Site icon TUNGATARANGA

ನಾಳೆ ಮೆಸ್ಕಾಂನ ವಿದ್ಯುತ್ ಭವನ ಎದುರು ಅನಿರ್ಧಿಷ್ಟಾವಧಿ ಧರಣಿ

ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಸರ್ಕಾರಿ ಯೋಜನೆಗಳ ಸಣ್ಣ ಸಣ್ಣ ವಿದ್ಯುತ್ ಕಾಮಗಾರಿಗಳ ಕಾರ್ಯಾದೇಶಗಳನ್ನು ಕ್ರೋಢಿಕರಿಸಿ ಬೃಹತ್ ಮಟ್ಟದ ದರ ಒಪ್ಪಂದ ಮತ್ತು ಟೆಂಡರ್ ಕರೆದಿರುವ ಮೆಸ್ಕಾಂ ವಿರುದ್ಧ ಜ.೧೭ರಿಂದ ಬಿ.ಹೆಚ್.ರಸ್ತೆಯಲ್ಲಿರುವ ಮೆಸ್ಕಾಂನ ವಿದ್ಯುತ್ ಭವನ ಎದುರು

ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಸದಸ್ಯ ಮಹಾಲಿಂಗೇ ಗೌಡ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಾದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರು ಹಾಗೂ ಈ ಕೆಲಸವನ್ನೇ ನಂಬಿಕೊಂಡು ಸುಮಾರು ೧೫ ಸಾವಿರ ಕೂಲಿ ಕಾರ್ಮಿಕರು ಈ ಮೆಸ್ಕಾಂನ ನಿರ್ಧಾರದಿಂದ ಬೀದಿಗೆ ಬೀಳುವ ಸಮಸ್ಯೆ ಬಂದಿದೆ ಎಂದರು.
ಅಕ್ರಮ-ಸಕ್ರಮ, ಗಂಗಾ ಕಲ್ಯಾಣ, ಕುಡಿಯುವ ನೀರಿನ ಯೋಜನೆ, ರೀಕಂಡಕ್ಟರಿಂಗ್ ಲಿಂಕ್ ಲೈನ್ ಹಾಗೂ ಮುಂದಿರುವ ಕಂಬಗಳ ಕಾಮಗಾರಿಗಳನ್ನು ಕ್ರೂಢಿಕರಿಸಿ ಈಗಾಗಲೇ ಕರೆದಿರುವ ಬೃಹತ್ ಮಟ್ಟದ ದರ ಒಪ್ಪಂದ, ಟೆಂಡರ್‌ಗಳನ್ನು ರದ್ದುಪಡಿ ಸಬೇಕು. ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಟೆಂಡರ್ ಕರೆದಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.


ಶೇ.೫ ಮೇಲ್ವಿಚಾರಣ ಶುಲ್ಕ ಸರ್ಕಾರದ ಆದೇಶ ವಿದ್ದು ಹಿಂದಿನ ಶೇ.೧೦ ಮೇಲ್ವಿಚಾರಣ ಪಾವತಿಸಲು ವಿದ್ಯುತ್ ಮಂಜೂರಾಗಿ ನೀಡಿರುವುದರ ವಿರುದ್ಧ, ನೀರಾವರಿ ಪಂಪ್ ಸೆಟ್‌ಗಳಿಗೆ ಸ್ವಯಂ ಆರ್ಥಿಕ ಯೋಜನೆಯಡಿಯಲ್ಲಿ ಮಾಡುವ ಕಾಮಗಾರಿಗಳ ವಿದ್ಯುತ್ ಮಂಜೂರಾತಿಗಳನ್ನು ವಿದ್ಯುತ್ ಜಾಲದಿಂದ ೫೦೦ ಮೀಟರ್ ಒಳಗಿನ ಮಿತಿ ವಿರುದ್ಧ, ಹಾಗೂ ಮಲೆನಾಡು ಪ್ರದೇಶವಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸೌರೀಕರಣ ಮಾಡುವು ದರಿಂದ ಯಶಸ್ಸು ಕಷ್ಟಕರ ಆದ್ದರಿಂದ ಆಯ್ಕೆ ಪ್ರಕ್ರಿಯೆಯಿಂದ ಕಂಪನಿ ವಿದ್ಯುತ್ ಜಾಲದಿಂದ ವಿದ್ಯುತ್ ಸಂರ್ಪ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಕುಮಾರ್, ಎನ್. ವಿಜಯ್‌ಕುಮಾರ್, ಶಶಿಕಾಂತ್ ಇದ್ದರು.೧

Exit mobile version