ಶಿವಮೊಗ್ಗ, ಜ.24
ರಾಜ್ಯ ವಿಧಾನ ಪರಿಷತ್ ವತಿಯಿಂದ ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್ ಮತ್ತು ಡಾ. ಸೂರಜ್ ರೇವಣ್ಣ ಅವರನ್ನು ನಾಮನಿರ್ದೇಶನ ಮಾಡಿ ಕರ್ನಾಟಕ ವಿಧಾನಪರಿಷತ್ ಆದೇಶ ಹೊರಡಿಸಿದೆ.
ಶಿವಮೊಗ್ಗ ಮೂಲದ ಡಿಎಸ್ ಅರುಣ್ ಯುವಕರ ಪಾಲಿಗೆ ಅಚ್ಚುಮೆಚ್ಚಿನ ಕಣ್ಮಣಿ. ಅಹಃ ರಹಿತವಾದ ಅರುಣ್ ಅವರು ಅವರ ತಂದೆ ನಿಕಟಪೂರ್ವ ವಿಧಾನಪರಿಷತ್ ಸಭಾಪತಿ ಡಿ.ಹೆಚ್. ಶಂಕರ ಮೂರ್ತಿಯವರಂತೆ ಶಾಂತ ಸ್ವಭಾವದ ಸರಳ ಸಜ್ಜನಿಕೆಯ ವ್ಯಕ್ತಿ.
ಕ್ರೀಡೆ, ಶಿಕ್ಷಣ, ಸಾಮಾಜಿಕ ಚಟುವಟಿಗಳ ಮೂಲಕ ತಮ್ಮದೇ ಮೇರು ವ್ಯಕ್ತಿತ್ವ ಹೊಂದಿರುವ ಅರುಣ್ ಅವರು ಇತ್ತೀಚೆಗಷ್ಟೆ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ.
ಅವರನ್ನು ಕುವೆಂಪು ವಿವಿಗೆ ನೇಮಿಸುವ ಮೂಲಕ ಯುವ ವಿದ್ಯಾರ್ಥಿ ಸಮುದಾಯಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಯ ಪದವಿ ಕಾಲೇಜುಗಳಿಗೆ ಲಾಭದಾಯಕವಾಗಲಿದೆ. ಅಂತೆಯೇ ಅವರೊಂದಿಗೆ ಬೆಂಗಳೂರು ಮೂಲದ ವಿಧಾನಪರಿಷತ್ ಶಾಸಕ ಡಾ ಸೂರಜ್ ನೇಮಕ ಗೊಂಡಿದ್ದಾರೆ.
ಅರುಣ್ ಅವರನ್ನು ನೇಮಕಮಾಡಿರುವ ಪರಿಷತ್ ಕ್ರಮಕ್ಕೆ ಹಿರಿಯರು, ಗಣ್ಯರು, ಯುವ ಬಳಗ ಅಭಿನಂದಿಸಿದೆ.