Site icon TUNGATARANGA

ಕಾಂತರಾಜ್ ವರದಿ ತಕ್ಷಣ  ಜಾರಿ ಮಾಡಲು / ಕರ್ನಾಟಕ ದಲಿತ ಸಂಘರ್ಷ  ಸಮಿತಿ ಅಗ್ರಹ

ಶಿವಮೊಗ್ಗ:  ಸರ್ಕಾರವು  ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ  ಕಾಂತರಾಜ್ ವರದಿಯನ್ನು ತತಕ್ಷಣ  ಜಾರಿ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ  ಸಮಿತಿ ಆಗ್ರಹಿಸಿದೆ.

ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ  ಸಮಿತಿಯ ಜಿಲ್ಲಾ ಸಂಚಾಲಕ ಹರಮಘಟ್ಟ ರಂಗಪ್ಪ,  ಕಾಂತರಾಜ ವರದಿ ಜಾರಿ ವಿಳಂಬ ಸಲ್ಲದು. ಕೆಲವರ ಒತ್ತಡದ ಹಿನ್ನೆಲೆಯಲ್ಲಿ ಅದು ಜಾರಿ ಆಗಿಲ್ಲ.  ಆದರೆ ಬಹುಜನರಿಗೆ ಉಪಯೋಗವಾಗುವ ಈ ಸಮೀಕ್ಷೆ ಕೂಡಲೆ ಜಾಯಾಗಬೇಕೆಂದರು.

 ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಿಟ್ಟಿದ್ದ ಸುಮಾರು 38 ಸಾವಿರ ಕೋಟಿ ರೂಪಾಯಿಗಳಲ್ಲಿ ಸರ್ಕಾರವು ತನ್ನ 5 ಗ್ಯಾರೆಂಟಿಗಳನ್ನು ಈಡೇರಿಸಿಕೊಳ್ಳಲು ಮೀಸಲಿಟ್ಟಿದ್ದ ಅನುದಾನದಲ್ಲಿ ಸುಮಾರು 11 ಲಕ್ಷ ರೂಪಾಯಿಗಳನ್ನು ಬಳಕೆ ಮಾಡಿಕೊಂಡಿದೆ.  ತತಕ್ಷಣವೇ ನಿಲ್ಲಿಸಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಬಳಸುವಂತೆ ಆಗ್ರಹಿಸಿದರು.

 ರಾಜ್ಯದಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ಸುಮಾರು ವರ್ಷಗಳ ಕಾಲ ಭರ್ತಿ ಮಾಡಿಲ್ಲ.  ಇದನ್ನು  ತಕ್ಷಣವೇ ಭರ್ತಿ ಮಾಡಬೇಕು.  ಸದಾಶಿವ ಆಯೋಗದ ವರದಿಯ ವಿಚಾರದಲ್ಲಿ ಸರ್ಕಾರವು ತತಕ್ಷಣ ಎಚ್ಚೆತ್ತುಕೊಂಡು ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರದ ಹಲವು ಇಲಾಖೆಗಳಲ್ಲಿ ದಿನಗೂಲಿ ಹಾಗೂ ಹೊರಗುತ್ತಿಗೆ ನೌಕರರನ್ನು ನೇಮಕಾತಿಯನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

 ಬಗರ್ ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ನೀಡುವಾಗ ಪ.ಜಾತಿ/ ಪ. ಪಂಗಡದವರಿಗೆ ವಿಶೇಷ ಆದ್ಯತೆಯನ್ನು ನೀಡಿ ಶೇಕಡಾ 24 ರ ಅನುಪಾತದಲ್ಲಿ ಭೂ ಮಂಜೂರಾತಿ ಮಾಡಲು ಸರ್ಕಾರವು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ  ನೀಡಬೇಕು ಎಂದು   ಬೇಡಿಕೆಯನ್ನು  ಈಡೇರಿಸುವಂತೆ ಸರ್ಕಾರಕ್ಕೆ  ಹಲವು ಬಾರಿ ಮನವಿ ಮಾಡಿದರೂ  ಈಡೇರಿಸುವಲ್ಲಿ ವಿಫಲವಾಗಿದೆ ಎಂದರು.

ಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ  ಭರ್ಮಪ್ಪ ಅಂದಾಸುರ, ಜಿಲ್ಲಾ ಸಂಘಟನಾ ಸಂಚಾಲಕ ಡಿ.ಕೆ. ರಮೇಶ್, ಪರಶುರಾಮ, ಸದಾಶಿವ, ಮಹಿಳಾ ವಿಭಾಗದ ಅಧ್ಯಕ್ಷೆ  ಸುನೀತಾ ರಾಜ್ ಹಾಗೂ ಸಾಗರ ತಾಲ್ಲೂಕು ಸಂಚಾಲಕ ಹೊಸಕೊಪ್ಪ ರೇವಪ್ಪ ಹಾಗೂ ಇತರರು ಭಾಗವಹಿಸಿದ್ದರು.

Exit mobile version