https://youtu.be/zvtjqXVA_bQ?si=5iGIabZ6Uzjhv0r_
ನಮ್ಮ ನಡೆ ವಿದ್ಯುತ್ “ನಮ್ಮ ನಡೆ ವಿದ್ಯುತ್ ಗ್ರಾಹಕರ ಸುರಕ್ಷತೆಯ ಕಡೆ” ಸೈಕಲ್ ಜಾಥ ನಡೆಸಿದ ಶಿವಮೊಗ್ಗ ಮೆಸ್ಕಾಂ
ಶಿವಮೊಗ್ಗ, ಜ.26:
ವಿದ್ಯುತ್ ಎಂಬುದು ನಮ್ರತೆಯ ಸೇವಕ ಆದರೆ ಕೆಟ್ಟ ಯಜಮಾನ ಎಂದು ಕರೆಯುತ್ತೇವೆ ಈ ಪದವನ್ನು ಏಕೆ ಹೇಳುತ್ತೇವೆ ಎಂದರೆ ಬೇರೆ ಯಾವುದೇ ಅಪಘಾತವಾದರೆ ಅಪಘಾತವಾದ ವ್ಯಕ್ತಿಯನ್ನು ತಕ್ಷಣವೇ ಮುಟ್ಟಿ ಎತ್ಕೊಂಡು ಹಾಸ್ಪಿಟಲ್ ಗೆ ಸೇರಿಸಿ ಜೀವ ಉಳಿಸುವಂತಹ ಪ್ರಯತ್ನ ನಡೆಯುತ್ತದೆ.
ಆದರೆ ವಿದ್ಯುತ್ ಶಕ್ತಿಯ ಸ್ಪರ್ಶದಿಂದ ಅಪಘಾತವಾದಾಗ ಅಪಘಾತಕ್ಕೆ ಸಿಲುಕಿರುವ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ತಕ್ಷಣವೇ ಮುಟ್ಟಿ ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಯಾವ ವ್ಯಕ್ತಿಯು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಅವರನ್ನು ಮುಟ್ಟಿದರೆ ಮುಟ್ಟಿದಂತಹ ವ್ಯಕ್ತಿಯು ಕೂಡ ವಿದ್ಯುತ್ ಅಪಘಾತಕ್ಕೆ ಒಳಗಾಗುತ್ತಾರೆ.
ಈ ಅಪಘಾತದಲ್ಲಿ ಕ್ಷಮೆ ಎಂಬುದು ಇರುವುದೇ ಇಲ್ಲ. ಬೇರೆ ಅಥವಾ ಇನ್ನಿತರ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವುದು ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಆದರೆ ವಿದ್ಯುತ್ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವ ಸಂಖ್ಯೆಯೇ ಹೆಚ್ಚಾಗಿರುತ್ತದೆ.
ಈ ವಿಚಾರವಾಗಿ ಗಣರಾಜ್ಯೋತ್ಸವದಂದು ಶಿವಮೊಗ್ಗ ನಗರದ ಜನತೆಗೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಶಿವಮೊಗ್ಗ ನಗರದ ಮೆಸ್ಕಾಂ ವಿಭಾಗ ಕಚೇರಿ ವತಿಯಿಂದ ಕಾರ್ಯನಿರ್ವಾಹಕ ಇಂಜಿನಿಯರ್ ವೀರೇಂದ್ರ ಅವರ ಮುಂದಾಳತ್ವದಲ್ಲಿ ನಮ್ಮ ನಡೆ ವಿದ್ಯುತ್ “ಗ್ರಾಹಕರ ಸುರಕ್ಷತೆಯ ಕಡೆ” ಎಂದು ಸೈಕಲ್ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.