Site icon TUNGATARANGA

ಜನರ ಹಿತಕ್ಕಾಗಿ ಮಾಡಿದ ಯಾವುದೇ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ರದ್ದುಪಡಿಸುವುದಿಲ್ಲ :ಇಂಧನ ಸಚಿವ ಕೆ.ಜೆ. ಜಾರ್ಜ್

ಶಿವಮೊಗ್ಗ,ಫೆ.03: ಭದ್ರಾವತಿಯ ವಿದ್ಯುತ್ ಉತ್ಪಾದನಾ ಘಟಕದ ಬಳಿ ನೀರನ್ನು ಮತ್ತೆ ಸಂಗ್ರಹಿಸಿ ಸುಮಾರು 3500 ಕೋಟಿ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಲಾಗುವ ನೀರನ್ನು ಮತ್ತೆ ಸಂಗ್ರಹಿಸಿ ಮತ್ತೆ ವಿದ್ಯುತ್‍ಗೆ ಬಳಸುವ ಕಾರ್ಯ ವರಾಹಿ ಮತ್ತು ಇನ್ನೆರಡು ಕಡೆ ನಡೆದಿದೆ.  ದಿನದ 24 ಗಂಟೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಉಚಿತ ವಿದ್ಯುತ್ ಯೋಜನೆ ಈಗಾಗಲೇ 1.62 ಕೋಟಿ ಜನರಿಗೆ ಲಾಭವಾಗಿದೆ. ನಿರಂತರವಾಗಿ ವಿದ್ಯುತ್ ನೀಡುತ್ತಿದ್ದೇವೆ.

ಬರಗಾಲ ಬಂದಾಗ ನಿರ್ವಹಣೆ ದೃಷ್ಠಿಯಿಂದ ಕೆಲವು ಟರ್ಬಲ್ ಪ್ಲ್ಯಾಂಟ್‍ಗಳನ್ನು ನಿಲ್ಲಿಸಿದ್ದೆವು. ಈಗ ಮತ್ತೆ ಪ್ರಾರಂಭಿಸಿದ್ದೇವೆ. ಬೇಡಿಕೆ ದುಪ್ಪಟ್ಟಾಗಿದೆ. 9 ಸಾವಿರ ಮೆಗಾವ್ಯಾಟ್ ಇದ್ದದ್ದು 18 ಸಾವಿರ ಮೆಗವ್ಯಾಟ್ ಬೇಡಿಕೆ ಇದೆ. ನೀರಾವರಿಗೆ 5 ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದೆವು. ಈಗ 7 ಗಂಟೆಗೆ ಹೆಚ್ಚಿಸಲಾಗಿದೆ. ಅಭಾವ ಇದ್ದರು ಕೂಡ ವಿದ್ಯುತ್‍ನ್ನು ಖರೀದಿ ಮಾಡಿ ಕೊಡುತ್ತೇವೆ. ಇದಕ್ಕೆ ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ ಎಂದರು.

ಯಾವುದೇ ಗ್ಯಾರಂಟಿ ಯೋಜನೆ ರದ್ದು ಮಾಡುವುದಿಲ್ಲ. ಬಾಲಕೃಷ್ಣ ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳೇ ಪದೇ ಪದೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ. ಜನರ ಹಿತಕ್ಕಾಗಿ ಮಾಡಿದ ಯಾವುದೇ ಯೋಜನೆಯನ್ನು ಕಾಂಗ್ರೆಸ್ ಸರ್ಕರ ರದ್ದುಪಡಿಸುವುದಿಲ್ಲ ಇದು ಬಿಜೆಪಿಯವರ ಕುತಂತ್ರದ ಹೇಳಿಕೆ ಎಂದರು.

ಡಿ.ಕೆ.ಸುರೇಶ್‍ರವರ ಹೇಳಿಕೆಗೆ ಖರ್ಗೆಯವರು ಉತ್ತರಿಸಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರಿಗೆ ಶರಾವತಿ ನೀರು ಕೊಂಡೊಯ್ಯುವ ಪ್ರಶ್ನೆನೇ ಇಲ್ಲ. ಮೇಕೆ ದಾಟು ಯೋಜನೆ ಮೂಲಕ ಬೆಂಗಳೂರಿಗೆ ನೀರು ಹರಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ಇಂಧನ ಇಲಾಖೆಯ ಅಧಿಕಾರಿಗಳು ಇದ್ದರು.

Exit mobile version