Site icon TUNGATARANGA

ಮೆಗಾನ್ ಆಸ್ಪತ್ರೆಗೆ ಶಿವಮೊಗ್ಗ ಡಿಸಿ ದಿಢೀರ್ ಬೇಟಿ/ ಪರಿಶೀಲನೆ- ತಪ್ಪು ಕಂಡಾಗ ಸಪರೇಟಾಗಿ ಜಾಡಿಸಿದ್ರು


ಶಿವಮೊಗ್ಗ,ಫೆ. 6:

ಶಿವಮೊಗ್ಗದ ನೂತನ ಜಿ ಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವಿವಿಧ ವಿಭಾಗಗಳು ಮತ್ತು ವಾರ್ಡುಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.


ರಕ್ತನಿಧಿಯ ರಕ್ತ ಶೇಖರಣಾ, ರಕ್ತ ವಿಭಜನಾ ಘಟಕ, ಸೀರಮ್ ಪರೀಕ್ಷಾ ಕೊಠಡಿ, ಫ್ಲೆಬೊಟಮಿ ವಿಭಾಗ, ರಕ್ತ ಸಂಬಂಧಿತ ಖಾಯಿಲೆಗಳ ಹಗಲು ಆರೈಕೆ ಕೇಂದ್ರ, ಐಸಿಸಿಯು ಘಟಕ, ಓಬಿಜಿ ವಿಭಾಗ, ಎನ್‍ಐಸಿಯು, ತಾಯಿ ಎದೆಹಾಲು ಶೇಖರಣಾ ಕೇಂದ್ರ ‘ಅಮೃತಧಾರೆ’, ಶಸ್ತ್ರಚಿಕಿತ್ಸೆ ಕೊಠಡಿ, ಇತರೆ ವಿಭಾಗಗಳಿಗೆ ತೆರಳಿ ವೀಕ್ಷಣೆ ಮಾಡಿ, ಸಿಮ್ಸ್ ನಿರ್ದೇಶಕರಾದ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಇತರೆ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಆಸ್ಪತ್ರೆ ಸೇವೆಗಳ ಕುರಿತು ಪರಿಶೀಲನೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದರು.

ಕೆಲವೆಡೆಯ ತಪ್ಪುಗಳಿಗೆ ಸಪರೇಟಾಗಿ ಸಂಬಂಧಿಸಿದವರನ್ನು ಕರೆದು ಕೊನೆ ಗಡಯವು ನೀಡುವ ಮೂಲಕ ಸೈಲೆಂಟಾಗಿ ಜಾಡಿಸಿದರು.
ನಂತರ ಹೊಸದಾಗಿ ನಿರ್ಮಾಣ ವಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಿದರು.

Exit mobile version