52 ಲೀ ಅಕ್ರಮ ಮದ್ಯ ವಶ
ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮಾರಾಟ ಮಾಡಲು ತಂದಿಟ್ಟ 24 ಸಾವಿರ ಮೌಲ್ಯದ 52 ಲೀಟರ್ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹೊಸನಗರ ತಾಲೂಕು ನಗರ ಹೋಬಳಿ ಮತ್ತಿ ಮನೆ ನಿವಾಸಿ ಗಣೇಶ್ ಆಚಾರ್ಯ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ.
ಜಿಲ್ಲಾ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್, ತೀರ್ಥಹಳ್ಳಿ ಉಪ ವಿಭಾಗದ ಉಪ ವಿಭಾಗದ ಉಪ ಅಧೀಕ್ಷಕ ಸಂತೋಷ್, ಹೊಸನಗರ ಅಬಕಾರಿ ನಿರೀಕ್ಷಕ ಡಿ.ಎನ್ .ಹನುಮಂತಪ್ಪ ನೇತೃತ್ವದ ತಂಡ ದಾಳಿ ನಡೆಸಿತ್ತು.
ವಿದ್ಯುತ್ ಕಂಬ ಏರಿದ್ದ ವಿದ್ಯಾರ್ಥಿ ಸಾವು
ಭದ್ರಾವತಿ: ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿ ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದ ಐಟಿಐ ವಿದ್ಯಾರ್ಥಿ ಸುರೇಶ್ (19) ಕಂಬದ ಮೇಲೆಯೇ ಸಾವು ಕಂಡಿರುವ ಘಟನೆ ವರದಿಯಾಗಿದೆ.
ಗ್ರಾಮದ ಅಣ್ಣಯ್ಯ ಅವರ ತೋಟದಲ್ಲಿ ನೀರು ಸರಬರಾಜು ಮಾಡುವ ಪಂಪ್ ಸೆಟ್ ಹಾಳಗಿದ್ದು, ಅದನ್ನು ಪರೀಕ್ಷಿಸಲು ಸುರೇಶ್ ಬಂದಿದ್ದರು. ಪಂಪ್ ಸೆಟ್ ಗೆ ವಿದ್ಯುತ್ ಸರಬರಾಜು ಆಗದಿದ್ದರಿಂದ ಸಂಪರ್ಕದ ವಿದ್ಯುತ್ ಹರಿದ ಪರಿಣಾಮ ಕಂಬದಲ್ಲೆ ಸಾವು ಕಂಡಿದ್ದಾನೆ.
ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.