Site icon TUNGATARANGA

ಲೋಕಸಭೆಯಲ್ಲಿ ಬಿಜೆಪಿಗೆ 400 ಕ್ಕೂ ಹೆಚ್ಚು ಸ್ಥಾನ: ರಾಘವೇಂದ್ರ

ಶಿವಮೊಗ್ಗ, ಜ.೨೯:
೨೦೨೪ರ ಲೋಕಸಭಾ ಚುನಾವಣೆ ಕಾರ್ಯಾಲಯವನ್ನು ಜಿಲ್ಲಾ ಬಿಜೆಪಿ ಕಚೇರಿ ಯಲ್ಲಿ ಇಂದು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ ೪೦೦ಕ್ಕೂ ಹೆಚ್ಚು ಸ್ಥಾನ ಗಳಿಂದ ಗೆದ್ದು ಬಿಜೆಪಿ ಜಯಭೇರಿ ಭಾರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಸ್ಥಾನವನ್ನು ನಾವು ಈ ಬಾರಿ ಗೆಲ್ಲುತ್ತೇವೆ. ಶಿವಮೊಗ್ಗದಲ್ಲಿಯೂ ಕೂಡ ಒಳ್ಳೆಯ ವಾತಾವರಣವಿದೆ. ಅಭಿವೃದ್ಧಿಯ ಹಿನ್ನಲೆ ಯಿದೆ. ನಾವು ಮಾಡಿದ ಅಭಿವೃದ್ಧಿ ಕೆಲಸಗಳೇ ನಮ್ಮನ್ನು ಗೆಲ್ಲಿಸುತ್ತದೆ. ಬಿಜೆಪಿ ಕಾರ್ಯಕರ್ತ ರನ್ನು ಒಳಗೊಂಡಂತೆ ನಾಯಕರುಗಳೆಲ್ಲ ಸೇರಿಕೊಂಡು ಈ ಬಾರಿ ಅತ್ಯಧಿಕ ದಾಖಲೆ ರೀತಿಯ ಸೀಟುಗಳನ್ನು ಪಡೆದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂದರು.


ಲೋಕಸಭಾ ಕ್ಷೇತ್ರದ ಸಂಚಾಲಕ ಹಾಗೂ ಮಾಜಿ ಶಾಸಕ ರಘುಪತಿ ಮಾತನಾಡಿ, ಶ್ರೀರಾಮಮಂದಿರ ಪ್ರತಿಷ್ಠಾಪನೆ ಆದ ಮೇಲೆ ಜನರು ಚುನಾವಣೆಗಾಗಿಯೇ ಕಾಯುತ್ತಿದ್ದಾರೆ. ಬಿಜೆಪಿಯನ್ನು ಯಾವಾಗ ಗೆಲ್ಲಿಸುತ್ತೇವೆ ಎಂಬ ಉತ್ಸಾಹದಲ್ಲಿ ಇದ್ದಾರೆ. ಬಿಜೆಪಿ ಗೆಲ್ಲುವಿಗೆ ಸಂಕಲ್ಪ ತೊಟ್ಟಿದ್ದಾರೆ. ಇಡೀ ಜಿಲ್ಲೆಯಲ್ಲೂ ಕೂಡ ಅಭಿವೃದ್ಧಿ ಕೆಲಸ ಆಗಿದೆ. ಎಲ್ಲರೂ ಒಟ್ಟಾಗಿ ಬಿಜೆಪಿಯನ್ನು ಗೆಲ್ಲಿಸೋಣ, ನಮ್ಮ ಜವಬ್ದಾರಿಯನ್ನು ನಿರ್ವಹಿಸೋಣ ಎಂದರು.


ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘ ರಾಜ್ ಮಾತನಾಡಿ, ಬಿಜೆಪಿ ಕಚೇರಿಯಲ್ಲಿ ಲೋಕಸಭಾ ಚುನಾವಣಾ ಕಾರ್ಯಾಲಯ ಆರಂಭಗೊಂಡಿದೆ. ಕಾರ್ಯಕರ್ತರು ಅತ್ಯಂತ ಉತ್ಸಾಹದಲ್ಲಿದ್ದಾರೆ. ವಿಶ್ವವಿಖ್ಯಾತ ಮೋದಿ ಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದರು.


ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನಪರಿಷತ್ ಸದಸ್ಯ ರಾದ ಡಿ.ಎಸ್.ಅರುಣ್, ಎಸ್.ರುದ್ರೇಗೌಡರು, ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಆರ್.ಕೆ.ಸಿದ್ರಾಮಣ್ಣಾ, ಜಿಲ್ಲಾ ಪ್ರಭಾರಿ ಗಿರೀಶ್ ಪಟೇಲ್, ಪ್ರಮುಖರಾದ ಎಸ್.ದತ್ತಾತ್ರಿ, ಶಿವ ರಾಜ್, ಮಾಲತೇಶ್ ಸೇರಿದಂತೆ ಹಲವರಿ ದ್ದರು.

Exit mobile version