Site icon TUNGATARANGA

ಹಸಿವುಮುಕ್ತ ಭಾರತ ನಿರ್ಮಾಣಕ್ಕೆ /ರಾಷ್ಟಪತಿಗಳು ಮಧ್ಯಪ್ರವೇಶ ಮಾಡಲು ಅಗ್ರಹ

ಶಿವಮೊಗ್ಗ: ಹಸಿವು ಮುಕ್ತ ಭಾರತವನ್ನಾಗಿಸುವ ನಿಟ್ಟಿನಲ್ಲಿ ರಾಷ್ಟಪತಿಗಳು ಕೂಡಲೇ ಮಧ್ಯಪ್ರವೇಶ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಭಾರತ ವಿಶ್ವಗುರು ಆಗಲು ಹೊರಟಿರುವುದು ಒಳ್ಳೆಯ ವಿಚಾರ. ಆದರೂ, ಆರ್ಥಿಕತೆಯಲ್ಲೂ ಕೂಡ ಲಕ್ಷಾಂತರ ಕೋಟಿ ಮೀರಿ ರಾಜ್ಯ ಮತ್ತು ಕೇಂದ್ರಗಳು ಬಜೆಟ್ ಮಂಡಿಸುತ್ತಿದ್ದರೂ ಬಡ ನಾಗರೀಕರು ಹಸಿವಿನಿಂದ ಸಾಯುತ್ತಿರುವುದು ನಿಂತಿಲ್ಲ. ಇದು ವಿಷಾದದ ಸಂಗತಿಯಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಸಿವುಮುಕ್ತ ಭಾರತ ನಿರ್ಮಾಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಎಲ್ಲಾ ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರೇತರ ಖಾಸಗಿ ಸಂಘ ಸಂಸ್ಥೆಗಳ ಮೂಲಕ ಗಂಜಿ ಕೇಂದ್ರಗಳನ್ನು ತೆರೆದು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿಕೊಡಬೇಕೆಂದು ಶಶಿಕುಮಾರ್ ಗೌಡ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ವೆಂಕಟೇಶ್ ಇದ್ದರು.

Exit mobile version