Site icon TUNGATARANGA

ಶುಭ ಸಂದರ್ಭದಲ್ಲಿ ಸೂತಕವೇಕೆ…? ಹೆಚ್. ಸಿ. ಯೋಗೇಶ್ ಹೀಗೆಂದದ್ದೇಕೆ? ಯಾರಿಗೆ ಹೇಳಿದ್ರು ಗೊತ್ತಾ?

ನಾಳೆ ಶಿವಮೊಗ್ಗದಲ್ಲಿ ಸಚಿವ ಜಾರ್ಜ್ ಹಾಗೂ ನಿಗಮದ ಅಧ್ಯಕ್ಷ ಬೇಳೂರುರಿಗೆ ಅದ್ದೂರಿ ಸ್ವಾಗತ

ಶಿವಮೊಗ್ಗ, ಫೆ.೦೨:
ಕಾಂಗ್ರೆಸ್ ಪಕ್ಷದ ಬಹುಮುಖ್ಯ ಗ್ಯಾರೆಂಟಿ ಯೋಜನೆಯಾದ ಉಚಿತ ವಿದ್ಯುತ್ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಅವರನ್ನು ಮತ್ತು ಇದೇ ಸಂದರ್ಭದಲ್ಲಿ ಆಗಮಿಸುತ್ತಿರುವ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಮಂಡಳಿಯ ಅಧ್ಯಕ್ಷ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು ಇವರಿಗೆ ಭವ್ಯ ಸ್ವಾಗತ ನೀಡಿ ಅದ್ದೂರಿ ಮೆರವಣಿಗೆ ಮೂಲಕ ಬೈಕ್ ರ‍್ಯಾಲಿ ನಡೆಸಿ ನಗರಕ್ಕೆ ಕರೆತರಲಾಗುತ್ತಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೀಶ್ ಇಂದಿಲ್ಲಿ ತಿಳಿಸಿದರು.


ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ಈಗಾಗಲೇ ೧.೫೯ ಕೋಟಿ ಫಲಾನುಭವಿಗಳು ಉಚಿತ ವಿದ್ಯುತ್ ಪಡೆಯುತ್ತಿದ್ದು, ಇದಕ್ಕೆ ಈಗಾಗಲೇ ೪ ಸಾವಿರ ಕೋಟಿಗೂ ಹೆಚ್ಚು ಹಣವನ್ನು ರಾಜ್ಯ ಸರ್ಕಾರ ಖರ್ಚು ಮಾಡಿದ್ದು, ಮಳೆ ಅಭಾವವಿದ್ದರೂ ಸಹ ಅತ್ಯಂತ ವ್ಯವಸ್ಥಿತವಾಗಿ ವಿದ್ಯುತ್ ಕೊಡಿಸುತ್ತಿರುವ ಇಂಧನ ಸಚಿವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಅವರೊಂದಿಗೆ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚಿಸುವ ಅವಕಾಶ ಎಲ್ಲರಿಗೂ ದೊರೆತಿದೆ ಎಂದರು.


ಹೊಸನಗರ, ಸಾಗರ ಮತ್ತೀತರ ಮಲೆನಾಡು ಭಾಗಗಳಲ್ಲಿ ಗುಡಿಕೈಗಾರಿಕೆಗಳು ನಶಿಸುತ್ತಿರುವ ಸಂದರ್ಭಧಲ್ಲಿ ಅರಣ್ಯ ಕೈಗಾರಿಕಾ ನಿಗಮ ಮಂಡಳಿಯ ಅಧ್ಯಕ್ಷ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಮಲೆನಾಡಿಗೆ ಅತಿಹೆಚ್ಚು ಲಾಭವಾಗುವ ಸಾಧ್ಯತೆಗಳಿವೆ. ಶಿವಮೊಗ್ಗದ ನಾಯಕರಾದ ಗೋಪಾಲಕೃಷ್ಣ ಬೇಳೂರು ಅವರನ್ನು ಕಾಂಗ್ರೆಸ್ ಪಕ್ಷ ವಿಶೇಷವಾಗಿ ಸ್ವಾಗತಿಸುತ್ತದೆ ಎಂದರು.


ಶಿವಮೊಗ್ಗದ ಬೆಕ್ಕಿನ ಕಲ್ಮಠ ಮುಂಭಾಗದಿಂದ ಯುವ ಕಾಂಗ್ರೆಸ್ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾಬ್ಲಾಕ್‌ನ ಪದಾಧಿಕಾರಿಗಳು, ಮುಖಂಡರುಗಳು ಬೆಳಗ್ಗೆ ೧೧.೦೦ಗಂಟೆಗೆ ಈ ಇಬ್ಬರನ್ನು ಸ್ವಾಗತಿಸಲಿದ್ದು, ಅಲ್ಲಿಂದ ಅದ್ದೂರಿ ಮೆರವಣಿಗೆ ನಡೆಯಲಿದೆ ಎಂದರು.
ಶುಭಸಂದರ್ಭದಲ್ಲಿ ಸೂತಕವೇಕೆ…?
ಶಿವಮೊಗ್ಗಕ್ಕೆ ಇಂಧನ ಸಚಿವರು ಹಾಗೂ ಅರಣ್ಯ ನಿಗಮದ ಅಧ್ಯಕ್ಷರು ಆಗಮಿಸುವ ಅತ್ಯಂತ ವಿಶೇಷ ದಿನದ ನೆನಪಿನ ಹೊತ್ತಿನಲ್ಲಿ ಸೂತಕವೇಕೆ ಎಂದು ಪರೋಕ್ಷವಾಗಿ ಮಾಜಿ ಸಂಸದ ಆಯನೂರು ಮಂಜುನಾಥ್ ವಿರುದ್ಧ ಹೆಚ್.ಸಿ.ಯೋಗೀಶ್ ಟೀಕೆ ವ್ಯಕ್ತಪಡಿಸಿದ್ದರು.
ವು ಈಸ್ ಯೋಗೀಶ್ ಎಂದು ಕೇಳಿದ ಆಯನೂರು ಅವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಯೋಗೀಶ್ ಅವರು ಒಳ್ಳೆಯ ಕ್ಷಣದಲ್ಲಿ ಕೆಲವು ಆತ್ಮಗಳನ್ನು ಸ್ಮರಿಸುವ ಅಗತ್ಯವಿಲ್ಲವೆಂದರು.
ಕೆಪಿಸಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ಅವರ ಮಾತನಾಡಿ, ಹೆಚ್.ಸಿ.ಯೋಗೀಶ್ ಅವರ ವಿರುದ್ದ ಏಕವಚನದಲ್ಲಿ ಮಾತನಾಡಿದ ಹಿನ್ನೆಲೆಯಲ್ಲಿ ನಾವು ಕೆಪಿಸಿಸಿಗೆ ದೂರು ನೀಡಿದ್ದೇವು. ಈ ಹಿನ್ನಲೆಯಲ್ಲಿ ಆಯನೂರು ಮಂಜುನಾಥ್ ಅವರು ನಮ್ಮನ್ನು ಪ್ರೇತಾತ್ಮ ಎಂದು ಹೇಳಿರುವುದು ಅವರ ಘನತೆಗೆ ಸರಿಯಲ್ಲ. ಎಷ್ಟು ಗೌರವ ಪಡೆಯಬೇಕೋ ಅಷ್ಟು ಗೌರವ ಉಳಿಸಿಕೊಳ್ಳಿ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಪ್ರಮುಖರಾದ ಕಾಶಿ ವಿಶ್ವನಾಥ್, ವಿಜಯ್‌ಕುಮಾರ್, ಫರ್ವಿಜ್ ಅಹಮ್ಮದ್, ಬಾಬು ಬೀಮಪ್ಪ, ವಿಜಯ್, ನವೀನ್ ಮತ್ತಿತರರಿದ್ದರು

Exit mobile version