿದು ನಡೆಯಿರಿ ಆಗ ಬಾಳು ಬಂಗಾರವಾಗುವುದು ಮೊದಲು ನಿಮ್ಮ ಓದು ನಂತರ ಸಾಧನೆಗಳು ಇವೆಲ್ಲವೂ ಸರಿಯಾದ ಸಮಯದಲ್ಲಿ ಯಶಸ್ವಿಯಾಗಿದ್ದೆ ಆದರೇ ಸಂಗಾತಿಗಳು ನಿಮ್ಮನ್ನು ಅರಿಸಿಕೊಂಡು ನೀವಿದ್ದಲ್ಲಿಯೇ ಬರುವರು ಆಗ ಸಮಾಜದಲ್ಲಿ ಒಂದು ಗೌರವ ಸ್ಥಾನದೊಂದಿಗೆ ಅಲ್ಲದೆ ಕುಟುಂಬಕ್ಕೆ ಹೆಮ್ಮೆಯ ಮಕ್ಕಳಾಗಿ ನೀವು ಜೀವಿಸಬಹುದಲ್ಲವೇ ಏನಂತೀರಿ….??

Exit mobile version