Site icon TUNGATARANGA

ಫೆ.4 ರಂದು ಕು. ವಾಸುಕಿ ಅವರ ಭರತನಾಟ್ಯ ರಂಗಪ್ರವೇಶ, ಶಿವಮೊಗ್ಗದ ಸಾಪ್ಟ್ ವೇರ್ ಇಂಜಿನಿಯರ್ ಮನದಲ್ಲಿ ಸಂಸ್ಕೃತಿ ಉಳಿಸುವ ಕನಸು

ಶಿವಮೊಗ್ಗ,ಜ.೩೧:
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಫೆ.೪ರಂದು ಸಂಜೆ.೫.೩೦ಕ್ಕೆ ನಟನಂ ಬಾಲ ನಾಟ್ಯ ಕೇಂದ್ರದ ವಿದ್ಯಾರ್ಥಿನಿ ಹಾಗೂ ಸಾಫ್ಟ್ ವೇರ್ ಇಂಜಿನಿಯರ್ ಕು. ಎಚ್.ಎಂ. ವಾಸುಕಿ ಅವರು ಕುವೆಂಪು ರಂಗಮಂದಿರ ದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಲಿ ದ್ದಾರೆ ಎಂದು ನಟನಂ ಬಾಲ ನಾಟ್ಯ ಕೇಂದ್ರದ ಗುರು ವಿದ್ವಾನ್ ಎಸ್.ಕೇಶವ ಕುಮಾರ ಪಿಳೈ ಹೇಳಿದರು.


ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾರಂಭದಲ್ಲಿ ಸುಗಮ ಸಂಗೀತ ಸಂಯೋಜಕ ಗರ್ತಿಗೆರೆ ರಾಘಣ್ಣ, ಬೆಂಗಳೂರಿನ ನೃತ್ಯ ಗುರು ವಿದುಷಿ ಶ್ರೀವಲ್ಲಿ ಅಂಬರೀಶ್ , ರಾಮಕೃಷ್ಣ ವಿದ್ಯಾಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಶೋಭ ವೆಂಕಟರಮಣ, ಮುಖ್ಯ ಶಿಕ್ಷಕ ತೀರ್ಥೇಶ್ ಭಾಗವಹಿಸಲಿದ್ದಾರೆ ಎಂದರು.


ಅಂದು ಸಂಜೆ ಸಂಜೆ ೫.೪೫ಕ್ಕೆ ವಿಘ್ನೇ ಶ್ವರ ಸ್ತುತಿ ಮತ್ತು ನಟರಾಜ ಪೂಜೆ, ೬ಕ್ಕೆ ರಂಗಪ್ರವೇಶ ಪೂರ್ವಾರ್ಧ, ೭.೩೦ಕ್ಕೆ ಗುರುವಂದನಾ ಕಾರ್ಯಕ್ರಮ, ೮ಕ್ಕೆ ರಂಗಪ್ರವೇಶ ಉತ್ತರಾರ್ಧ ನಡೆಯಲಿದೆ. ಇವರಿಗೆ ಹಿಮ್ಮೇಳನದಲ್ಲಿ ಗುರು ವಿದ್ವಾನ ಎಸ್.ಕೇಶವಕುಮಾರ ಪಿಳೈ, ವಿದುಷಿ ವನಿತ ರಾಜ್, ಚೇತನ್ ಎಸ್.ಚಂದ್ರ ನಾಟ್ಯಶ್ರೀ ಚೇತನ್, ಹಾಡುಗಾರಿಕೆಯಲ್ಲಿ ವಿದ್ವಾನ್ ಎಚ್.ಎಸ್.ರಾಕೇಶ್ ಅಯ್ಯರ್, ಮೃದಂಗ ದಲ್ಲಿ ಮೈಸೂರಿನ ವಿಕ್ರಂ ಭಾರದ್ವಾಜ್, ಕೊಳಲಿನಲ್ಲಿ ಬೆಂಗಳೂರಿನ ವಿದ್ವಾನ್ ಎ.ಎನ್.ರಘು ಸಿಂಹ, ರಿದಂ ಪ್ಯಾಡ್ ನಲ್ಲಿ ಮೈಸೂರಿನ ವಿದ್ವಾನ್ ಸುಜೀಂದ್ರ ರಾವ್ ಸಾಥ್ ನೀಡಲಿದ್ದಾರೆ ಎಂದು ವಿವರಿ ಸಿದರು.


ಶಿವಮೊಗ್ಗದ ನಿವಾಸಿ ಇಂಜಿನಿಯರ್ ಎಚ್.ಆನಂದರಾವ್ ಹಾಗೂ ಶಿಕ್ಷಕಿ ಎಚ್. ಎಸ್. ಸುಶೀಲ ಇವರ ಪುತ್ರಿಯಾದ ಕುಮಾರಿ ಎಚ್.ಎಂ.ವಾಸುಕಿ ಶಿವಮೊಗ್ಗದ ಜೆಎನ್ ಸಿಎ ಕಾಲೇಜಿನಲ್ಲಿ ಬಿ.ಇ. ಪದವೀ ಧರೆಯಾಗಿದ್ದು, ಪ್ರಸ್ತುತ ಫ್ರಾನ್ಸ್ ಮೂಲದ ಕಂಪನಿಯಾದ ಸೊಸೈಟಿ ಜನರಲ್ ಸಾಫ್ಟ್‌ವೇರ್ ಎಂಜಿನಿಯರಿಂಗ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಶಿವಮೊಗ್ಗದ ನಟನಂ ಬಾಲ ನಾಟ್ಯ ಕೇಂದ್ರದಲ್ಲಿ ತಮ್ಮ ಅಂತಿಮ ವಿದ್ವತ್ತನ್ನು ಅಭ್ಯಾಸ ಮಾಡುತ್ತಿದ್ದಾರೆ. ಅವರು ತಮ್ಮ ೧೩ನೇ ವಯಸ್ಸಿನಿಂದಲೇ ಶಿವಮೊಗ್ಗದ ಭರತನಾಟ್ಯ ಗುರು ಕರ್ನಾಟಕ ಕಲಾಶ್ರೀ ವಿದ್ವಾನ್ ಎಸ್. ಕೇಶವಕುಮಾರ ಪಿಳೈರವರ ಶಿಷ್ಯಯರಾದ ವಿದುಷಿ ಚೈತ್ರ ಹಾಗೂ ವಿದುಷಿ ಶ್ವೇತಪ್ರಕಾಶ್‌ರವರ ಶ್ರೀ ಭರತನಾಟ್ಯ

ಕಲಿಕೆಯನ್ನು ಪ್ರಾರಂಭಿಸಿ, ನಂತರ ತಮ್ಮ ೧೮ನೇ ವಯಸ್ಸಿನಿಂದ ಶ್ರೀ ವಿದ್ವಾನ್ ಎಸ್. ಕೇಶವಕುಮಾರ ಪಿಟ್ಟಿರವರ ಬಳಿ ಸುಮಾರು ೧೪ ವರ್ಷಗಳಿಂದ ನೃತ್ಯಾಭ್ಯಾಸದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದಿಂದ ನಡೆಸುವ ಭರತನಾಟ್ಯ ಜ್ಯೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳಿ, ಮುಂಬೈ ಇವರು ನಡೆಸಿದ ವಿಶಾರದ ಪ್ರಥಮ ಮತ್ತು ವಿಶಾರದ ಪೂರ್ಣ ಎಂಬ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತಿರ್ಣರಾಗಿದ್ದಾರೆ. ಇದಲ್ಲದೆ ಶಾಲಾ ಕಾಲೇಜು, ಎಂಜಿನೀಯರಿಂಗ್ ಹಾಗೂ ಪ್ರಸ್ತುತ ಕಾರ್ಯ- ನಿರ್ವಹಿ ಸುತ್ತಿರುವ ಕಂಪನಿಯಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ನೃತ್ಯ ಪ್ರರ್ದಶನ ನೀಡಿರುತ್ತಾರೆ. ಹಾಗೆಯೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲೂ ಅತಿ ಹೆಚ್ಚು ಅಂಕಗಳಿಂದ ಉತ್ತೀರ್ಣರಾಗಿದ್ದಕ್ಕೆ ವಿಪ್ರ ನೌಕರರ ಸಂಘ, ವಿಶ್ವೇಶ್ವರಯ್ಯ ಕೊಅಪ ರೇಟಿವ್ ಸೊಸೈಟಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ನಡೆಸುವ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಾಸುಕಿ ಅವರ ತಂದೆ ಎಚ್.ಜಿ.ಆನಂದರಾವ್, ತಾಯಿ ಎಚ್.ಎಸ್.ಸುಶೀಲಾ, ಪ್ರಮುಖರಾದ ಅಚ್ಯುತ್‌ರಾವ್, ವಿಷ್ಣು ಇದ್ದರು.

ನಮ್ಮ ಸಂಸ್ಕೃತಿ ಬಿಂಬಿಸಲು ಭರತ ನಾಟ್ಯದಂತಹ ಕಲೆಗಳು ಅತ್ಯಗತ್ಯ. ಸಾಪ್ಟ್ ವೇರ್ ಬದುಕಿಗೆ ಎಷ್ಟು ಮುಖ್ಯವೋ ಅದ ರಂತೆ ಭರತನಾಟ್ಯವೂ ನನಗೆ ತುಂಬಾ ಅಚ್ಚುಮೆಚ್ಚು. ಭರತನಾಟ್ಯದಲ್ಲಿ ಬದುಕು ರೂಪಿಸಿಕೊಳ್ಳಲು ಸಾಕಷ್ಟು ಸವಾಲುಗಳಿವೆ. ಅಲ್ಲಿ ಗೆಲ್ಲುವವರೆಗೆ ಇಂಜಿನಿಯರ್ ಕಾರ್ಯ ಅಗತ್ಯ
– ವಾಸುಕಿ ಹೆಚ್.ಎ.

Exit mobile version