ಶಿವಮೊಗ್ಗ, ಜ.೧೬:
ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಏಕವಚನದಲ್ಲಿ ನಿಂದಿಸಿದ್ದು ಹಾಗೂ ಕೋಮು ಸಂಘಷಕ್ಕೆ ಪ್ರಚೋದನೆ ಹೇಳಿಕೆ ನೀಡಿರುವ ಸಂಸದ ಅನಂತ್‌ಕುಮಾರ್ ಹೆಗಡೆಯವರನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ವಿರುದ್ಧ ಕ್ರಿಮಿನಲ್ ಮೊಕ ದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಮಹಾವೀರ ವೃತ್ತದಲ್ಲಿ ಅನಂತ್ ಕುಮಾರ್ ಹೆಗಡೆಯವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಭವನದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಾಲರಾಜ್ ರಸ್ತೆ ಮೂಲಕ ಮಹಾವೀರ ವೃತ್ತ ತಲುಪಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ಸಿ.ಎಂ.ಸಿದ್ದ ರಾಮಯ್ಯ ಮುಂದೆ ಸಂಸದ ಅನಂತ್ ಕುಮಾರ್ ಹೆಗಡೆ ಬಚ್ಚ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮನಸ್ಸು ಮಾಡಿದರೆ, ಅವರು ಓಡಾಡಲು ಆಗುವುದಿಲ್ಲ. ಪ್ರಚೋದನಾತ್ಮಕ ಹೇಳಿಕೆ ನೀಡುತ್ತಾ ಜನರಲ್ಲಿ ಹಿಂಸ ಪ್ರವೃತ್ತಿಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರ ಕುಟುಂಬಸ್ಥರಾಗಲಿ, ಅವರಾಗಲಿ ಅಥವಾ ಈಶ್ವರಪ್ಪನವರ ಕುಟುಂಬದವರಾಗಲಿ ಎಂದು ಹೋರಾಟಕ್ಕೆ ಇಳಿದವರಲ್ಲ. ದಲಿತ ಹಿಂದು ಳಿದ ಯುವಕರ ಕೈಯಲ್ಲಿ ಮಚ್ಚು ಲಾಂಗು ಹಿಡಿಯುವಂತೆ ಪ್ರಚೋದಿಸಿ ಅವರ ಹತ್ಯೆ ಆದರೆ, ಅದರ ರಾಜಕೀಯ ಲಾಭಪಡೆಯುವ ದುರುದ್ದೇಶ ಅವರ ಹೇಳಿಕೆಯಲ್ಲಿ ಸ್ಪಷ್ಟವಾ ಗುತ್ತದೆ. ರಾಮ ಎಲ್ಲರಿಗೂ ಸೇರಿದವನು, ನಾವು ಕೂಡ ರಾಮನ ಭಕ್ತರೇ, ಆದರೆ, ಬಿಜೆಪಿಯವರ ಹಾಗೇ ಡೂಬ್ಲಿಕೇಟ್ ಭಕ್ತರಲ್ಲ ಎಂದರು.
ಶಂಕರ ಪೀಠದ ನಾಲ್ಕು ಶ್ರೀಗಳು ಪ್ರತಿಷ್ಠಾ ಪನೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಖಂಡನೆ ವ್ಯಕ್ತ ಪಡಿಸಿದ್ದಾರೆ. ಸಾಧು ಸಂತರಿಂದ ಆಗಬೇಕಾದ ರಾಮಲಲ್ಲಾನ ಪ್ರತಿಷ್ಠಾಪನೆ ಮೋದಿಯ ವರಿಂದ ಮಾಡಿ, ಧಾರ್ಮಿಕ ವ್ಯವಸ್ಥೆಗೆ ಅಪ ಚಾರ ಎಸಗುತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಮುಂದೆ ಅನಾಹುತಗಳು ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿದ್ದರು, ಶಾಸ್ತ್ರೋಕ್ತವಾಗಿ ದೇವಾಲಯ ಸಂಪೂರ್ಣಗೊಂಡ ಮೇಲೆ ಪ್ರತಿಷ್ಠಾಪನೆ ಮಾಡಬೇಕಿತ್ತು. ಆದರೆ, ಮೋದಿಗಾಗಿ ತರಾತುರಿಯಲ್ಲಿ ಎಲ್ಲಾ ಧಾರ್ಮಿಕ ನಿಯಮಗಳನ್ನು ಗಾಳಿಗೆ ತೂರಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ವಾಸ್ತವವಾಗಿ ಬೀಗ ಮುದ್ರೆಯಲ್ಲಿದ್ದ ಮೂಲ ವಿಗ್ರಹದ ಬಾಗಿಲನ್ನು ತೆರೆದು ಪೂಜೆಗೆ ಅವಕಾಶ ನೀಡಿದ್ದೇ ಕಾಂಗ್ರೆಸ್ ಪಕ್ಷ. ನಿಜವಾಗಿ ಏನಾದರು, ರಾಮಮಂದಿರದ ಕ್ರೆಡಿಟ್ ಕಾಂಗ್ರೆಸ್‌ಗೆ ಸೇರಬೇಕು. ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜಾತಿ, ಧರ್ಮಗಳಲ್ಲಿ ವಿಷ ಬೀಜ ಬಿತ್ತಿ ಸಮಾಜದಲ್ಲಿ ಸಾಮರಸ್ಯವನ್ನು ಕೆಡಿಸಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎನ್.ರಮೇಶ್, ಎಸ್.ಪಿ.ಶೇಷಾದ್ರಿ, ಎಸ್.ಟಿ. ಚಂದ್ರಶೇಖರ್,
ಚಂದ್ರಭೂಪಾಲ್, ಕೆ.ರಂಗನಾಥ್, ಕಲೀಂ ಪಾಶ, ಶಿವಕುಮಾರ್, ಜಿ.ಡಿ.ಮಂಜುನಾಥ್, ಹೆಚ್.ಬಿ.ಗಿರೀಶ್, ವಿನೋದ್‌ಕುಮಾರ್, ಆಸೀಫ್, ಮಧು, ನಾಗರಾಜ್ ಕಂಕಾರಿ, ಪಾಲಾಕ್ಷಿ, ನಯಾಜ್ ಅಹಮದ್, ರವಿಕುಮಾರ್, ಸ್ಟೆಲ್ ಮಾರ್ಟಿನ್, ಸುವರ್ಣ ನಾಗರಾಜ್, ನಾಜೀಮಾ, ಪ್ರೇಮಾ, ಎನ್.ಡಿ. ಪ್ರವೀಣ್‌ಕುಮಾರ್ ಇನ್ನಿತರರು ಭಾಗವಹಿಸಿದ್ದರು.