Site icon TUNGATARANGA

ಶೇ.100 ರಷ್ಟು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಟಿಕೇಟ್ ನನಗೆ : ಆಕಾಂಕ್ಷಿ ಎಸ್.ಪಿ.ದಿನೇಶ್

ಶಿವಮೊಗ್ಗ,ಫೆ.೦೫: ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಸೂಕ್ಷ್ಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಆಕಾಂಕ್ಷಿ ಎಸ್.ಪಿ.ದಿನೇಶ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಗದೀಶ್ ಶೆಟ್ಟರ್ ಕಾಂಗ್ರೆಸ್‌ನಿಂದ ಬಿಜೆಪಿಗೆ ಮರಳಿ ಹೋದ ನಂತರ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುವವರ ಬಗ್ಗೆ ಅತ್ಯಂತ ಎಚ್ಚರಿಕೆಯ ನಡೆಯನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಕೂಡ ಈ ಬಗ್ಗೆ ತಿಳಿಸಿದ್ದಾರೆ ಎಂದರು.


ಈ ಎಲ್ಲಾ ಹಿನ್ನಲೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆಯೂ ಕೂಡ ಕಾಂಗ್ರೆಸ್ ಹೈಕಮಾಂಡ್ ಸೂಕ್ಷ್ಮವಾಗಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳುವ ಮೂಲಕ ಆಯನೂರು ಮಂಜುನಾಥ್ ಅವರಿಗೆ ತಿರುಗೇಟು ನೀಡಿದರು. ಅಲ್ಲದೇ ಹಲವು ಬಾರಿ ಆಯನೂರು ಪಕ್ಷಾಂತರ ಮಾಡಿದ್ದಾರೆ ಎಂದರು.


ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎಐಸಿಸಿಗೆ ಶಿಫಾರಸ್ಸು ಮಾಡಿರುವ ಪಟ್ಟಿಯಲ್ಲಿ ನನ್ನ ಹೆಸರೇ ಮೊದಲು ಇದೆ. ಆಯನೂರು ಹೆಸರನ್ನು ಕೂಡ ಶಿಫಾರಸ್ಸು ಮಾಡಿದ್ದಾರೆ. ನನಗೆ ಈಗಾಗಲೇ ಹೈಕಮಾಂಡ್ ಮೌಖಿಕವಾಗಿ ತಿಳಿಸಿ, ಕ್ಷೇತ್ರದಲ್ಲಿ ಓಡಾಡುವಂತೆ ಸೂಚನೆ ನೀಡಿದ್ದಾರೆ. ಈಗಾಗಿ ನಾನು ಈಗಾಗಲೇ ಚುನಾವಣೆಯ ಕಣದಲ್ಲಿ ಇದ್ದೇನೆ. ಶೇ.೧೦೦ ರಷ್ಟು ಟಿಕೇಟ್ ನನಗೆ ಸಿಗುತ್ತದೆ ಎಂದರು.


ಗುರುಬಲ ಮತ್ತು ಕುರುಬಲ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕುರು ಏಳುವ ಜಾಗವನ್ನು ಆಯನೂರು ಮಂಜುನಾಥ್ ಅದು ಹೇಗೆ ಬಗ್ಗಿ ನೋಡಿದರು ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ ಅವರು, ಕೆಪಿಸಿಸಿ ವಕ್ತಾರರಾಗಿ ಅವರು ಏನು ಮಾತನಾಡಬೇಕು ಎಂಬುವುದೇ ಗೊತ್ತಿಲ್ಲ. ಯೋಗೀಶ್ ಯಾರು ಎಂದು ಪ್ರಶ್ನೆ ಮಾಡುತ್ತಾರೆ. ಅವರಿಗೆ ೬೦ ಅರಳುಮರಳು ಇರಬಹುದು. ಬಹುಶಃ ನಾವು ಅವರ ವಯಸ್ಸಿಗೆ ಬಂದರೆ ಮರೆವು ಆಗಬಹುದು ಎಂದರು.
ತುಮಕೂರಿನ ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದ ಅವರು ರಾಜ್ಯ ಸರ್ಕಾರ ಕೂಡ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.


ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂಧಿಸಿದೆ ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ, ಸಚಿವ ಸಂಪುಟದ ಸಚಿವರಿಗೆ ಅಭಿನಂದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವನಾಥ್ ಕಾಶಿ, ಯು. ಶಿವಾನಂದ್, ಯಮುನಾರಂಗೇಗೌಡ, ಕೆ. ರಂಗನಾಥ್, ಹೆಚ್.ಪಿ.ಗಿರೀಶ್, ರಾಜಶೇಖರ್, ಮಧುಸೂದನ್, ಚೇತನ್, ಸುವರ್ಣ ನಾಗರಾಜ್, ವಿಜಯಲಕ್ಷ್ಮೀ ಪಾಟೀಲ್, ರೇಷ್ಮಾ, ಚಿನ್ನಪ್ಪ ಇನ್ನಿತರರು ಇದ್ದರು.

Exit mobile version