Site icon TUNGATARANGA

ಪೋಷಕರು ತಮ್ಮ ಮಕ್ಕಳನ್ನು ಕೋಮುವಾದ ರಾಜಕಾರಣಕ್ಕೆ ಬಲಿಕೊಡಬಾರದು/ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾ ಟಣೆಯಲ್ಲಿ:ಹಿರಿಯ ಸಾಹಿತಿ ಡಾ.ಎಲ್.ಎನ್.ಮುಕುಂದರಾಜ್

ಶಿವಮೊಗ್ಗ,ಫೆ.01: ಪ್ರಭುತ್ವ ಮತ್ತು ಸಾಹಿತ್ಯದ ನಡುವೆ ತಿಕ್ಕಾಟಗಳು ನಡೆಯುತ್ತಿದ್ದು, ಇದಕ್ಕೆ ತಿಲಾಂಜಲಿಯಾಡಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ.ಎಲ್.ಎನ್.ಮುಕುಂದರಾಜ್ ಹೇಳಿದರು.

ಅವರು ಇಂದು 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪ್ರಭುತ್ವವನ್ನು ಹೆಗಲ ಮೇಲೆ ಹೊತ್ತು ಕೂರುವ ಅವಶ್ಯಕತೆ ಇಲ್ಲ. ನಮ್ಮ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಸಂಘರ್ಷವನ್ನು ತರುತ್ತಾರೆ. ರಾಜಕಾರಣಿಗಳಿಗೆ ಈ ದೇಶ ಸುಭೀಕ್ಷಾವಾಗಿರುವುದು ಇಷ್ಟವಿರುವುದಿಲ್ಲ. ಸಂವಿಧಾನವನ್ನು ಬಿಟ್ಟು ದೇವರು, ಧರ್ಮ, ಜಾತಿ, ಕೋಮುವಾದಗಳನ್ನು ನಡುವೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದರು.

ಪೋಷಕರು ತಮ್ಮ ಮಕ್ಕಳನ್ನು ಕೋಮುವಾದ ರಾಜಕಾರಣಕ್ಕೆ ಬಲಿಕೊಡಬಾರದು. ಆದರೆ ಅಂತದೊಂದು ನಿರಂತರವಾದ ಪ್ರಯತ್ನ ನಡೆಯುತ್ತಲೇ ಇದೆ. ಕುವೆಂಪುರವರು ಎಲ್ಲಾ ದೇವರುಗಳನ್ನು ನೂಕಾಚೆ ಎಂದಿದ್ದಾರೆ. ಅಂದರೆ ಸರ್ವರಿಗೂ ಪ್ರಿಯವಾಗುವ ಭಾರತಾಂಬೆಯೇ ದೇವರು ಎಂದು ಅವರು ಕರೆಯುತ್ತಾರೆ. ಆಗ ಮಾತ್ರ ಈ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಭಜನೆ ಮಾಡುವವರು ಜಾಸ್ತಿಯಾದರೆ, ಸೃಜನಶೀಲತೆಯೇ ಹೊರಟುಹೋಗುತ್ತದೆ. ಅದು ಯಾವ ರೀತಿಯ ಭಜನೆಯಾದರೂ ಆಗಬಹುದು. ಈ ರಾಜಕಾರಣಿಗಳಿಗೆ ಕವಿಗಳ ಬಗ್ಗೆ ಗೌರವವಿಲ್ಲ, ಏಕೆಂದರೆ ಕವಿಗಳೂ ಭಜನೆ ಮಾಡುವುದಿಲ್ಲ. ಸತ್ಯ ಹೇಳುತ್ತಾರೆ. ಆದ್ದರಿಂದ ಈ ಎಲ್ಲಾ ತಲ್ಲಣಗಳಿಂದ ಜನರು ದೂರವಿರಬೇಕು. ಪ್ರೀತಿ ವಿಶ್ವಾಸಗಳೇ ನಮ್ಮ ಜೀವನವನ್ನು ರೂಪಿಸುತ್ತವೆ. ಬೇರೆ ಧರ್ಮಗಳನ್ನು ಪ್ರೀತಿಸುವುದು ನಮ್ಮ ಕನ್ನಡಿಗರ ಗುಣ. ರಾಜಕಾರಣಿಗಳ ಕರೆಗಳಿಗೆ ಕನ್ನಡಿಗರು ಗೌರವ ಕೊಡಬಾರದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿ, ಕಸಾಪ ಜಿಲ್ಲಾಧ್ಯಕ್ಷ ಸಾಹಿತ್ಯ ಕ್ರಮಗಳಿಂದ ರಾಜಕಾರಣಿಗಳು ದೂರವಿರುತ್ತಾರೆ. ಸಾಹಿತ್ಯ ವೆಂದರೇ, ಅವರಿಗೆ ಅಸಡ್ಡೆಯಾಗಿದೆ. ಇಂದಿನ ಕಾರ್ಯಕ್ರಮಕ್ಕೆ ಯಾವ ರಾಜಕಾರಣಿಗಳು ಬಂದಿಲ್ಲ. ಆರ್.ಎಂ.ಮಂಜುನಾಥ್‍ಗೌಡರೇ ನಮಗೆ ರಾಜಕಾರಣಿಯಾಗಿದ್ದಾರೆ. ನಮ್ಮ ಕೆಲವು ಬೇಡಿಕೆಗಳನ್ನು ಅವರೇ ಸರ್ಕಾರಕ್ಕೆ ಮುಟ್ಟಿಸಬೇಕು ಎಂದರು.

ಸಾಹಿತ್ಯ ಗ್ರಾಮ ಸುಮಾರು 1ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದು ನಿರ್ಮಾಣವಾಗಲು ತುಂಬ ಕಷ್ಟಪಡಬೇಕಾಯಿತು. ಅನೇಕರು ಕೆಲವು ದೂರುಗಳನ್ನು ಹೇಳಿದರು. ಆದರೆ, ಇದರ ನಿರ್ಮಾಣದ ಕಷ್ಟ ನಮಗೆ ಗೊತ್ತು. ಇದಕ್ಕೆ ಇನ್ನೂ 2.5ಕೋಟಿ ರೂ. ಹಣ ಬೇಕಾಗಿದೆ. ಸರ್ಕಾರ ಸಹಾಯಕ್ಕೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮೇಳಾನಾಧ್ಯಕ್ಷ ಲಕ್ಷ್ಮಣ ಕೊಡಸೆ ಅವರು  ಸಮ್ಮೇಳಾನಾಧ್ಯಕ್ಷ ಡಾ. ಎಸ್.ಪಿ. ಪದ್ಮಾಪ್ರಸಾದ್ ಅವರಿಗೆ  ಧ್ವಜ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹಲಾಡಿ ಪ್ರಮುಖರಾದ ಆಂಜನಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಡಾ.ಕೆ.ಆರ್. ಶ್ರೀಧರ್, ಶಂಕರನಾಯ್ಕ, ಹುಚ್ರಾಯಪ್ಪ, ಸ್ವಾಮಿ, ಗಣೇಶ್, ರಘು, ರಮೇಶ್‍ಶಟ್ಟಿ, ನವೀನ್‍ಕುಮಾರ್ ಹಾಗೂ ಕ.ಸಾ.ಪ. ದ ಎಲ್ಲಾ ಪದಾಧಿಕಾರಿಗಳು, ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು. ನೃಪತುಂಗ ನಿರೂಪಿಸಿದರು. ಮಹಾದೇವಿ ಸ್ವಾಗತಿಸಿದರು. 

ಇದಕ್ಕೂ ಮೊದಲು ಸಮ್ಮೇಳನಾಧ್ಯಕ್ಷರನ್ನು ಗೋಪಾಳದ ಆನೆ ಪ್ರತಿಮೆ ವೃತ್ತದಿಂದ ಸಾಹಿತ್ಯ ಗ್ರಾಮದವರಿಗೆ ಜನಪದ ಕಲಾ ತಂಡದೊಂದಿಗೆ ರಾಜ ಬೀದಿ ಉತ್ಸವ ಮೂಲಕ ಕರೆತರಲಾಯಿತು. ಮೆರವಣಿಗೆಯಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು.

Exit mobile version