Site icon TUNGATARANGA

ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಫೆ.3 ಮತು 4 ರಂದು/ಕರಿನೀರ ವೀರ ನಾಟಕದ ಪ್ರದರ್ಶನ: ಸಂಸ್ಥೆಯ ಮುಖ್ಯಸ್ಥ ವಿನಯ್

ಶಿವಮೊಗ್ಗ,ಜ.೨೪:ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಫೆ.೩ ಮತು ೪ರಂದು ಸಂಜೆ ೬.೪೫ಕ್ಕೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಕರಿನೀರ ವೀರ ನಾಟಕದ ಎರಡು ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ವಿನಯ್ ಹೇಳಿದರು.
ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಡಗಿನ ರಂಗಭೂಮಿ ಟ್ರಸ್ಟ್ ಅಭಿನಯಿಸುವ ಈ ನಾಟಕವನ್ನು ಖ್ಯಾತ ನಾಟಕಕಾರ ಅಡ್ಡಂಡ ಕಾರ್ಯಪ್ಪ ಬರೆದು ನಿರ್ದೇಶನ ಮಾಡಿದ್ದಾರೆ ಎಂದರು.


ಸ್ವಾತಂತ್ರ್ಯ ವೀರ ಸಾವರ್ಕರ್ ಒಬ್ಬ ಅಸದೃಶ ಕ್ರಾಂತಿ ಪುರುಷ ಹೀಗಿದ್ದಾಗಲೂ ಸಾವರ್ಕರ್ ಅವರನ್ನು ಹೇಡಿ ಎಂದು ಜರೆಯುವ ಮತಿಗೇಡಿಗಳಿಗೆ ಉತ್ತರ ಈ ನಾಟಕ. ಕರಿನೀರ ವೀರ ನಾಟಕ ಒಂದು ಕಲ್ಪಿತ ಕಥೆಯಲ್ಲ. ಒಬ್ಬ ಅಸದೃಶ ವ್ಯಕ್ತಿಯ ಕಲಾಶಕ್ತಿ, ಜೀವನೋತ್ಸಾಹ ಹಾಗೂ ವಾಸ್ತವ ಇತಿಹಾಸ ಎಲ್ಲವೂ ಈ ನಾಟಕದಲ್ಲಿ ಅಡಕವಾಗಿದೆ ಎಂದರು.


ಸಾವರ್ಕರ್ ಅನುಭವಿಸಿದ ಕರಿನೀರ ಶಿಕ್ಷೆ… ಅವರು ಕೈಗೊಂಡ ಸಾಮಾಜಿಕ ಸುಧಾರಣೆಗಳು… ಗಾಂಧಿ ನೆಹರು ಅಂತವರ ಭಾರತ ವಿಭಜನೆಯ ಭೋಳೇತನದ ನಡೆಗಳು… ಅಂದಿನ ಕಾಂಗ್ರೆಸ್ ನಾಯಕರ ಎಡಬಿಡಂಗಿತನ…ಹೀಗೆ ಅನೇಕ ಹಂದರಗಳು ನಾಟಕದ ಹೈಲೈಟ್ ಆಗಿವೆ ಎಂದರು.


ನಾಡಿನ ಪ್ರತಿಯೊಬ್ಬರೂ ಈ ನಾಟಕವನ್ನು ನೋಡಿ ವಾಸ್ತವ ಇತಿಹಾಸವನ್ನು ಇನ್ನಷ್ಟು ನಿಕಟವಾಗಿ ಅರಿತುಕೊಳ್ಳಬೇಕೆಂದು ಅವರು ಕೋರಿದರು..
ಈ ನಾಟಕಕ್ಕೆ ಪ್ರವೇಶ ಶುಲ್ಕ ೫೦೦ ಹಾಗೂ ೨೦೦ ರೂ.ಗಳನ್ನು ನಿಗಧಿಮಾಡಿದ್ದು, ಟಿಕೆಟ್‌ಗಳು ಹಾಗೂ ಮಾಹಿತಿಗಾಗಿ ಮೊ.ನಂ. ೯೪೪೮೪ ೫೮೪೫೭, ೮೬೧೮೦ ೭೨೯೮೧ , ೯೮೪೪೧೫೩೫೩೪, ೮೩೧೦೮ ೭೬೨೭೭ಅನ್ನು ಸಂಪರ್ಕಿಸಬಹುದಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಚ್ಯುತ್‌ರಾವ್ ಆರ್., ನಾಗೇಶ್ ಎಸ್. ಕುಮಾರಶಾಸ್ತ್ರಿ ಕೆ.ಜೆ., ಚೇತನ್, ಡಾ.ರಂಜನಿ ಬಿದರಹಳ್ಳಿ ಇದ್ದರು.

Exit mobile version