ಶಿವಮೊಗ್ಗ,ಜ.೩೧:
ಕುವೆಂಪು ವಿವಿಯ ಆಡಳಿತ ಸಂಪೂರ್ಣ ಕುಸಿದಿದ್ದು, ಗೊಂದಲ ದ ಗೂಡಾಗಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಕುವೆಂಪು ವಿವಿಯ ಆಡಳಿತ ಕುಸಿದಿದೆ. ಇದರ ಪರಿಣಾಮವಾಗಿ ವಿವಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜುಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ವಿದ್ಯಾರ್ಥಿಗಳು ಕೂಡ ಆತಂಕ ದಲ್ಲಿದ್ದಾರೆ. ಒಂದು ಕಡೆ ಪಾಠಗಳು ನಡೆಯುತ್ತಿಲ್ಲ
. ಅಧ್ಯಾಪಕರುಗಳು ಇಲ್ಲ. ಪರೀಕ್ಷೆಗಳು ಸಮಯಕ್ಕೆ ಸರಿ ಯಾಗಿ ನಡೆಯುತ್ತಿಲ್ಲ. ವಿದ್ಯಾರ್ಥಿ ವೇತನಕ್ಕೆ ತೊಂದರೆಯಾಗಿದೆ. ಹೊಸ ವಿಷಯಗಳಿಗೆ ಯಾರು ಪಾಠ ಮಾಡಬೇಕು ಎಂಬುವುದೇ ಗೊತ್ತಿ ಲ್ಲ. ಮುಖ್ಯವಾಗಿ ವಿವಿಗೆ ಖಾಯಂ ಕುಲಪತಿ ಹಾಗೂ ಕುಲಸಚಿವರು (ಶೈಕ್ಷಣಿಕ)ನೇಮಕವೇ ಆಗಿಲ್ಲ ಎಂದು ಆರೋಪಿಸಿದರು.
ಈ ಎಲ್ಲಾ ಸಮಸ್ಯೆಗಳನ್ನು ಇಟ್ಟು ಕೊಂಡು ನಾಳೆ ಅಥವಾ ನಾಡಿದ್ದು ಸುಮಾರು ೧೫ ಕಾಲೇಜು ಗಳ ಪ್ರಾಂಶುಪಾಲರ ಜೊತೆಗೂಡಿ ಉನ್ನತ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಅವರನ್ನು ಭೇಟಿ ಮಾಡಿ, ಸಮಸ್ಯೆ ಗಳನ್ನು ಗಮನಕ್ಕೆ ತರಲಾಗುವುದು ಮತ್ತು ರಾಜ್ಯಪಾಲ ರು ಮಧ್ಯಪ್ರವೇಶ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿ ಮಾಡಲಾಗುವುದು ಎಂದರು.
ಜ.೨೪ಕ್ಕೆ ಸೆಮಿಸ್ಟರ್‌ಗಳು ಮುಕ್ತಾಯವಾಗಬೇಕಿತ್ತು. ೨೫ಕ್ಕೆ ಪರೀಕ್ಷೆಗಳು ಆರಂಭವಾಗಬೇಕಿತ್ತು. ಆದರೆ, ಪರೀಕ್ಷಾ ದಿನಾಂಕಗಳನ್ನು ಕಾರಣಗಳು ಇಲ್ಲದೆ ಮುಂದೂಡ ಲಾಗಿದೆ. ತಮ್ಮ ವೈಫಲ್ಯತೆ ಮುಚ್ಚಿಕೊಳ್ಳಲು ಪರೀಕ್ಷೆಗಳನ್ನು ಮುಂದೂಡಿದರೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ಗತಿ ಯೇನು?. ವೇಳಪಟ್ಟಿಯನ್ನು ಮುಂದೂಡುತ್ತಾ ಹೋದರೆ ಮೌಲ್ಯ ಮಾಪನ ತರಗತಿಗಳ ಆರಂಭ, ಪ್ರವೇಶ ಪ್ರಕ್ರಿಯೆ ಇವೆ ಲ್ಲವೂ ಗೊಂದಲದ ಗೂಡಾಗಿ ವಿದ್ಯಾರ್ಥಿ ಗಳ ಮೇಲೆ ಪರಿಣಾಮ ಬೀರುತ್ತದೆಂದರು.
ಎನ್‌ಇಪಿ ಅಂಕಪಟ್ಟಿ ಕೊಟ್ಟಿಲ್ಲ, ಆನ್‌ಲೈನ್ ಅಂಕಪಟ್ಟಿಗಳು ದೋಷ ಪೂರಿತವಾಗಿವೆ. ಅಂಕಪಟ್ಟಿಯಲ್ಲಿ ಎನ್‌ಎಸ್‌ಎಸ್ ಕ್ರೀಡೆ ಮತ್ತು ಇತರೆ ವಿಷಯಗಳನ್ನು ನಮೂದಿಸಿರುವು ದಿಲ್ಲ. ಇದರಿಂದ ಎಸ್‌ಎಸ್‌ಪಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸು ವುದು ಕಷ್ಟವಾಗಬಹುದು. ಪ್ರಾಂಶುಪಾಲರುಗಳು ಅಸಹಾಯಕ ರಾಗಿದ್ದಾರೆ. ಪಠ್ಯ ಚಟುವಟಿಕೆಗಳೇ ಕುಂಠಿತಗೊಂಡಿವೆ. ವಿವಿಯಿಂದ ಯಾವುದೇ ಕಾಲೇಜಿನ ಜೊತೆಯ ಸಂವಹನವೇ ಇರುವುದಿಲ್ಲ. ಜೊತೆಗೆ ಜಿ.ಪಂ. ಸಿಇಓ ಅವರೇ ಕುಲಸಚಿವರಾಗಿರುವುದರಿಂದ ಅವರಿಗೆ ಕಾರ್ಯದ ಒತ್ತಡವಿರುತ್ತದೆ. ಹಾಗಾಗಿ ಅನಗತ್ಯ ವಿಳಂಬವಾ ಗುತ್ತದೆ ಎಂದರು.
ಹೀಗೆ ಹಲವು ಸಮಸ್ಯೆಗಳು ಕುವೆಂಪು ವಿವಿಯಲ್ಲಿದೆ. ಇವೆಲ್ಲ ವನ್ನು ಗಂಭೀರವಾಗಿ ಪರಿಗಣಿಸ ಬೇಕಾಗಿದೆ. ವಿದ್ಯಾರ್ಥಿಗಳ ಹಿತವನ್ನು ಕಾಯಬೇಕಾಗಿದೆ. ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ವೈ.ಹೆಚ್. ನಾಗರಾಜ್, ಶಿ.ಜು.ಪಾಶ, ಐಡಿಯಲ್ ಗೋಪಿ, ಮುಕ್ತಿಯಾರ್ ಅಹಮದ್, ಸೈಯ್ಯದ್ ವಾಹಿದ್ ಅಡ್ಡು , ಸಂತೋಷ್ ಆಯನೂರು ಇದ್ದರು.