ರಾಮಲಾಲನ ಪ್ರತಿಷ್ಠಾಪನೆಯ ಸಂದರ್ಭವಾಗಿ ಶಿವಮೊಗ್ಗದಲ್ಲಿ ಲಡ್ಡು ಹಂಚುವಾಗ ಮುಸ್ಲಿಂ ಮಹಿಳೆಯೊಬ್ಬಳು ಮಧ್ಯ ಪ್ರವೇಶ ಮಾಡಿ, ಮೋದಿಗೆ ಬೈಯುತ್ತ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಘಟನೆಯನ್ನು ಕೂಡಲೇ ತನಿಖೆ ನಡೆಸಬೇಕು ಎಂದು ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಅವರು ಇಂದು ಸುದ್ಧಿಗಾರರೊಂದಿಗೆ ಮಾತನಾಡಿ, ಇಡೀ ದೇಶವೇ ಸಂತೋಷದ ಸಮಯದಲ್ಲಿ ಇದೆ. ಹಿಂದುಗಳ ಕನಸು ನನಸಾಗಿದೆ. ರಾಮ ಹುಟ್ಟಿದ ಜಾಗವನ್ನು ಪುಡಿಪುಡಿ ಮಾಡಿ,
ಅಲ್ಲಿ ಬಾಬರ್ ಮಸೀದಿಯನ್ನು ನಿರ್ಮಿ ಸಲಾಗಿತ್ತು. ನೂರಾರು ವರ್ಷಗಳ ಹೋರಾಟದ ಫಲವಾಗಿ ಹಿಂದೂಗಳಿಗೆ ಆದ ಅನ್ಯಾಯ ಇಂದು ಸರಿಪಡಿಸಲಾಗಿದೆ. ರಾಮಲಾಲನ ಪ್ರತಿಷ್ಠಾಪನೆ ಇಂದು
ನೆರವೇರುತ್ತಿದೆ. ದೇಶವು ಸೇರಿದಂತೆ ಜಗತ್ತೇ ಸಂಭ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಈ ಅಹಿತಕರ ಘಟನೆ ನಡೆದಿರುವುದು ಖಂಡ ನೀಯ ಎಂದರು.