Site icon TUNGATARANGA

ರಸ್ತೆಯನ್ನೇ ಬಂದ್ ಮಾಡಿ ಪಾರ್ಕಿಂಗ್ ಮಾಡಿಕೊಂಡ ಸ್ಬೂಡಾ/ ಬುದ್ದಿ ಹೇಳಬೇಕಾದವರೇ ತಪ್ಪು ಮಾಡಿದ್ರೆ ಹೆಂಗೇ..?!


ಶಿವಮೊಗ್ಗ, ಜ.21:
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಈ ಎರಡೂ ನಗರಗಳ ಅಭಿವೃದ್ಧಿಗೆ ಹಾಗೂ ಜಾಗದ ಅಳತೆಯ ಕಾನೂನು ಚೌಕಟ್ಟಿನ ನಿಲುವುಗಳಿಗೆ ಬದ್ಧವಾಗಿ ಕೆಲಸ ಮಾಡಬೇಕು ಎಂಬುದು ಸತ್ಯ. ಯಾವುದೇ ನಿವೇಶನ ಮನೆ ಮೊದಲಾದ ಅಳತೆಗಳನ್ನು ಅತ್ಯಂತ ನೀಟಾಗಿ ನೋಡುವ ಜವಾಬ್ದಾರಿಯನ್ನು ಹೊತ್ತಿರುವ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ತನ್ನ ಕಚೇರಿಯ ಜಾಗದಲ್ಲಿನ ರಸ್ತೆಯನ್ನೇ ಬಂದ್ ಮಾಡುವ ಮೂಲಕ ತನ್ನ ಕಚೇರಿಯ ವಾಹನಗಳು ನಿಂತುಕೊಳ್ಳಲು ಪಾರ್ಕಿಂಗ್ ಮಾಡಿಕೊಂಡಿರುವುದು ನಾಗರಿಕ ವಲಯದಲ್ಲಿ ಸಾರ್ವಜನಿಕ ವಲಯದಲ್ಲಿ ಹೆಚ್ಚು ಆಕ್ರೋಶಕ್ಕೆ ತುತ್ತಾಗಿದೆ.


ಶಿವಮೊಗ್ಗ ಪೊಲೀಸ್ ಚೌಕಿ ಬಳಿಯಲ್ಲಿರುವ ಸೂಡಾದ (ನಗರಾಭಿವೃದ್ಧಿ ಪ್ರಾಧಿಕಾರ) ಮುಖ್ಯ ಬಾಗಿಲ ಮುಂದಿನ ರಸ್ತೆಗೆ ಕಬ್ಬಿಣದ ಪಟ್ಟಿ ಕಟ್ಟಿ ಇಡೀ ರಸ್ತೆಯನ್ನು ದಾಟದಂತೆ ಮಾಡಿ ವಾಹನಗಳನ್ನು ನಿಲ್ಲಿಸಿಕೊಳ್ಳಲು ರಸ್ತೆಯಲ್ಲೇ ಪಾರ್ಕಿಂಗ್ ಮಾಡಿಕೊಂಡಿದ್ದು ಜನರು ಇದನ್ನು ವಿರೋಧಿಸಿದ್ದಾರೆ.
ಇತ್ತ ಜನರ ಆಕ್ರೋಶವನ್ನು ಸೂಡಾ ಗಮನಿಸದಂತೆ ಆಟ ಆಡುತ್ತಿದೆ. ರಸ್ತೆಯಲ್ಲಿ ಪಾರ್ಕಿಂಗ್ ಮಾಡಿಕೊಂಡರೆ ಓಡಾಡುವುದಾದರೂ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಜನರಿಗೆ ಬುದ್ಧಿ ಹೇಳಿ ತಿದ್ದಿ ಕೇಳಬೇಕಾದ ಇಲಾಖೆಯೇ ಇಂತಹ ಕೆಲಸ ಮಾಡಿದರೆ ಜನ ಸುಮ್ಮನಿರುತ್ತಾರಾ? ಅವರುಗಳು ಸಹ ಅವರ ಮನೆಯ ಮುಂದಿನ ರಸ್ತೆಗೆ ಬೇಲಿ ಹಾಕಿಕೊಂಡರೆ ಏನು ಮಾಡುತ್ತೀರಿ ಎಂಬುದು ಸಾರ್ವಜನಿಕ ವಲಯದ ಪ್ರಶ್ನೆ.

Exit mobile version