Site icon TUNGATARANGA

2024 ರ ಮಧ್ಯಂತರ ಬಜೆಟ್ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು ?

ಶಿವಮೊಗ್ಗ,ಫೆ.02: ಕೇಂದ್ರ ಬಜೆಟ್‍ನಲ್ಲಿ ಬಡವರಿಗೆ ಮನೆ, ವಿದ್ಯುತ್ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಗಮನ ನೀಡಲಾಗಿದೆ. ನನ್ನ ಸಹೋದರಿ ವಿತ್ತ ಸಚಿವ ನಿರ್ಮಲಾ ಸೀತಾರಾಮ್ ಮಂಡಿಸಿದ ಈ ಬಜೆಟ್‍ನ್ನು ನಾನು ಸ್ವಾಗತಿಸುತ್ತೇನೆ ಸಚಿವ ಈಶ್ವರಪ್ಪ ಹೇಳಿದ್ದಾರೆ.

ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು  ಜನಸಾಮಾನ್ಯರಿಗೆ ಬೇಕಾದ ಬಜೆಟ್ ಇದಾಗಿದೆ. ಹೆಣ್ಣು ಮಕ್ಕಳಿಗೆ, ಬಡವರಿಗೆ,ರೈತರಿಗೆ, ಯುವಕರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ ಎಂದರು.

ನೋವಿನ ಸಂಗತಿ ಎಂದರೆ, ಕಾಂಗ್ರೆಸ್ ಪಕ್ಷ ಹಿಂದೂಸ್ತಾನ್ ಪಾಕಿಸ್ತಾನ ಅಂತ ಹೊಡೆದು ವಿಭಜನೆ ಮಾಡಿದರು. ಪಾಕಿಸ್ತಾನದಲ್ಲಿ ಹಿಂದೂಗಳು ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಎಲ್ಲಾ ಧರ್ಮದಲ್ಲಿ ಅಣ್ಣಾ ತಮ್ಮಂದಿರ ತರ ಇದ್ದೇವೆ. ಆದರೆ ಸಂಸದ ಡಿ.ಕೆ.ಸುರೇಶ್,  ದಕ್ಷಿಣ ಭಾರತ, ಉತ್ತರ ಭಾರತ ಎಂದು ದೇಶ ಒಡೆಯುವ ಹೇಳಿಕೆ ನೀಡುತ್ತಿದ್ದಾರೆ. ಇದು ಜಿನ್ನಾ ಸಂಸ್ಕøತಿ. ಅವರ ಅಣ್ಣ ಡಿ.ಕೆ ಶಿವಕುಮಾರ್ ಆ ಹೇಳಿಕೆಯನ್ನು ಸ್ವಾಗತ ಮಾಡಿದ್ದಾರೆ. ಆದರೆ  ಅದೃಷ್ಟವಶಾತ್ ಮುಖ್ಯಮಂತ್ರಿಗಳು ಈ ಹೇಳಿಕೆಯನ್ನು ಒಪ್ಪಿಲ್ಲ. ಮುಖ್ಯಮಂತ್ರಿಗಳ ನಿರ್ಧಾರವನ್ನು ನಾನು ಸಂತೋಷದಿಂದ ಸ್ವಾಗತ ಮಾಡುತ್ತೇನೆ ಎಂದರು.

ಇನ್ನೂ ಈ ದೇಶದ ಜನ ಪೂರ್ಣ ಸ್ವತಂತ್ರ ಬಂದಿಲ್ಲ ಅಂತ ನೋವಿನಲ್ಲಿ ಇದ್ದಾರೆ. ಮತ್ತೊಂದು ನೋವನ್ನು ಕೋಡಲು ಡಿಕೆ ಸುರೇಶ್ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪಲ್ಲ ಅಂದುಕೊಂಡಿದ್ದೇನೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ತಮ್ಮ ಅಭಿಪ್ರಾಯ ಏನು ಅಂತ ದೇಶದ ಜನರಿಗೆ ಹೇಳಬೇಕು. ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಕೊಡಲು ಬರುತ್ತಾ ?. ನೀವು ಎಂಪಿ ಆಗಿದ್ದಿರಾ. ಬಜೆಟ್ ಮಂಡನೆ ಆಗಿದೆ ಚರ್ಚೆ ಶುರು ಆಗುತ್ತೆ. ಅಲ್ಲಿ ಬಜೆಟ್ ಬಗ್ಗೆ ಮಾತಾಡಿ. ಡಿ.ಕೆ ಸುರೇಶ್‍ಗೆ ಅಸಮಧಾನವಿದ್ದರೆ ಲೋಕಸಭೆಗೆ ರಾಜೀನಾಮೆ ನೀಡಲಿ. ಯಾರೋ ರೋಡ್‍ಲ್ಲಿ ಹೋಗೋ ದಾಸನ ಥರ ಮಾತನಾಡಬೇಡಿ. ನಾನು ಒಬ್ಬ ರಾಜಕಾರಣಿ ಬದುಕಿದ್ದೇನೆ ಅಂತ ತೋರಿಸಲು ಇಂತಹ ಹೇಳಿಕೆ ನೀಡಿದ್ದಾರೆ ಎಂದರು.

ದೇಶ ಅಂದರೆ ತಾಯಿ ಅನ್ನುವ ಕಲ್ಪನೆ ಇವರಿಗಿಲ್ಲ. ನಾನು ಒಬ್ಬ ರಾಜಕಾರಣಿ ಅಂತ ತೋರಿಸಿಕೊಳ್ಳೋಕೆ ಈ ಹೇಳಿಕೆ ಅಷ್ಟೇ. ಭಾರತ್ ಜೋಡೋ ಮಾಡುವರು ಭಾರತ್ ತೋಡೋ ಮಾಡುತ್ತಿದ್ದಾರೆ. ಬಜೆಟ್ ಸಂದರ್ಭದಲ್ಲಿ ತನ್ನ ವ್ಯಯಕ್ತಿಕ ಅಸ್ತಿತ್ವ ತೋರಿಸಿಕೊಳ್ಳಲು ಈ ಹೇಳಿಕೆ ಕೋಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರ್ ಬೇಕಾದರೂ ಮಾತನಾಡಬಹುದು. ಇದು ಕಾಂಗ್ರೆಸ್ ನವರ ನಾಯಕತ್ವ. ಕಾಂಗ್ರೆಸ್ ಪಕ್ಷ 40 ಪಸೆರ್ಂಟ್ ಅಂತ ಗುತ್ತಿಗೆದಾರರು ಹೇಳಿದ್ದಾರೆ. ಕಣ್ಮುಚ್ಚಿ ಕುಳಿತಿರುವ ಕಾಂಗ್ರೆಸ್ ಏಜೇಂಟ್ ಕೆಂಪಣ್ಣ ಈಗ ಏನು ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೆಂಪಣ್ಣನು ಕಾರಣ. ಸರ್ಕಾರ ಬಂದು ಏಳು ತಿಂಗಳು ಆಗಿದೆ. ರಸ್ತೆಗಳಿಗೆ ಒಂದು ಬುಟ್ಟಿ ಮಣ್ಣು ಹಾಕಿದ್ದಾರಾ….?. ರಾಜ್ಯದಲ್ಲಿ ರಸ್ತೆಗಳು ಹಾಳಾಗಿದೆ. ನಮ್ಮ ಸರ್ಕಾರದಲ್ಲಿ ಆಗಿರುವ ಕೆಲಸಗಳಿಗೆ ಇನ್ನೂ ಅನುಧಾನ ಬಿಡುಗಡೆ ಆಗಿಲ್ಲ. ಒಂಬತ್ತು ವರ್ಷದಿಂದ ಜಾತಿ ಗಣತಿ ಬಿಡುಗಡೆ ಮಾಡುತ್ತೇನೆ ಅನ್ನುತಿದ್ದಾರೆ. ಲೋಕಸಭೆ ಚುನಾವಣೆ ಆಗುವ ತನಕ ಜಾತಿ ಗಣತಿ ಬಿಡುಗಡೆ ಆಗಲ್ಲ ಎಂದರು.

ದೇಶ ಛಿದ್ರ ಮಾತ್ರ ಮಾಡಿಲ್ಲ ಜಾತಿ, ಜಾತಿಗಳನ್ನು ಛೀದ್ರ ಮಾಡಿದ್ದಾರೆ. ಸುಳ್ಳು ಹೇಳುವುದರಲ್ಲಿ ಸಿಎಂಗೆ ನೋಬೆಲ್ ಕೊಡಬೇಕು. ಆರ್ಥಿಕ ಪರಿಸ್ಥಿತಿಯಿಂದ ಸಿದ್ದರಾಮಯ್ಯ ಬೆತ್ತಲೆ ಆಗುತ್ತಾರೆ. ಸಿದ್ಧರಾಮಯ್ಯ ಶ್ವೇತ ಪತ್ರ ಹೊರಡಿಸಿದ್ದಾರಾ….?. ಮಾಗಡಿ ಶಾಸಕ ಬಾಲಕೃಷ್ಣ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಲೋಕಸಭೆ ಚುನಾವಣೆ ಮುಗಿದ ಮೇಲೆ ಸರ್ಕಾರವು ಇರಲ್ಲ. ಗ್ಯಾರಂಟಿಗಳು ಸಹ ಇರಲ್ಲ. ಸರ್ಕಾರ ಇದ್ರೆ ತಾನೇ ಗ್ಯಾರಂಟಿ ಇರೋಕೆ ಸಾಧ್ಯ ಎಂದರು.

 ತಮ್ಮ ಪುತ್ರ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ಕಾಂತೇಶ್ ಹಾವೇರಿಯಲ್ಲಿ ಸ್ಪರ್ಧೆ ಮಾಡಬೇಕು ಎನ್ನುವುದು  ಸ್ಥಳಿಯ ನಾಯಕರು, ಕಾರ್ಯಕರ್ತರು ಮತ್ತು ಸ್ವಾಮೀಜಿಗಳು ಸೇರಿದಂತೆ ಎಲ್ಲರ ಅಪೇಕ್ಷೆಯಾಗಿದೆ.  ಮೊನ್ನೆ ನಡೆದ ಸಭೆಯಲ್ಲಿ ಸ್ವತಃ ಬಿ.ಸಿ.ಪಾಟೀಲ್ ಅವರು ಪಕ್ಷ ಯಾರಿಗೆ ಟಿಕೇಟ್ ನೀಡಿದರು, ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದ್ದಾರೆ. ಟಿಕೆಟ್ ಸಿಕ್ಕರೆ ಗೆಲ್ಲುತ್ತಾರೆ ಎಂದರು. 

ಮೋದಿ ಪ್ರಧಾನಿಯಾದರೇ ದೇಶದಲ್ಲಿ ಚುನಾವಣೆ ಆಗಲ್ಲ ಎಂದು ಖರ್ಗೆಯವರು ಹೇಳಿದ್ದಾರೆ.  ಇದು ತುರ್ತು ಪರಿಸ್ಥಿತಿಯನ್ನು ಈ ದೇಶದಲ್ಲಿ ಯಾರು ತಂದಿದ್ದು ಅಂತ ಅವರೇ ಹೇಳಲಿ. ಸರ್ವಾಧಿಕಾರಿ ಇಂದಿರಾಗಾಂಧಿ ನೋ ನರೇಂದ್ರ ಮೋದಿನೋ ಅಂತ ಖರ್ಗೆಯವರೇ ಹೇಳಬೇಕು.

ಅಧಿಕೃತ ವಿರೋಧ ಪಕ್ಷದ ನಾಯಕರು ಸಹ ಅಲ್ಲ ಪಾಪ ಇವರು. 28 ಕ್ಕೆ 28 ಗೆಲ್ಲುತ್ತೇವೆ ಅನ್ನುತ್ತಿದ್ದಾರೆ ಕಾಂಗ್ರೆಸ್ ನವರು. ಈ ಬಾರಿ 28 ಸೀಟ್ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version