Site icon TUNGATARANGA

ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿ ಪಾವತಿಸಲು ಕೌಂಟರ್/

*
ಶಿವಮೊಗ್ಗ ಜನವರಿ 25
   2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ಕೆಳಕಂಡ ಸ್ಥಳಗಳಲ್ಲಿ ವಿಶೇಷ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದ್ದು,

ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾತಿಸಲು ಕೋರಿದೆ. ಇಲ್ಲವಾದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು.


       ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗದ ವತಿಯಿಂದ ದಿ: 28-01-2024 ರ ಭಾನುವಾರದಂದು ಶರಾವತಿನಗರ, ಚರ್ಚ್ ರಸ್ತೆ, ವೀಣಾ ಶಾರದ ಪ್ರೌಢಶಾಲೆ ಆಟೋ ಸ್ಟ್ಯಾಂಡ್ ಹತ್ತಿರ ಶಿವಮೊಗ್ಗ. ಸ್ಟೇಟ್ ಬ್ಯಾಂಕ್

ಆಫ್ ಇಂಡಿಯಾ(ಎಸ್‍ಬಿಐ) ಹತ್ತಿರ ವಿದ್ಯಾನಗರ, ಬಿ.ಹೆಚ್.ರಸ್ತೆ, ಶಿವಮೊಗ್ಗ. ಶಾಂತಿನಗರ ಕೊನೆ ಬಸ್ಟಾಪ್, ಪೊಲೀಸ್ ಚೌಕಿ ಹತ್ತಿರ, ಶಿವಮೊಗ್ಗ. ಕೆಳಗಿನ ತುಂಗಾನಗರ, ಚೌಡಮ್ಮ ದೇವಸ್ಥಾನದ ಎದುರು ಶಿವಮೊಗ್ಗ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೀಗೆಹಟ್ಟಿ,

ಶಿವಮೊಗ್ಗ ಇಲ್ಲಿ ಕೌಂಟರ್‍ಗಳನ್ನು ತೆರೆಯಲಾಗಿದು ಬಾಕಿದಾರರು ನೀರಿನ ಕಂದಾಯ ಪಾವತಿಸುವಂತೆ ಇಲ್ಲವಾದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಕನನೀಸ ಮತ್ತು ಒಳಚರಂಡಿ ಮಂಡಳಿ, ನಿರ್ವಹಣೆ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

Exit mobile version