Site icon TUNGATARANGA

ದಲಿತ ಮುಖಂಡ ಎಂ.ಗುರುಮೂರ್ತಿ ಮತ್ತು ಸಹಚರರನ್ನು ಗಡಿಪಾರು ಮಾಡಲು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಮನವಿ ಸಲ್ಲಿಸಿದಾದ್ರು ಯಾಕೆ ?

ಶಿವಮೊಗ್ಗ,ಫೆ.೦೫: ದಲಿತ ಮುಖಂಡ ಎಂ.ಗುರುಮೂರ್ತಿ ಮತ್ತು ಸಹಚರರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಮಹಿಳಾ ಒಕ್ಕೂಟ (ಅಂಬೇಡ್ಕರ್ ವಾದ)ದ ಜಿಲ್ಲಾ ಘಟಕ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿತು.


ಇತ್ತೀಚೆಗೆ ನಡೆದ ಹೊರಬೈಲು ಗ್ರಾಮದ ಸಾಮಾಜಿಕ ಬಹಿಷ್ಕಾರದ ಘಟನೆಗೆ ಸಂಬಂಧಿಸಿದಂತೆ ಗುರುಮೂರ್ತಿ ಮತ್ತು ಸಹಚರರು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ, ಸಾಕ್ಷಿ ನಾಶ ಮಾಡಲು ಯತ್ನಿಸಿದ್ದಾರೆ. ಸಾಕ್ಷಿದಾರರಿಗೆ ಹಲ್ಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಬಹಿಷ್ಕಾರದಂತಹ ಘಟನೆಗಳು ನಡೆದಿದ್ದರು ಕೂಡ ನಡೆದೇ ಇಲ್ಲ ಎಂದು ಅದನ್ನು ತಿರುಚಿದ್ದಾರೆ. ದಲಿತರಾಗಿ ದಲಿತರನ್ನೇ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.


ಸಾಮಾಜಿಕ ಬಹಿಷ್ಕಾರದಂತಹ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದ ದಲಿತ ಪರ ಇರುವ ಟಿ.ಹೆಚ್.ಹಾಲೇಶಪ್ಪ ಹಾಗೂ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದ ಯುವತಿ ಪ್ರೀತಿಯನ್ನು ಸೇರಿದಂತೆ ಗಡಿಪಾರು ಮಾಡುವಂತೆ ಒತ್ತಾಯಿಸಿ ಕಾಲ್ನಡಿಗೆ ಜಾಥಾವನ್ನು ಗುರುಮೂರ್ತಿಯವರು ಮಾಡಿದ್ದರು. ಇದು ದಲಿತ ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ ಎಂದು ಆರೋಪಿಸಿದರು.


ಅಲ್ಲದೇ ಗುರುಮೂರ್ತಿಯವರು ಹಲವು ಘಟನೆಗಳಿಗೆ ಸಂಬಂಧಿಸಿದಂತೆ ವಂಚನೆ ಮಾಡಿದ್ದಾರೆ. ನಿವೇಶನ ಕೊಡಿಸುವುದು, ಕೆಲಸ ಕೊಡಿಸುವುದು, ಸೊಸೈಟಿ ಸ್ಥಾಪಿಸುವುದು, ಖಾತೆ ಮಾಡಿಸಿಕೊಡುವುದು, ನ್ಯಾಯ ಬೆಲೆ ಮಾಡಿಸಿ ಕೊಡುತ್ತೇನೆ ಎಂದು ಹೇಳುವುದು. ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ದಲಿತರ ಹತ್ತಿರವೇ ವಂಚನೆ ಮಾಡುತ್ತಾರೆ ಎಂದು ಆರೋಪಿಸಿದರು

.
ಆದ್ದರಿಂದ ದಲಿತ ವಿರೋಧಿಯಾಗಿರುವ ಗುರುಮೂರ್ತಿ, ಜೋಗಿ ಚಂದ್ರಪ್ಪ, ಯಡವಾಲ ಹನುಮಂತಪ್ಪ ಮತ್ತು ಇತರರನ್ನು ಗಡಿಪಾರು ಮಾಡಬೇಕು. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕಿ ರುದ್ರಮ್ಮ, ಜಿಲ್ಲಾ ಪ್ರಧಾನ ಸಂಚಾಲಕಿ ಲತಾ ಜಿ., ಪ್ರಮುಖರಾದ ಮೀನು, ನೀಲಿಬಾಯಿ, ಪಾರ್ವತಿ, ಮಂಜುಳಾ, ಮೋನಿಕಾ ಜಗ್ಗು ಮುಂತಾದವರು ಇದ್ದರು.

Exit mobile version