Site icon TUNGATARANGA

ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಹಿಳೆಯ ಬಗ್ಗೆ ಅವರ ತಂದೆ ಸೈಯ್ಯದ್ ಅಬ್ಬಾಸ್ ಹೇಳಿದ್ದೇನು ?

ಶಿವಮೊಗ್ಗ,ಜ.22:ನನ್ನ ಮಗಳು ಮಾನಸಿಕ ಅಸ್ವಸ್ಥೆಯಾಗಿದ್ದು, 2018ರಿಂದ ನಗರದ ವಿವಿಧ ಮಾನಸಿಕ ತಜ್ಞರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇಂದು ಶಿವಪ್ಪನಾಯಕ ವೃತ್ತದಲ್ಲಿ ರಾಮ ಪ್ರತಿಷ್ಠಾ ಸಂಭ್ರಮಾಚರಣೆ ಸಂದರ್ಭದಲ್ಲಿ ಸಿಹಿಹಂಚಿಕೆ ಮಾಡುತ್ತಿರುವಾಗ, ಆಕೆ ಅಲ್ಲಾಹು ಅಕ್ಬರ್ ಘೋಷಣೆ ಮಾಡಿದ್ದಕ್ಕೆ ನಾನು ವಿಷಾಧ ವ್ಯಕ್ತಪಡಿಸುತ್ತೇನೆ. ಯಾರೂ ಕೂಡ ಇದನ್ನು ಗಂಭೀರವಾಗಿ ಪರಿಗಣ ಸಬೇಡಿ ಎಂದು ಮಹಿಳೆ ಅಂಜುಮಾಹಾರ ಅವರ ತಂದೆ ಸೈಯ್ಯದ್ ಅಬ್ಬಾಸ್ ಹೇಳಿದ್ದಾರೆ.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಊರುಗಡೂರು ನಿವಾಸಿಯಾಗಿದ್ದು, ಸರ್ಕಾರಿ ಉದ್ಯೋಗದಲ್ಲಿದ್ದು, ಈಗ ನಿವೃತ್ತಿಯಾಗಿದ್ದೇನೆ. ನನ್ನ ಮಗಳಿಗೆ ಮದುವೆಯಾಗಿ 3ಮಕ್ಕಳಿದೆ. ಚಿಕಿತ್ಸೆಯ ಕಾರಣದಿಂದ ದಾವಣಗೆರೆಯ ಗಂಡನ ಮನೆಯಿಂದ ಶಿವಮೊಗ್ಗದಲ್ಲಿ ನಮ್ಮ ಮನೆಯಲ್ಲಿ ವಾಸವಾಗಿದ್ದಾಳೆ.

2018ರಿಂದ ಆಕೆ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಪದೇ ಪದೇ ಕೋಪಗೊಳ್ಳುವುದು, ಕೈಯಲ್ಲಿ ಏನೂ ಸಿಕ್ಕಿದ್ದರೂ ಬಿಸಾಡುವುದು, ಜಗಳ ಮಾಡುವುದು ಮಾಡುತ್ತಿರುತ್ತಾಳೆ. ನಾವು ಆಕೆಯನ್ನು ಹೊರಗಡೆ ಬಿಡುವುದೇ ಇಲ್ಲ. ಚಿಕಿತ್ಸೆಗೆ ಮಾತ್ರ ಕರೆದುಕೊಂಡು ಬರುತ್ತೇವೆ. ಇಂದು ಆಕಸ್ಮಾತಾಗಿ ಅವಳದೇ ದ್ವಿಚಕ್ರ ವಾಹನದಲ್ಲಿ ಮಗುವನ್ನು ಕರೆದುಕೊಂಡು ಶಿವಪ್ಪನಾಯಕ ವೃತ್ತದ ಕಡೆ ಬಂದಾಗ ಅಲ್ಲಿ ಸಭೆ ನಡೆಯುತ್ತಿದ್ದನ್ನು ನೋಡಿ, ತನ್ನ ವಾಹನವನ್ನು ನಿಲ್ಲಿಸಿ ಮೊಬೈಲ್‌ನಿಂದ ವಿಡಿಯೋ ಮಾಡುತ್ತಿರುವಾಗ

ಪೊಲೀಸರು ಟ್ರಾಫಿಕ್‌ಗೆ ತೊಂದರೆಯಾಗುತ್ತದೆ. ದ್ವಿಚಕ್ರ ವಾಹನ ತೆಗೆಯುವಂತೆ ತಿಳಿಸಿದಾಗ ಆಕೆ, ಕೂಡಲೇ ಆಕ್ರೋಶಭರಿತಳಾಗಿ ಆ ರೀತಿ ವರ್ತಿಸಿದ್ದಾಳೆ. ತಕ್ಷಣ ಪೊಲೀಸರು ಅಲ್ಲಿಂದ ಆಕೆಯನ್ನು ಕರೆದುಕೊಂಡು

ಕೋಟೆ ಠಾಣೆಗೆ ಹೋಗಿದ್ದಾರೆ. ಸ್ಥಳದಲ್ಲಿ ಇದ್ದ ಕೆಲವರು ಜೈ ಶ್ರೀರಾಮ್ ಘೋಷಣೆ ಕೂಗಿದಾಗ ಗೊಂದಲದ ವಾತಾವರಣ ಉಂಟಾಗಿದೆ. ಬೇರೆ ಯಾವುದೇ ಕೆಟ್ಟ ದುರುದ್ದೇಶದಿಂದ ಈ ಘಟನೆ ನಡೆದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು ಮತ್ತು ಆಸ್ಪತ್ರೆಯ ದಾಖಲೆಗಳನ್ನು ಮಾಧ್ಯಮಗಳ ಮುಂದೆ ತೋರಿಸಿದರು.

ಜಿಲ್ಲಾ ರಕ್ಷಣಾಧಿಕಾರಿಗಳು ಕೂಡ ಈ ಬಗ್ಗೆ ಮಾಹಿತಿ ನೀಡಿ, ನಾವು ಎಲ್ಲಾ ಮೂಲಗಳಿಂದಲೂ ತನಿಖೆ ನಡೆಸಿದ್ದೇವೆ. ಆಕೆ ಮಾನಸಿಕ ಅಸ್ವಸ್ಥೆ ಎಂಬುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರು ಕೂಡ ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಅವರ ಸಂಬAಧಿಕರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಯಾರು ಕೂಡ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಹೇಳಿದ್ದಾರೆ.

Exit mobile version