Site icon TUNGATARANGA

ಜ. 25 ಮತ್ತು 26ರಂದು ಬೆಕ್ಕಿನಕಲ್ಮಠದ ಲಿಂಗೈಕ್ಯ  ಜಗದ್ಗುರು ಗುರುಬಸವ ಮಹಾಶಿವಯೋಗಿಗಳ 112ನೇ ಪುಣ್ಯ ಸ್ಮರಣೋತ್ಸವ

ಶಿವಮೊಗ್ಗ: ಬೆಕ್ಕಿನಕಲ್ಮಠದ  ಲಿಂಗೈಕ್ಯ  ಜಗದ್ಗುರು ಗುರುಬಸವ ಮಹಾಶಿವಯೋಗಿಗಳ 112ನೇ ಪುಣ್ಯ ಸ್ಮರಣೋತ್ಸವನ್ನು ಜನವರಿ 25 ಮತ್ತು 26ರಂದು ಬೆಕ್ಕಿನಕಲ್ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ  ಕಾರ್ಯಕ್ರಮದ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷೆ ಶೀಲಾ ಸುರೇಶ್,  ವೈವಿಧ್ಯಪೂರ್ಣವಾಗಿಯೂ, ಅರ್ಥಪೂರ್ಣವಾಗಿಯೂ ಆಚರಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿದೆ ಎಂದರು.

25ರ ಬೆಳಗ್ಗೆ 10 ಗಂಟೆಗೆ  ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಮತ್ತು ವಿವಿಧ ಸಾಂಸ್ಕøತಿಕ ಸ್ಪರ್ಧೆಗಳು (ಶಿವಾರ್ಪಣಂ ಶಿವ ಭಜನಾ ಸ್ಪರ್ಧೆ, ಪುರುಷರು + ಮಹಿಳೆಯರಿಗೆ ಆಟೋಟ ಸ್ಪರ್ಧೆ) ಸಂಜೆ 4  ಗಂಟೆಗೆ ಮಹಿಳೆಯರಿಗೆ ವೇಷಭೂಷಣ ಸ್ಪರ್ಧೆ, 111 ಜನ ಮಹಿಳೆಯರಿಂದ ವಚನಗಾಯನ ಸಂಜೆ 5  ಗಂಟೆಗೆ ಶರಣ ಸಾಹಿತ್ಯ ಸಮ್ಮೇಳನ, 532ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಅಲ್ಲಮ ಪ್ರಭು ಪ್ರಶಸ್ತಿ ಮತ್ತು ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

ಜ.  26 ರ ಶುಕ್ರವಾರ ಬೆಳಿಗ್ಗೆ 7  ಗಂಟೆಗೆ ಸಾಮೂಹಿಕ ವಿಶೇಷ ಪೂಜೆ , ಬೆಳಿಗ್ಗೆ 10ಕ್ಕೆ ಪೂಜ್ಯರ ಶೂನ್ಯ ಪೀಠಾರೋಹಣ,  ಗುರುಬಸವ ಮಹಾಸ್ವಾಮಿಗಳ 112ನೇ ಸ್ಮರಣೆಗಾಗಿ ಆನ್‍ಲೈನ್ ಪ್ರಶೋತ್ತರ ಸ್ಪರ್ಧೆ ಸಂಜೆ 4 ಗಂಟೆಗೆ 111 ಜನ ಮಹಿಳೆಯರಿಂದ ಭಾವೈಕ್ಯ ಗೀತೆ ಸಂಜೆ 5ಗಂಟೆಗೆ ಭಾವೈಕ್ಯ ಸಮ್ಮೇಳನ ಹಾಗೂ ಗುರುಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಮಾಹಿತಿ ನೀಡಿದರು.

 ಬೆಕ್ಕಿನಕಲ್ಮಠ ಸ್ಥಾಪಕರಾದ ಪರಮ ತಪಸ್ವಿ, ಪರಮಪೂಜ್ಯ ಲಿಂಗೈಕ್ಯ ಜಗದ್ಗುರು  ಗುರುಬಸವ ಮಹಾಶಿವಯೋಗಿಗಳವರ ಹೆಸರು  ಈ ಭಾಗದ ಜನತೆಯ ಮನ ಮಂದಿರದಲ್ಲಿ ಇಂದಿಗೂ ಚೈತನ್ಯದಾಯಕ ಬೆಳಗುವ ಆಶಾಕಿರಣವಾಗಿದೆ.  ಈ ಪ್ರಾಂತದ ಸಮಾಜೋಧಾರ್ಮಿಕ ಶಿಕ್ಷಣ ಕ್ಷೇತ್ರದ ಜನ ಕಲ್ಯಾಣ ಕಾರ್ಯ ಮಾಡಿದ ಕಾರಣಿಕ ಪುರುಷರೂ ಆಗಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಕಾರ್ಯಕ್ರಮದ ಸಂಘಟಕರಾದ ಇ. ವಿಶ್ವಾಸ್, ಮಹೇಶ್ವರಪ್ಪ, ಕಿರಣ್ ದೇಸಾಯಿ, ಶಾಂತಾ ನಂದ್, ಬಳ್ಳೆಕೆರೆ ಸಂತೋಷ್  ಮೊದಲಾದವರಿದ್ದರು.

………………………

Exit mobile version