ಶಿವಮೊಗ್ಗ: ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಎಲ್ಲಾ ಸಚಿವರು ಮತ್ತು ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವ ದೆಹಲಿ ಚಲೋ ಬೆಂಬಲಿಸಿ ಇಂದು ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರ ಮನೆಗೆ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಐವತ್ತಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ
ಕೇAದ್ರ ಬಿಜೆಪಿ ಸರ್ಕಾರವು 2017 – 18 ರಿಂದ ಇಲ್ಲಿಯವರೆಗೆ ಕರ್ನಾಟಕ ರಾಜ್ಯಕ್ಕೆ ಜಿ ಎಸ್ ಟಿ ಯ ಪರಿಹಾರದ ನಿಧಿಯಾದ 1,87,000 ಕೋಟಿಗೊಳಷ್ಟು ಹಣವನ್ನು ನೀಡದೆ ಅನ್ಯಾಯ ಮಾಡಿ ಈ ವರ್ಷ ಇಡೀ ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಅನ್ನು ಕಟ್ಟುವ ರಾಜ್ಯ ಎಂದರೆ ಅದು ಕರ್ನಾಟಕ ಕರ್ನಾಟಕ ರಾಜ್ಯದಿಂದ ಗೆದ್ದು ಹೋದ ಬಿಜೆಪಿ 25 ಸಂಸದರು ಸಂಸತ್ ನಲ್ಲಿ ತುಟಿ ಬಿಚ್ಚದೆ ರಾಜ್ಯಕ್ಕೆ ಬರಬೇಕಾದ ಪರಿಹಾರ ಹಾಗೂ ರೈತರ ಬರ ಪರಿಹಾರ, ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಹಲವಾರು ಯೋಜನೆಗಳ ಪಾಲನ್ನು ಕೇಳದೆ ಅಸಮರ್ಥ ತುಟಿ ಬಿಚ್ಚಿದ ಸಂಸದರಾಗಿದ್ದಾರೆ ಕೂಡಲೇ ರಾಷ್ಟçಪತಿಗಳು ಮಧ್ಯಪ್ರವೇಶಿಸಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್, ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಪ್ರಮುಖರಾದ ಬಿ. ಲೋಕೇಶ್, ಎಸ್ ಕುಮಾರೇಶ್, ಎಚ್ ಪಾಲಾಕ್ಷಿ, ಎಂ. ರಾಹುಲ್, ಸಂದೀಪ್, ಸುಂದರ್ ರಾಜ್ , ಎಂ. ರಾಕೇಶ್, ಸುಹಾಸ್ ಗೌಡ, ಎನ್.ಎಸ್ ಆನಂದ್, ನದೀಮ್, ಮುಕ್ಬಲ್, ಚಂದ್ರಶೇಖರ್, ಪ್ರಶಾಂತ್ ರಾಯ್, ಗೋಪಿ, ಏನೋಶ್, ಇನ್ಶಾಲ್, ರಾಯಿಲ್, ಪ್ರಶಾಂತ್ ಭಾಗವಹಿಸಿದ್ದರು.