Site icon TUNGATARANGA

ಶಿವಮೊಗ್ಗದ ಗಲ್ಲಿಗಲ್ಲಿಯಲ್ಲೂ ಶ್ರೀರಾಮ ಭಕ್ತಿಯ ಪರಾಕಾಷ್ಠೆ | ಸಿಹಿ ಹಂಚಿ ಸಂಭ್ರಮಿಸಿದ ಜನರು | ಶಿವಮೊಗ್ಗದಲ್ಲಿ ಕೆಲ ಸಮಯ ಗೊಂದಲಮಯ



ಶಿವಮೊಗ್ಗ, ಜ.೨೨:
ನಗರದ ಎಲ್ಲೆಡೆ ಇಂದು ಬೆಳಗ್ಗಿ ನಿಂದಲೇ ಆಯೋಧ್ಯೆಯಲ್ಲಿ ರಾಮಮಂದಿ ರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.


ನಗರದ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಬಹುತೇಕ ದೇವಾಲಯಗಳಲ್ಲಿ ರಾಮತಾರಕ ಹವನ, ಜಪಯಜ್ಞ ಮತ್ತು ಕಲಾವಿದರಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕ ಸಂಘ

ಸಂಸ್ಥೆಗಳು, ಬೀದಿ ಬೀದಿ ಗಳಲ್ಲಿ ಕೇಸರಿ ಬಾವುಟಗಳನ್ನು ಹಾರಿಸಿ, ಬೃಹತ್ ರಾಮಲಲ್ಲಾನ ಕಟ್ಟೌಟ್‌ಗಳನ್ನು ಸ್ಥಾಪಿಸಿ ಬೆಳಿಗ್ಗೆಯಿಂದಲೇ ಸಾರ್ವಜನಿಕರಿಗೆ ಪಾನಕ ಕೋಸಂಬರಿ ಮತ್ತು ಉಪಾಹಾ ರವನ್ನು ವಿತರಿಸಿದರು.


ಎಲ್ಲಾ ದೇವಾಲಯಗಳಲ್ಲೂ ಭಕ್ತರ ದಂಡು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ೧೦ಕ್ಕೂ ಹೆಚ್ಚು ಕಡೆ ಆಯೋ ಧ್ಯೆಯ ನೇರಪ್ರಸಾರ ವೀಕ್ಷಿಸಲು ಎಲ್‌ಇಡಿ ಯನ್ನು

ಅಳವಡಿಸಲಾಗಿತ್ತು. ಅನೇಕ ಪೋಷ ಕರು ತಮ್ಮ ಮಕ್ಕಳಿಗೆ ಶಾಲೆಗೆ ಕಳಿಸದೇ ರಾಮ, ಲಕ್ಷ್ಮಣ ಸೀತೆಯ ಪೋಷಾ ಕುಗಳನ್ನು ಹಾಕಿ, ದೇವಾಲಯಗಳಿಗೆ ಕರೆದುಕೊಂಡು ಬಂದರು.


ಎಲ್ಲೆಡೆ ರಾಮ ಭಜನೆ ಹಮ್ಮಿಕೊಳ್ಳಲಾ ಗಿತ್ತು. ಜಯನಗರ ರಾಮಮಂದಿರದಲ್ಲಿ ಶ್ರೀ ರಾಮ ದೇವರಿಗೆ ಬೆಳ್ಳಿಯ ಕಿರೀಟವನ್ನು ಅರ್ಪಿಸಲಾಯಿತು. ಅನೇಕ ಆಟೋ ನಿಲ್ದಾಣಗಳಲ್ಲಿ ಆಟೋ ಚಾಲಕರ ಸಂಘ ಉಪಾಹರ ಹಂಚಿಕೆ ನಡೆದಿತ್ತು. ರಂಗೋಲಿ, ಹೂವಿನ ಅಲಂಕಾರ,

ಸಿಹಿ ಹಂಚಿಕೆ ಹಮ್ಮಿಕೊಳ್ಳಲಾಗಿತ್ತು. ರಾಮಲಲ್ಲಾನ ಪ್ರತಿಷ್ಠಾ ಮಹೋತ್ಸವ ಜನರಲ್ಲಿ ಉತ್ಸಹ ತಂದಿತ್ತು. ಎಲ್ಲೆಡೆ ಹಬ್ಬದ ವಾತಾವರಣ ಕಾಣುತ್ತಿತ್ತು. ಯುವಕರು ಕೇಸರಿ ಧ್ವಜ ನೆಟ್ಟು, ಬೈಕಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ರ‍್ಯಾಲಿ ನಡೆಸಿದರು.

Exit mobile version