ಶಿವಮೊಗ್ಗ,ಡಿ.23:
ಶಿವಮೊಗ್ಗದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಇಂದು ನೇಣಿಗೆ ಶರಣಾಗಿರುವ ಘಟನೆಹೆ ನಾನಾ ಅನುಮಾನಗಳು ಸುತ್ತಿಕೊಂಡಿವೆ. ಈ ಆವರಣದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ (22) ವರ್ಷದ ಲಲಿತಾ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಿಮ್ಸ್ ಆಡಳಿತಾಧಿಕಾರಿ ಶಿವಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿ ಲಲಿತಾರವರ ಸಾವಿಗೆ ಕಾರಣ ಇನ್ನು ತಿಳಿದು ಬಂದಿಲ್ಲ. 2017-18 ನೇ ಸಾಲಿನಲ್ಲಿ ಈ ಯುವತಿ ಶಿವಮೊಗ್ಗ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ದಾಖಲಾಗಿದ್ದರು. ತುಂಗಾ ವಿದ್ಯಾರ್ಥಿನಿ ನಿಲಯದ ರೂಂ ನಂಬರ್ 4 ರಲ್ಲಿ ಅವರು ತಂಗಿದ್ದರು ಎಂದು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆಯ ವರೆಗೆ ಲಲಿತ ಬಾಗಿಲು ತೆಗೆಯದೆ ಇದ್ದಾಗ ಅವರ ಸ್ನೇಹಿತೆಯರು ಸೆಕ್ಯೂರಿಟಿಯವರಿಗೆ ತಿಳಿಸಿದ್ದಾರೆ. ಸೆಕ್ಯೂರಿಟಿಯವರು ಕಿಟಕಿ ತೆಗೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಲಲಿತಾ ಕಂಡು ಕಂಡುಬಂದಿದ್ದಾರೆ.
ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊನೆಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಅವರು ಮಾಮೂಲಿಯಾಗಿ ಓದುತ್ತಿದ್ದರು. ಎಂದ ಸಿಎಒ ಅವರು ಕಳೆದ ವರ್ಷವೂ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ.
ಸಿಎಒ ಶಿವಕುಮಾರ್ ಅವರ ಈ ಭರ್ಜರಿ ಶಾಕಿಂಗ್ ನ್ಯೂಸ್ ಸಹ ನೀಡಿದ್ದಾರೆ. ಈ ಹಿಂದೆ ಲಲಿತಾ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಹೇಳಿದ್ದಾರೆ.
ಕಳೆದ ವರ್ಷ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಲಲಿತಾರಿಂದ ಮುಚ್ಚಳಿಕೆಗಳನ್ನ ಪಡೆದು ಮತ್ತೊಮ್ಮೆಆತ್ಮಹತ್ಯೆಗೆ ಯತ್ನಿಸದಂತೆ ಮುಂಜಾಗೃತಿ ವಹಿಸಲಾಗಿತ್ತು. ಆದರೆ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಅವರ ಆತ್ಮಹತ್ಯೆಯ ಕಾರಣ ಸ್ಪಷ್ಟ ಆಗಿಲ್ಲ. ನಾನಾ ಅನುಮಾನಗಳು ಹುಟ್ಟಿಕೊಂಡಿವೆ. ಅದರ ಹುಡುಕಾಟವಷ್ಟೆ ಈಗ ಪೊಲೀಸರ ಜವಾಬ್ದಾರಿ.