ಶಿವಮೊಗ್ಗ: ಪ್ಲಾಸ್ಟಿಕ್ ಬಳಕೆಯಿಂದಾಗಿ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ್ ಹೇಳಿದರು.ತಾಲ್ಲೂಕಿನ ಸೋಗಾನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ೩ ನೇ ಮೈಲಿಕಲ್ಲು ಮುಖ್ಯರಸ್ತೆಯಲ್ಲಿ ಶಾಹಿ ಎಕ್ಸ್‌ಪೋರ್ಟ್ ಪ್ರೈವೇಟ್ ಲಿ, ಸಾಹಸ್ ಸಂಸ್ಥೆ, ಸೋಗಾನೆ ಗ್ರಾಮ ಪಂಚಾಯಿತಿ ಹಾಗೂ
ಚಾಮುಂಡೇಶ್ವರಿ ಸ್ವ-ಸಹಾಯ ಸಂಘದ ಸಹಯೋಗದಲ್ಲಿ ಆರಂಭಿಸಿರುವ ನಿಸರ್ಗ ಕಟ್ಲರಿ ಬ್ಯಾಂಕ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ಲಾಸ್ಟಿಕ್ ಬಳಕೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರಿಂದಾಗಿ ನಾವು ಒಂದಿಲ್ಲೊಂದು ಸಮಸ್ಯೆಗೆ ತುತ್ತಾಗುತ್ತಿದ್ದೇವೆ. ಹಾಗಾಗಿ ಹಂತಹಂತವಾಗಿ ನಾವು ಪ್ಲಾಸ್ಟಿಕ್ ಬಳಕೆಯಿಂದ ದೂರ ಸರಿದು ನೈಸರ್ಗಿಕ ವಸ್ತುಗಳನ್ನು ಬಳಸಲು ಮನಸ್ಸು ಮಾಡಬೇಕು. ಗ್ರಾಮೀಣ ಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸ ಆಗಬೇಕು ಎಂದು ಹೇಳಿದರು.ನಿಸರ್ಗ ಕಟ್ಲರಿ ಬ್ಯಾಂಕ್ ಸ್ಥಾಪನೆ ರಾಜ್ಯದಲ್ಲಿಯೇ ಮಾದರಿ ಕಾರ್ಯ. ಇದರಿಂದ ಸ್ವ-ಸಹಾಯ ಸಂಘದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು
ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ಮಹಿಳೆಯರು ನಿಸರ್ಗ ಕಟ್ಲರಿ ಬ್ಯಾಂಕನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ತಾ.ಪಂ ಇಒ ಅವಿನಾಶ್, ಶಾಹಿ ಎಕ್ಸ್‌ಪೋರ್ಟ್ ಪ್ರೈವೇಟ್ ಲಿ.ನ ಹಿರಿಯ ನಿರ್ವಹಣಾ ಅಧಿಕಾರಿ ನಾಗಯ್ಯ, ಸಾಹಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಚನಾ ತ್ರಿಪಾಠಿ, ಸೋಗಾನೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸುಮಿತ್ರ, ಉಪಾಧ್ಯಕ್ಷರಾದ ಶೋಭಾಮೂರ್ತಿ, ಸದಸ್ಯರಾದ ಗೋವಿಂದರಾಜ್, ಹೇಮೇಶ್‌ನಾಯ್ಕ್, ಪಿಡಿಒ ಸುನಂದಮ್ಮ, ಸಾಹಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಜಾರ್ಜ್, ರಾಜೇಂದ್ರ ರಾಥೋಡ್, ಹರೀಶ್, ರಮೇಶ್, ನವೀನ್, ಜಯರಾಮ್ ಮತ್ತಿತರರಿದ್ದರು.