Site icon TUNGATARANGA

ಜ.14 ರಂದು ಬೆಜ್ಜವಳ್ಳಿಯಲ್ಲಿ ಮಕರಸಂಕ್ರಾಂತಿ ಉತ್ಸವ


ಶಿವಮೊಗ್ಗ,ಜ.೧೩: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಧಾರ್ಮಿಕ ದತ್ತಿ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಜ.೧೪ ಭಾನುವಾರದಂದು ಮಕರ ಸಂಕ್ರಾಂತಿ ಮಹೋತ್ಸವ ಮತ್ತು ಶ್ರೀಗಳ ಪೀಠಾರೋಣದ ವರ್ಧಂತ್ಯೋತ್ಸವ ಸಮಾರಂಭ ನಡೆಯಲಿದೆ.


ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯಕಾಲದಲ್ಲಿ ಪ್ರಾಂತಕಾಲದಿಂದ ಶ್ರೀ ಸನ್ನಿಧಾನದಲ್ಲಿ ಶ್ರೀಗಣಪತಿ ಪೂಜೆಯೊಂದಿಗೆ ಹೋಮ, ಹವನ, ಕಲಶ ಸ್ಥಾಪನೆಯೊಂದಿಗೆ ಮಕರ ಸಂಕ್ರಾಂತಿ ಉತ್ಸವ ಮತ್ತು ವಿದ್ಯಾವಾಚಸ್ಪತಿ ಶ್ರೀ ಡಾ.ವಿಶ್ವಸಂತೋಷ ಭಾರತಿ ಶ್ರೀಪಾದಂಗಳವರ ಪೀಠಾರೋಹಣದ ವರ್ಧಂತ್ಯೋತ್ಸವ ನಡೆಯಲಿದೆ. ಬೆಳಿಗ್ಗೆ ೬ಕ್ಕೆ ಪ್ರಾರ್ಥನೆ, ಧರ್ಮಶಾಸ್ತನ ಅನುಜ್ಞೆ, ಮಹಾಗಣಪತಿ ಪೂಜೆ, ಪುಣ್ಯಹ,

ದೇವಾನಾಂಧಿ,ಋತ್ವಿಗ್ವರಣೆ, , ಮಹಾಗಣಪತಿ ಹೋಮ, ನವಗ್ರಹ ಸಹಿತ ದುರ್ಗ ಹೋಮ, ಅಷ್ಟೋತ್ತರ ಶತಕುಂಭ ಕಲಶಸ್ಥಾಪನೆ, ೯ಕ್ಕೆ ಹರಕೆ ತುಲಾಭಾರ ಸೇವೆ, ೧೦ಕ್ಕೆ ಬ್ರಹ್ಮಕಲಶ ಸ್ಥಾಪನೆ, ೧೦.೩೦ಕ್ಕೆ ಕ್ಷೇತ್ರ ಗಣಗಳ ದೈವದರ್ಶನ ದೇವರ ಬೀಡಿಗೆ ಆಗಮನ, ೧೧ಕ್ಕೆ ಬೀಡಿನಲ್ಲಿ ಶ್ರೀ ಆಭರಣ ಮತ್ತು ಆಯುಧಗಳ ಮಹಾಪೂಜೆ, ೧೧.೧೫ಕ್ಕೆ ಉತ್ಸವಮೂರ್ತಿಗೆ ಮಹಾಮಂಗಳರಾತಿ, ೧೧.೩೦ಕ್ಕೆ ಶ್ರೀಗಳಿಂದ ರಾಜಪಲಕ್ಕಿಯಲ್ಲಿ ಸ್ವಾಮಿಯ ಪಾದುಕೆ ಪೂಜೆ, ೧.೪೫ಕ್ಕೆ ಆಭರಣೋತ್ಸವ ಮತ್ತು ಪರಿವಾರ ದೈವಗಳೊಂದಿಗೆ ಸಂವಿಧಾನಕ್ಕೆ ಭವ್ಯ ಮೆರವಣಿಗೆ, ೧ಕ್ಕೆ ಅಯ್ಯಪ್ಪ ಸ್ವಾಮಿಯ ಉಯ್ಯಾಲೆ ಸೇವೆ, ೧.೧೫ಕ್ಕೆ ಕನಕಾಭಿಷೇಕ, ೧.೪೫ಕ್ಕೆ ಮಹಾಮಂಗಳರಾತಿ ನಡೆಯಲಿದೆ.


ವಿಶೇಷ ಕಾರ್ಯಕ್ರಮಗಳು: ೧೧ಕ್ಕೆ ಶ್ರೀಪೀಠದ ದರ್ಭಾರು, ದಿವ್ಯಸಾನಿಧ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು, ಶ್ರೀದತ್ತಾತ್ರೆಯ ವಿಷ್ಣುರಾವ್ ಶಿಂತ್ರೆ ಗುರುಸ್ವಾಮಿಗಳು, ಮಧ್ಯಾಹ್ನ ೨ಕ್ಕೆ ಮೆಕ್ಕೆಕಟ್ಟು ಮೇಳದವರಿಂದ ಶಬರಿಮಲೆ ಸ್ವಾಮಿ ಅಯ್ಯಪ್ಪ ಯಕ್ಷಗಾನ, ಸಂಜೆ ೬.೩೦ಕ್ಕೆ ಜ್ಯೋತಿ ಪೂಜೆ, ೭ಕ್ಕೆ ಅಡ್ಡಪಲ್ಲಕ್ಕಿ ಉತ್ಸವ, ೭.೩೦ಕ್ಕೆ ಪೊಲೀಸ್ ಪೂಜೆ, ೮.೩೦ಕ್ಕೆ ಹರಿವರಾವಸನಂ ಕಾರ್ಯಕ್ರಮ ನಡೆಯಲಿದ್ದು, ಭಕ್ತಾಧಿಗಳು ಎಂದಿನಂತೆ ಆಗಮಿಸಿ ಪಾಲ್ಗೊಳ್ಳಬೇಕು ಎಂದು ದೇವಳದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Exit mobile version