Site icon TUNGATARANGA

ಶಿವಮೊಗ್ಗ ಗಾಂಧಿಬಜಾರ್ ಶಿವಪ್ಪ ನಾಯಕ ಸರ್ಕಲ್ ನಲ್ಲಿ ಯುವತಿಗೆ ಚಾಕು ಇರಿದ/ ಪ್ರೇಮ ವೈಪಲ್ಯ ಕಾರಣವೇ? ಈಗಷ್ಟೆ ನಡೆದ ಹಾಡೋನಹಳ್ಳಿ ಕಥೆಯಂತೆ!


ಶಿವಮೊಗ್ಗ, ಜ.16:
ಪ್ರೇಮಿಗಳು ಎನ್ನಲಾದ ಇಬ್ಬರು ಯುವಕ ಯುವತಿಯರ ಜಗಳ ಇಂದು ಮದ್ಯಾಹ್ನ ಈಗಷ್ಟೆ ಶಿವಮೊಗ್ಗ ಜನನಿಬಿಡ ಶಿವಪ್ಪ ನಾಯಕ ಸರ್ಕಲ್ ಬಳಿ ನಡೆದಿದ್ದು, ಯುವಕ ಯುವತಿಗೆ ಚಾಕುನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿರುವ ಘಟನೆ ನಡೆದಿದೆ.


ಶಿವಮೊಗ್ಗ ಹೊರವಲಯದ ಹೊಳಲೂರು ಸಮೀಪದ ಹಾಡೋನಹಳ್ಳಿಯ ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಯುವಕ ಶಿವಮೊಗ್ಗ ಆಟೋ ಕಾಂಪ್ಲೆಕ್ಸ್ ನಲ್ಲಿ ವರ್ಕ್ ಶಾಪ್ ಒಂದರ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಇಂದು ಮಧ್ಯಾಹ್ನ 2.32 ಹೊತ್ತಿಗೆ ಈ ಘಟನೆ ನಡೆದಿದ್ದು ಅದೇ ಗ್ರಾಮದ ಯುವತಿಗೆ ಚಾಕುಯಿಂದ ಹಿಡಿದು ಓಡಿ ಹೋಗಿದ್ದಾನೆ.
ಸಾರ್ವಜನಿಕರು ಆತನನ್ನು ಹಿಡಿದಿದ್ದು ಕೋಟೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಯುವತಿಯ ಈಗಿನ ಸ್ಥಿತಿ ಗೊತ್ತಾಗಿಲ್ಲ. ಆಕೆ ಸಹ ಮನೆಯಲ್ಲಿಯೇ ಇರುತ್ತಿದ್ದಳು ಎನ್ನಲಾಗಿದ್ದು, ಪ್ರೀತಿಗೆ ಎರಡು ಮನೆಯವರು ಒಪ್ಪಿಕೊಂಡಿಲ್ಲ ಎನ್ನುವುದು ಒಂದು ಕಡೆಯ ನಿಲುವಾದರೆ ಮತ್ತೊಂದು ಕಡೆ ಯುವತಿ ಯುವಕನ ಬಗ್ಗೆ ಅಸಮಾಧಾನ ಹಾಗೂ ಆಕ್ರೋಶ ಹೊಂದಿದ್ದಳು ಎನ್ನವಾಗಿದೆ.


ಎಲ್ಲ ಸುದ್ದಿಯ ಸತ್ಯಾಂಶ ಹೊರಬರಲು ಒಂದಿಷ್ಟು ಮಾಹಿತಿಗೆ ಕಾಯಬೇಕಾದ ಅನಿವಾರ್ಯತೆ ಇದೆ. ನಂತರದ ಮಾಹಿತಿ ಸಿಕ್ಕಾಕ್ಷಣ ನಿಮ್ಮ ಮುಂದೆ ಮಾಹಿತಿ ಇರುತ್ತೆ.

Exit mobile version