Site icon TUNGATARANGA

ನಾಳೆ ಶ್ರೀಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಮತ್ತು ಎಸ್. ರುದ್ರೇಗೌಡರ ಅಭಿನಂದನ ಸಮಿತಿ ವತಿಯಿಂದ ಪ್ಲೇಟ್ ಬ್ಯಾಂಕ್ ಲೋಕಾರ್ಪಣೆ ಕಾರ್ಯಕ್ರಮ: ಎಸ್.ಎಸ್.ಜ್ಯೋತಿಪ್ರಕಾಶ್

ಶಿವಮೊಗ್ಗ, ಜ.26:ಶ್ರೀಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಮತ್ತು ಎಸ್. ರುದ್ರೇಗೌಡರ ಅಭಿನಂದನ ಸಮಿತಿ ವತಿಯಿಂದ ಜ.27ರಂದು ಬೆಳಿಗ್ಗೆ 10.30ಕ್ಕೆ ಸರ್ಜಿ ಹಾಲ್‍ನಲ್ಲಿ ಪ್ಲೇಟ್ ಬ್ಯಾಂಕ್ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್.ರುದ್ರೇಗೌಡರ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಲಾಗಿದೆ. ಮುಖ್ಯವಾಗಿ ಘನ ತ್ಯಾಜ್ಯವನ್ನು ಕಡಿಮೆ ಮಾಡಲು ಪರಿಸರವನ್ನು ಕಾಪಾಡಲು ಈ ಯೋಜನೆಯನ್ನು ತರಲಾಗಿದೆ. ಬೆಂಗಳೂರಿನ ಆದಮ್ಯ ಚೇತನ ಪೌಂಡೇಶನ್‍ನ ಅಧ್ಯಕ್ಷೆ ತೇಜಸ್ವಿನಿ  ಅನಂತ್‍ಕುಮಾರ್ ಇದನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.

ಇದೊಂದು ಅತ್ಯುತ್ತಮ ಹಾಗೂ ಪರಿಸರ ಪ್ರೇಮಿ ಯೋಜನೆಯಾಗಿದೆ. ಸಾರ್ವಜನಿಕರು ತಮ್ಮ ಯಾವುದೇ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್‍ನ ಬದಲು ಎಲೆಗಳ ಬದಲು ಊಟದ ಸ್ಟೀಲ್ ತಟ್ಟೆಗಳನ್ನು ಬಳಸಿದರೆ, ಘನ ತ್ಯಾಜ್ಯ ಕಡಿಮೆ ಮಾಡಬಹುದಾಗಿದೆ. ಹಾಗೆಯೇ ಪ್ಲಾಸ್ಟಿಕ್ ಬಳಕೆ ಕೂಡ ಇಲ್ಲವಾಗುತ್ತದೆ ಎಂದರು. 

ಸುಮಾರು 5 ಸಾವಿರ ಊಟದ ಸ್ಟೀಲ್ ತಟ್ಟೆ 2 ಸಾವಿರ ಲೋಟ, ಟೀ ಮತ್ತು ಕಾಪಿ ಕಪ್ಪುಗಳು, ಚಮಚಗಳು, ಈ ಪ್ಲೇಟ್ ಬ್ಯಾಂಕ್‍ನಲ್ಲಿ ಲಭ್ಯವಿರುತ್ತವೆ. ಸಾರ್ವಜನಿಕರು ಈ ಪ್ಲೇಟ್ ಬ್ಯಾಂಕ್‍ನಿಂದ ಇವುಗಳನ್ನು ತೆಗೆದುಕೊಂಡು ಹೋಗಬಹುದು. ಆದರೆ ಡೆಪಾಜಿಟ್ ಕಟ್ಟುವುದು ಅಗತ್ಯವಾಗಿದೆ. ಸುರಕ್ಷಿತವಾಗಿ ಪ್ಲೇಟ್‍ಗಳನ್ನು ಮರಳಿಸಿದಾಗ ಅವರ ಡಿಪಾಜಿಟ್‍ನ್ನು ವಾಪಾಸು ಕೊಡಲಾಗುವುದು ಹಾಗಾಗಿ ಇದೊಂದು ಉಚಿತ ಸೇವೆಯಾಗಿದೆ ಎಂದರು.

ಕೆ.ಕಿರಣ್‍ಕುಮಾರ್ ಮಾತನಾಡಿ, ಪ್ಲಾಸ್ಟಿಕ್ ತಟ್ಟೆ ಲೋಟ ಬಳಸವುದರಿಂದ ಭೂಮಿಗೆ ಮತ್ತು ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಇದರಿಂದ ಪರಿಸರಕ್ಕೂ ಹಾನಿ ಮನುಷ್ಯರಿಗೂ ಹಾನಿಯಾಗುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ಲೇಟ್ ಬ್ಯಾಂಕ್ ಯೋಜನೆಯನ್ನು ತರಲಾಗಿದೆ.

ಇದರ ಸಂಪೂರ್ಣ ನಿರ್ವಹಣೆಯ ಜವಬ್ದಾರಿಯನ್ನು ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ತೆಗೆದುಕೊಂಡಿದೆ. ಸಾರ್ವಜನಿಕರು ಈ ಸೇವಾ ಸಂಘವನ್ನು ಸಂಪರ್ಕಿಸಿ ಇದರ ಪ್ರಯೋಜನ ಪಡೆಯಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಭಿನಂದನಾ ಸಮಿತಿಯ ಅಧ್ಯಕ್ಷ ಡಿಜಿ. ಬೆನಕಪ್ಪ, ಉದ್ಯಮಿ ಬಾಳೆಕಾಯಿ ಮೋಹನ್, ಮಹಾರುದ್ರಸ್ವಾಮಿ, ರೇಣುಕಾರಾಧ್ಯ, ಅನಿತಾ ರವಿಶಂಕರ್ ಮುಂತಾದವರು ಇದ್ದರು.

Exit mobile version