Site icon TUNGATARANGA

ವಿಶ್ವ ದರ್ಶನದಿಂದ ವಿಶ್ವ ಮಾನವನಾಗಲು ಸಾಧ್ಯ- ಹಾರೋನಹಳ್ಳಿ ಸ್ವಾಮಿ/ ಆಕಾಶ ವೀಕ್ಷಿಸಿ ಸಂಭ್ರಮಿಸಿದ ಮಕ್ಕಳು


ಭದ್ರಾವತಿ,ಫೆ.2:
ಸಮೀಪದ ಹಿರಿಯೂರಿನ ರಂಗ ಮಂಟಪದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಟೆಲಿಸ್ಕೋಪ್ ಮೂಲಕ ಆಕಾಶ ವೀಕ್ಷಣೆ ಕಾರ್ಯಕ್ರಮವನ್ನು ನಿನ್ನೆ ರಾತ್ರಿ ಹಮ್ಮಿಕೊಳ್ಳಲಾಗಿತ್ತು.


ಅದರಲ್ಲಿ ಶನಿ ಗ್ರಹದ ಬಳೆಗಳು ಗುರು ಗ್ರಹ ಮತ್ತು ಅದರ ನಾಲ್ಕು ಉಪಗ್ರಹಗಳು ಸುಂದರ ಚಂದ್ರನ ಕುಳಿಗಳು ನಕ್ಷತ್ರಪುಂಜಗಳಾದ ಮಹಾವ್ಯಾದ ಮೇಷ ವೃಷಭ ಮಿಥುನ ಮೀನಾ ಕೃತಿಕ ಪಾರ್ಥ ವಿಜಯ ಸಾರಥಿ ದ್ರೌಪದಿ ವೈತರಣೆ ಮುಂತಾದವುಗಳನ್ನು ತೋರಿಸಲಾಯಿತು.
ಮಕ್ಕಳು ಸಾರ್ವಜನಿಕರು ಟೆಲಿಸ್ಕೋಪ್ ಮೂಲಕ ಇವುಗಳನ್ನು ಕಂಡು ಸಂಭ್ರಮಿಸಿದರು.
ಕಾರ್ಯಕ್ರಮವನ್ನು ನಡೆಸಿಕೊಟ್ಟ ಹವ್ಯಾಸಿ ಖಗೋಳ ವೀಕ್ಷಕರಾದ ಹರೋನಹಳ್ಳಿ ಸ್ವಾಮಿ ಅವರು ಮಾತನಾಡುತ್ತಾ “ಇಂದು ಮೊಬೈಲ್ ಮತ್ತು ಟಿವಿಗಳ ಹಾವಳಿಗಳಿಂದಾಗಿ ಈ ಅದ್ಭುತ ರಹಸ್ಯಗಳನ್ನು ಒಳಗೊಂಡ ಆಕಾಶವನ್ನು ನೋಡದಂತಾಗಿದೆ ಇದು ಬೇಸರದ ಸಂಗತಿ ನಮ್ಮ ಪೂರ್ವಜರು ನಕ್ಷತ್ರ ಚಂದ್ರ ಸೂರ್ಯ ಇವುಗಳ ಚಲನೆಯನ್ನು ಅಧ್ಯಯನ ಮಾಡಿ ಗ್ರಹಣಗಳ ವಾರ ತಿಥಿಗಳ ಅದ್ಭುತ ವೈಜ್ಞಾನಿಕ ಮಾಹಿತಿಗಳನ್ನು ದಾಖಲಿಸಿದ್ದಾರೆ ಆದರೆ ಇಂದು ಇವುಗಳೆಡೆ ನಾವು ನೋಡುವ ತಿಳಿಯುವ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿಲ್ಲ ಇದು ದುರಂತದ ಸಂಗತಿ ಎಂದರು.


ಆಕಾಶ ವೀಕ್ಷಣೆ ಒಂದು ಅತ್ಯುತ್ತಮ ಹವ್ಯಾಸ. ಆಕಾಶದ ರಹಸ್ಯಗಳನ್ನು ವಿಶ್ವದ ರಹಸ್ಯಗಳನ್ನು ಅರಿಯುವ ಮೂಲಕ ಮನುಷ್ಯ ವಿಶ್ವಮಾನವನ ಚಿಂತನೆಗಳನ್ನು ಬೆಳೆಸಿಕೊಳ್ಳಲು ಸಾಧ್ಯ “ಎಂದರು.

Exit mobile version