Site icon TUNGATARANGA

ಚಿಕ್ಕವರಿಗೆ ನಿಮ್ ವಾಹನ ಕೊಟ್ಟರೆ ಬರೋಬ್ಬರಿ ದಂಡದ ಬಹುಮಾನ/ ಶಿವಮೊಗ್ಗದಲ್ಲಿ ತಾಯಿ ಕಟ್ಟಿದ ದಂಡವೆಷ್ಟು ಗೊತ್ತಾ?

ಶಿವಮೊಗ್ಗ, ಫೆ.08:
ಮಕ್ಕಳಿಗೆ ವಯಸ್ಸಾಗುವ ತನಕ, ಅವರು ಚಾಲನಾ ಪರವಾನಿಗೆ ಪಡೆಯುವ ತನಕ ಯಾವುದೇ ಕಾರಣಕ್ಕೂ ಯಾರೂ ತಮ್ಮ ವಾಹನವನ್ನು ಚಲಾಯಸಲು ನೀಡಬೇಡಿ. ಹೆಚ್ಚು ಕಡಿಮೆ ಆಗದಿದ್ದರೂ ಪೊಲೀಸರ ಕೈಗೆ ಸಿಕ್ರೆ ಬರೋಬ್ಬರಿ ದಂಡ ಕಟ್ಟೋದು ಗ್ಯಾರಂಟಿ.
ಇಲ್ಲಿ ತಾಯಿ ತನ್ನ ಅಪ್ರಾಪ್ತ ವಯಸ್ಕ ಮಗನಿಗೆ ತಮ್ಮ ಹೆಸರಲ್ಲಿದ್ದ ವಾಹನ ಕೊಟ್ಟು ಬರೋಬ್ಬರಿ 30000 ರೂ. ದಂಡ ಕಟ್ಟಿದ್ದಾರೆ.


ಹೇಗೆ? ಎಲ್ಲಿ ನೋಡಿ-
ದಿನಾಂಕಃ 30-01-2024 ರಂದು ಶ್ರೀ ನವೀನ್ ಕುಮಾರ್ ಮಠಪತಿ, ಪಿಎಸ್ಐ, ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆ ರವರು ಶಿವಮೊಗ್ಗ ನಗರದ ಎಸ್ ಪಿ.ಎಂ.ರಸ್ತೆಯ ಕೋಟೆ ಆಂಜನೇಯನ ದೇವಾಲಯದ ಹತ್ತಿರ ವಾಹನ ತಪಾಸಣೆ ಮಾಡುವಾಗ 17 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬನು ವಾಹನ ಚಾಲನಾ ಪರವಾನಿಗೆ ಇಲ್ಲದೆ ಮೊಪೆಡ್ ಅನ್ನು ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಅಪ್ರಾಪ್ತ ವಯ್ಯಸ್ಸಿನ ಬಾಲಕನ ತಾಯಿಯ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಲಾಗಿರುತ್ತದೆ. ಘನ 3ನೇ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಮೊಗ್ಗದ ನ್ಯಾಯಾಧೀಶರು ಮೊಪೆಡ್ ವಾಹನದ ಮಾಲೀಕರಿಗೆ ರೂ 30,000/- ದಂಡ ವಿಧಿಸಿರುತ್ತಾರೆ.

Exit mobile version