ಶಿವಮೊಗ್ಗ: ಇಲ್ಲಿನ ಜೈಲಿನಲ್ಲಿರುವ ವಿಚಾರಣಾ ಬಂದಧಿ ಗಣೇಶ ಬಿನ್ ವೆಂಕಟೇಶ ನಾಯ್ಕ ಈತನನ್ನು ಕಾಣಲು ಸಂದರ್ಶಕನಾಗಿ ಬಂದಿದ್ದ ಭದ್ರಾವತಿಯ ಆಟೋ ಡ್ರೈವರ್ ಮೊಹ್ಮದ್ ತಯೀಬ್ ತಂದೆ ಔರಂಗಜೇಬ್(22) ಎಂಬುವವನ ವಿರುದ್ಧ ತುಂಗಾನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಜೈಲಿಗೆ ಆತ ಹಿಡಿದುಕೊಂಡು ಬಂದಿದ್ದ ಪ್ಲಾಸ್ಟಿಕ್ ಕವರ್ ಗಳನ್ನು ಕ ಅಧಿಕಾರಿ ಮತ್ತು ಸಿಬ್ಬಂದಿಗಳು X-Ray ಬ್ಯಾಗೇಜ್ ಸ್ಕ್ಯಾನರ್ ನಲ್ಲಿ ಪರಿಶೀಲನೆ ನಡೆಸಿದ್ದಾಗ ಗಾಂಜಾ ಪತ್ತೆಯಾಗಿದೆ
ಪ್ಲಾಸ್ಟಿಕ್ ಕವರ್ ನಲ್ಲಿದ್ದ ಟೂತ್ ಪೇಸ್ಟ್ ಬಗ್ಗೆ ಅನುಮಾನ ಬಂದಾಗ
ಟೂತ್ ಪೆಟ್ಟು ತೆರೆದು ಪರಿಶೀಲಿಸಲಾಯಿತು. ಅದರಲ್ಲಿ 7 ಉದ್ದನೆಯ ಸ್ಟ್ರಾಗಳನ್ನು ಇಡಲಾಗಿತ್ತು. ಆ ಸ್ಟ್ರಾಗಳಲ್ಲಿ ಒಂದನ್ನು ಕತ್ತರಿಸಿ ನೋಡಿದಾಗ ಗಾಂಜಾ ಇರುವುದು ಕಂಡು ಬಂದಿದೆ. ಸಂದರ್ಶಕನು ಅಕ್ರಮವಾಗಿ ಕಾರಾಗೃಹದೊಳಗೆ ಟೂತ್ ಪೆಸ್ಟ್ ಮೂಲಕ ಗಾಂಜಾವನ್ನು ಸಾಗಿಸಲು ಪ್ರಯತ್ನಿಸಿದ್ದಾನೆ.
ಕಾರಾಗೃಹದಲ್ಲಿ ಟೂತ್ ಪೇಸ್ಟ್ ಮೂಲಕ ಖೈದಿಗೆ ಗಾಂಜಾ ಸಾಗಿಸಲು ಬಂದಿದ್ದ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.