Site icon TUNGATARANGA

ಯುವ ಸಮೂಹವೇ ಕಾಂಗ್ರೆಸ್‌ನತ್ತ ಚಲಿಸುತ್ತಿದೆ ಎಂಬುವುದಕ್ಕೆ ಯುವನಿಧಿ ಕಾರ್ಯಕ್ರಮವೇ ಸಾಕ್ಷಿ: ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್

ಶಿವಮೊಗ್ಗ,ಜ.೧೩: ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸಿದ ಅವರ ಬದುಕಿಗೆಗೆ ಭದ್ರತೆ ನೀಡುವ ಸರ್ಕಾರದ ಯುವನಿಧಿ ಯೋಜನೆಯ ಚಾಲನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಶಿವಮೊಗ್ಗದಲ್ಲಿ ಜರುಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.


ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸರ್ಕಾರದ ಸಚಿವರುಗಳು ಯುವನಿಧಿ ಕಾರ್ಯಕ್ರಮ ಚಾಲನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಫ್ರೀಡಂ ಪಾರ್ಕ್‌ನ ಬಹುದೊಡ್ಡ ಮೈದಾನ ತುಂಬಿತುಳುಕುತ್ತಿತ್ತು. ಯುವಕರ ಜನಸಾಗರವೇ ಹರಿದು ಬಂದಿತ್ತು.

ಇದೊಂದು ಅಚ್ಚುಕಟ್ಟಾದ ವ್ಯವಸ್ಥಿತ ಕಾರ್ಯಕ್ರಮವಾಗಿತ್ತು. ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಜನರು ಸೇರಿದ ದೊಡ್ಡ ಕಾರ್ಯಕ್ರಮ ಇದಾಗಿದೆ. ಅದರಲ್ಲೂ ವಿವೇಕಾನಂದ ಜಯಂತಿಯ ದಿನವೇ ಈ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು ಹೆಮ್ಮೆ ಎಂದರು.


ವಿರೋಧಿಗಳಿಗೆ ಈ ಕಾರ್ಯಕ್ರಮ ಕಂಡು ತಳಮಳ ಉಂಟಾಗಿದೆ. ಕಾರ್ಯಕ್ರಮ ಅಚ್ಚುಕಟ್ಟಾಗಿದ್ದರು, ದೋಷ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಊಹೆಯೇ ಇರಲಿಲ್ಲ. ಯುವಕರು ಇಷ್ಟೊಂದು ಜನ ಸೇರುತ್ತಾರೆ ಎಂದು. ಯುವ ಸಮೂಹವೇ ಕಾಂಗ್ರೆಸ್‌ನತ್ತ ಚಲಿಸುತ್ತಿದೆ ಎಂಬುವುದಕ್ಕೆ ಯುವನಿಧಿ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಅವರು ಅಪಾಧನೆಗಳನ್ನು ಮಾಡುತ್ತಲೇ ಇರಲಿ, ನಾವು ಸಾಧನೆಯನ್ನು ಮಾಡುತ್ತಲೆ ಹೋಗುತ್ತೇವೆ ಎಂದರು.


ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣಕ್ಕೆ ಯಾವ ಅಧಿಕೃತ ಹೆಸರು ಇರಲಿಲ್ಲ. ಈಗ ಮುಖ್ಯಮಂತ್ರಿಗಳು ಸಚಿವ ಮಧುಬಂಗಾರಪ್ಪನವರ ಸಲಹೆ ಮೇರೆಗೆ ೧೨ನೇ ಶತಮಾನದ ವಿಶ್ವಗುರು ಬಸವಣ್ಣನವರ ಸ್ಥಾಪಿಸಲ್ಪಟ್ಟ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭು ಅವರ ಹೆಸರನ್ನು ಇಡಲು ಒಪ್ಪಿದ್ದಾರೆ. ಇದು ಅತ್ಯಂತ ಸ್ವಾಗತರ್ಹವಾಗಿದೆ. ಅಲ್ಲಮಪ್ರಭು ಪ್ರಜಾಪ್ರಭುತ್ವದ ರುವಾರಿ ಮತ್ತು ಅನುಭವಮಂಟಪದ ಪ್ರತಿರೂಪವಾಗಿಯೇ ಇಂದು ಸಂಸತ್‌ನ ಪರಿಕಲ್ಪನೆ ಬಂದಿದೆ. ಅಂತಹ ಮಹಾಶರಣರ ಹೆಸರನ್ನು ಇಡಲು ಮೊದಲು ಸೂಚಿಸಿದವರೇ ಸುತ್ತೂರು ಜಗದ್ಗುರುಗಳು. ಅದಕ್ಕೆ ಎಲ್ಲಾ ಮಠಾಧೀಶ್ವರರು ಒಪ್ಪಿದ್ದರೂ. ಈಗ ಶಾಸಕ ಎಸ್.ಎನ್. ಚನ್ನಬಸಪ್ಪ ಅದೇಕೆ ವ್ಯತಿರಿಕ್ತ ಹೇಳಿಕೆ ನೀಡದ್ದಾರೋ ಗೊತ್ತಿಲ್ಲ. ಆದರೆ, ಸಂಸದರೇ ಇದಕ್ಕೆ ಒಪ್ಪಿದ್ದಾರೆ ಎಂದರು.


ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ರಮೇಶ್ ಮಾತನಾಡಿ, ಸರ್ಕಾರದ ಎಲ್ಲಾ ಗ್ಯಾರಂಟಿಗಳು ಈಗ ಚಾಲ್ತಿಯಲ್ಲಿವೆ. ಈ ಬಗ್ಗೆ ಕೆಲವರು ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಅವರಿಗೆ ಕಾಂಗ್ರೆಸ್ ಸರ್ಕಾರ ಏಳಿಗೆ ಕಂಡು ಸಹಿಸಲಾಗುತ್ತಿಲ್ಲ, ಹೊಟ್ಟೆಉರಿದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ರಾಹುಲ್‌ಗಾಂಧಿಯವರು ಈ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಪಾದಯಾತ್ರೆ ಮಾಡಿದ್ದರು, ಈಗ ಭಾರತ್ ನ್ಯಾಯ್ ಯಾತ್ರೆ ಹೆಸರಿನಲ್ಲಿ ನಾಳಿಯಿಂದ ಮಣಿಪುರದಿಂದ ಮಹಾರಾಷ್ಟ್ರದವರೆಗೆ ಸುಮಾರು ೬,೬೦೦ಕಿ.ಮೀ. ಪಾದಯಾತ್ರೆ ಮಾಡಲಿದ್ದಾರೆ. ಇದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಶುಭಕೋರುತ್ತದೆ ಮತ್ತು ಸ್ವಾಗತಿಸುತ್ತದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್, ಪ್ರಮುಖರಾದ ಪದ್ಮನಾಭ್, ಹಿರಣ್ಣಯ್ಯ, ವೈ.ಬಿ.ಚಂದ್ರಕಾಂತ್, ಶಿ.ಜು.ಪಾಶ ಸೇರಿದಂತೆ ಹಲವರಿದ್ದರು.

Exit mobile version