Site icon TUNGATARANGA

ಅತ್ಯಾಧುನಿಕ ಲೇಡೀಸ್ ಬ್ರಾಂಡೆಡ್ ಬಟ್ಟೆಗಳ ಅಂಗಡಿ “ಡ್ರೆಸ್ ಲೈನ್’/ ಕುವೆಂಪು ರಸ್ತೆಯಲ್ಲಿ ಫೆ. 7ರಿಂದ ಆರಂಭ

ಶಿವಮೊಗ್ಗ: ಲೇಡೀಸ್ ಬ್ರಾಂಡೆಡ್ ಬಟ್ಟೆಗಳ ಅತ್ಯಾಧುನಿಕ ಅಂಗಡಿ “ಡ್ರೆಸ್ ಲೈನ್” ನಗರದ  ಶಿವಮೂರ್ತಿ ವೃತ್ತದ ಬಳಿ ಕುವೆಂಪು ರಸ್ತೆಯಲ್ಲಿ ಫೆ. 7ರಿಂದ ಆರಂಭವಾಗಲಿದೆ.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಂಗಡಿಯ ಮಾಲಕಿ ರೋಹಿಣಿ ಮಂಜುನಾಥ, ಜನತೆ ಇಷ್ಟಪಡುವ ವೈವಿಧ್ಯಮಯ ಡ್ರೆಸ್ಗಳು ಇಲ್ಲಿ ಲಭ್ಯವಿರಲಿವೆ. ಹಲವು ವರ್ಷಗಳಿಂದ ಇದೇ ವೃತ್ತಿಯಲ್ಲಿರುವ ತಾನು ಮಹಿಳೆಯರ ಅಭಿರುಚಿಗೆ ತಕ್ಕಂತೆ ಬದಲಾಗುತ್ತಿರುವ ಆಸಕ್ತಿಯನ್ನು ಗಮನಿಸಿ  ಬ್ರಾಂಡೆಡ್ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಇಲ್ಲಿ ಕಲ್ಪಿಸುತ್ತಿದ್ದೇನೆ. ಇಂದಿನ ಆನ್‍ಲೈನ್ ವಹಿವಾಟಿನ ಭರಾಟೆಯ ಮಧ್ಯೆಯೂ ಜನರು ಉತ್ತಮವಾದುದನ್ನು ಅಂಗಡಿಯಲ್ಲೇ ನಿರೀಕ್ಷಿಸುತ್ತ್ತಾರೆ. ಗ್ರಾಹಕರ ಮನೋಭಿರುಚಿಯನ್ನು ಅಭ್ಯಸಿಸಿ ಈ ಅಂಗಡಿಯನ್ನು ಆರಂಭಿಸುತ್ತಿರುವುದಾಗಿ ವಿವರಿಸಿದರು.

  ಹೊಸ ನಮೂನೆಯ ಬಟ್ಟೆಗಳು, ಆಕರ್ಷಕ ದಿರಿಸುಗಳು ಈಗ  ಎಲ್ಲೆಡೆ ಗಮನ ಸೆಳೆಯುತ್ತಿವೆ. ದಿನಂಪ್ರತಿ ಹೊಸ ಬ್ರಾಂಡ್ ಗಳು ಲಗ್ಗೆ ಇಡುತ್ತಿವೆ. ಇದರಿಂದ ಗ್ರಾಹಕರೂ ಸಹ ನವೀನ ಮಾದರಿಯ ಶೈಲಿಯ ಬಟ್ಟೆಗಳಿಗೆ ಮಾರುಹೋಗುತ್ತಿದ್ದ್ದಾರೆ.

ಆನ್ ಲೈ ನ್‍ನಲ್ಲಿ ಇವುಗಳನ್ನು ಹುಡುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲವಾಗುವಂತೆ, ನಗರದಲ್ಲೇ ಇದು ಕೈಗೆಟುಕುವ ದರದಲ್ಲಿ ಸಿಗುವ ವ್ಯವಸ್ಥೆ ಕಲ್ಪಿಸುವುದು ತನ್ನ ಗುರಿಯಾಗಿದೆ ಎಂದರು.

 ಪತ್ರಿಕಾಗೋಷ್ಟಿಯಲ್ಲಿ  ಮಂಜುನಾಥ ಮತ್ತು ಸಮರ್ಥ್ ಹಾಜರಿದ್ದರು.

Exit mobile version